For Quick Alerts
ALLOW NOTIFICATIONS  
For Daily Alerts
 

IPL 2023: ಆರ್‌ಸಿಬಿ ವಿರುದ್ಧ ಆಡ್ತಾರ ಜೇಸನ್ ರಾಯ್: ಕೆಕೆಆರ್ ಫ್ರಾಂಚೈಸಿ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮತ್ತೊಂದು ರೋಚಕ ಹಣಾಹಣಿ ಗುರುವಾರ (ಇಂದು) ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಲು ಸಜ್ಜಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಈ ಪಂದ್ಯ ನಡೆಯುತ್ತಿದ್ದು, ತವರಿನಲ್ಲಿ ನಡೆಯುವ ಮೊದಲನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ ಕೆಕೆಆರ್. ಮೊದಲನೇ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿರುವ ಆರ್ ಸಿಬಿ ಎರಡನೇ ಪಂದ್ಯವನ್ನು ಗೆಲ್ಲುವ ಲೆಕ್ಕಾಚಾರದಲ್ಲಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಅದ್ಯಾಕೋ ಕೆಕೆಆರ್ ತಂಡದ ಲೆಕ್ಕಚಾರಾಗಳೆಲ್ಲಾ ತಲೆಕೆಳಗಾಗಿವೆ. ಮೊದಲು ತಂಡದ ನಾಯಕ ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಹೊರಬಿದ್ದರೆ, ಪ್ರಮುಖ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಕೂಡ ಐಪಿಎಲ್‌ನಿಂದ ಹಿಂದೆ ಸರಿದರು. ಮತ್ತೊಬ್ಬ ಸ್ಫೋಟಕ ಬ್ಯಾಟರ್ ಲಿಟ್ಟನ್ ದಾಸ್ ಏಪ್ರಿಲ್ 8ರ ಬಳಿಕವಷ್ಟೇ ತಂಡವನ್ನು ಸೇರಿಕೊಳ್ಳಲಿದ್ದಾರೆ, ಇದರೆ ಜೊತೆಗೆ ಪ್ರಮುಖ ವೇಗಿ ಲಾಕಿ ಫರ್ಗ್ಯುಸನ್ ಕೂಡ ಗಾಯಗೊಂಡಿದ್ದು, ಹಲವು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ.

Jason Roy IPL

ಶಕೀಬ್ ಅಲ್ ಹಸನ್ ಐಪಿಎಲ್‌ನಿಂದ ಹಿಂದೆ ಸರಿದ ನಂತರ ಬದಲೀ ಆಟಗಾರನಾಗಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜೇಸನ್ ರಾಯ್ ಅವರನ್ನು ಕೆಕೆಆರ್ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಅತ್ಯುತ್ತಮ ಆರಂಭಿಕ ಬ್ಯಾಟರ್ ಆಗಿರುವ ಅವರು ಕೆಕೆಆರ್ ತಂಡಕ್ಕೆ ಉತ್ತಮ ಸೇರ್ಪಡೆ ಎನ್ನಲಾಗಿದೆ. ಇನ್ನು ಅವರು ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಆಡುತ್ತಾರಾ ಎನ್ನುವ ಪ್ರಶ್ನೆಗೆ ಫ್ರಾಂಚೈಸಿ ಉತ್ತರ ನೀಡಿದೆ.

ಇಂದಿನ ಪಂದ್ಯಕ್ಕೆ ಜೇಸನ್ ರಾಯ್ ಅಲಭ್ಯ

ಬುಧವಾರ ತಾನೆ ಅವರು ಕೆಕೆಆರ್ ತಂಡವನ್ನು ಸೇರಿಕೊಂಡಿದ್ದು, ಇಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರು ಇಂದಿನ ಪಂದ್ಯಕ್ಕೆ ಮುನ್ನ ಭಾರತಕ್ಕೆ ಬರುವುದು ಅನುಮಾನ ಎನ್ನಲಾಗಿದೆ. ಆದರೆ, ಕೆಕೆಆರ್ ತಂಡದ ಮುಂದಿನ ಪಂದ್ಯಕ್ಕೆ ಅವರು ಲಭ್ಯವಿರುತ್ತಾರೆ. ಭಾನುವಾರ ಕೆಕೆಆರ್ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಅಹಮದಾಬಾದ್‌ನಲ್ಲಿ ಆಡಲಿದ್ದು, ಅದಕ್ಕೂ ಮುನ್ನ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ.

ಜೇಸನ್ ರಾಯ್ 1.5 ಕೋಟಿ ರೂಪಾಯಿ ಮೂಲಬೆಲೆಗೆ ಐಪಿಎಲ್ ಮಿನಿ ಹರಾಜಿನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು. ಸದ್ಯ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕೆಕೆಆರ್ 2.8 ಕೋಟಿ ರುಪಾಯಿ ಪಾವತಿ ಮಾಡಿದೆ. ಶಕೀಬ್ ಅಲ್ ಹಸನ್ ಅವರನ್ನು ಮಿನಿ ಹರಾಜಿನಲ್ಲಿ 1.5 ಕೋಟಿ ರುಪಾಯಿ ನೀಡಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು.

Jason Roy

ಜೇಸನ್ ರಾಯ್ 2021ರ ಐಪಿಎಲ್‌ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. 2017 ಮತ್ತು 2018 ರಲ್ಲಿ ಕೂಡ ಅವರು ಐಪಿಎಲ್‌ನಲ್ಲಿ ಕಾನಿಸಿಕೊಂಡಿದ್ದರು. 2021ರಲ್ಲಿ ಐದು ಪಂದ್ಯಗಳಲ್ಲಿ ಆಡಿದ್ದ ಅವರು 150 ರನ್ ಗಳಿಸಿದ್ದರು. ಇಂಗ್ಲೆಂಡ್‌ಗಾಗಿ 64 ಟಿ20 ಪಂದ್ಯಗಳನ್ನಾಡಿರುವ ಜೇಸನ್ ರಾಯ್ 137.61 ಸ್ಟ್ರೈಕ್‌ರೇಟ್‌ನಲ್ಲಿ 1522 ರನ್ ಗಳಿಸಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಕೂಡ ಸೇರಿವೆ.

ಇತ್ತೀಚೆಗೆ ಮುಕ್ತಾಯವಾದ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಜೇಸನ್ ರಾಯ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರವಾಗಿ ಆಡಿದ್ದ ಅವರು 7 ಪಂದ್ಯಗಳಲ್ಲಿ 40.83 ಸರಾಸರಿ ಮತ್ತು 166.67 ಸ್ಟ್ರೈಕ್‌ರೇಟ್‌ನಲ್ಲಿ 245 ರನ್ ಗಳಿಸಿದ್ದರು. ಪೇಶಾವರ್ ಜಲ್ಮಿ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ 145 ರನ್ ಗಳಿಸಿ ಭಾರಿ ಸದ್ದು ಮಾಡಿದ್ದರು. ಇದೇ ಆಟವನ್ನು ಐಪಿಎಲ್‌ನಲ್ಲಿ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ ಇಂಗ್ಲೆಂಡ್ ಆರಂಭಿಕ ಆಟಗಾರ.

Story first published: Thursday, April 6, 2023, 12:44 [IST]
Other articles published on Apr 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+