For Quick Alerts
ALLOW NOTIFICATIONS  
For Daily Alerts
 

IPL 2024: ಪ್ಲೇ ಆಫ್‌ ಕೊನೆಯ ಎರಡು ಸ್ಥಾನಕ್ಕೆ 4 ತಂಡಗಳ ಪೈಪೋಟಿ; ಹೀಗಿದೆ ಲೆಕ್ಕಚಾರ

ಮೇ 15 ಬುಧವಾರ, 2024ರ ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) ಅಂತಿಮ ಹಂತದತ್ತ ಸಾಗಿದೆ. ಈಗಾಗಲೇ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಮಾತ್ರ ಪ್ಲೇ ಆಫ್‌ಗೆ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿದೆ.

ಮಂಗಳವಾರದ ವರೆಗೂ ಕೊನೆಯ ಮೂರು ಪ್ಲೇ ಆಫ್‌ ಸ್ಥಾನಗಳಿಗಾಗಿ 6 ತಂಡಗಳು ರೇಸ್‌ನಲ್ಲಿದ್ದವು. ಆದರೆ ತವರಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ (ಮಂಗಳವಾರ) ಡೆಲ್ಲಿ ಕ್ಯಾಪಿಟಲ್ಸ್‌ ಗೆಲ್ಲುತ್ತಿದ್ದಂತೆ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ.

ಪ್ಲೇ ಆಫ್‌‌ನ ಅಗ್ರ-4 ತಂಡಗಳನ್ನು ಅಧಿಕೃತವಾಗಿ ಘೋಷಿಸುವವರೆಗೆ, ಯಾವುದೇ ಕ್ಷಣದಲ್ಲಾದರೂ ಅಂಕಪಟ್ಟಿಯಲ್ಲಿ ಬದಲಾವಣೆಗಳು ಆಗಬಹುದು. ಆದರೆ ಬಹುತೇಕ ಮೊದೆಲೆರಡು ಸ್ಥಾನಕ್ಕೆ ಕೋಲ್ಕತ್ತಾ ಮತ್ತು ರಾಜಸ್ಥಾನ ತಂಡಗಳು ಪಕ್ಕ ಆಗಿದ್ದು, ಕೊನೆಯ ಎರಡು ಸ್ಥಾನಗಳಿಗೆ 4 ತಂಡಗಳು ಪ್ರಬಲ ಪೈಪೋಟಿ ನಡೆಸುತ್ತಿವೆ.

IPL 2024 4 teams are competing for the last two places in the play off

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಲೆಕ್ಕಚಾರ

ಡೆಲ್ಲಿ ಎದುರು ಲಕ್ನೋ ಸೋಲಿನ ನಂತರ ಆರ್‌ಸಿಬಿ ಪ್ಲೇ ಆಫ್‌ಗೆ ತಲುಪುವ ಸಾಧ್ಯತೆ ಹೆಚ್ಚಾಗಿದೆ. ಪ್ಲೇ ಆಫ್‌ ತಲುಪಲು ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆಲ್ಲಲೇಬೇಕು. ಅಷ್ಟೇ ಅಲ್ಲ, ಪ್ಲೇ ಆಫ್‌ಗೆ ಲಗ್ಗೆ ಇಡಲು ಆರ್‌ಸಿಬಿ ಉತ್ತಮ ರನ್ ರೇಟ್‌ನೊಂದಿಗೆ ಪಂದ್ಯವನ್ನು ಗೆಲ್ಲಬೇಕು.

ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿ 200ಕ್ಕೂ ಹೆಚ್ಚು ರನ್‌ಗಳ ಟಾರ್ಗೆಟ್‌ ಅನ್ನು ಸಿಎಸ್‌ಕೆ ತಂಡಕ್ಕೆ ನೀಡಬೇಕು. ಬಳಿಕ ಸಿಎಸ್‌ಕೆ ವಿರುದ್ಧ 18 ರನ್‌ ಅಂತರದಿಂದ ಗೆಲ್ಲಬೇಕು. ಇದು ಸಾಧ್ಯವಾಗದೆ ಇದ್ದಲ್ಲಿ ಚೆನ್ನೈ ನೀಡುವ ಗುರಿಯನ್ನು ಕೇವಲ 18.1 ಓವರ್‌ಗಳಲ್ಲಿ ಮುಟ್ಟಬೇಕು. ಆಗ 14 ಅಂಕಗಳೊಂದಿಗೆ ಚೆನ್ನೈಗಿಂತ ಮೇಲಕ್ಕೆ ತಲುಪಿ ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ.

ಸಿಎಸ್‌ಕೆ ಎದುರು ಆರ್‌ಸಿಬಿ ಕೊನೆಯ ಪಂದ್ಯ ಗೆದ್ದರೆ, ಚೆನ್ನೈ, ಡೆಲ್ಲಿ ತಂಡಗಳಂತೆ 14 ಅಂಕಗಳನ್ನು ಹೊಂದಿರುತ್ತದೆ. ಜೊತೆಗೆ ಲಕ್ನೋ ಕೂಡ ತನ್ನ ಅಂತಿಮ ಪಂದ್ಯ ಗೆದ್ದರೆ 14 ಅಂಕಗಳನ್ನು ಗಳಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ ರನ್ ರೇಟ್ ಮುಖ್ಯವಾಗುತ್ತದೆ. ಪ್ರಸ್ತುತ ಚೆನ್ನೈ ರನ್ ರೇಟ್‌ನಲ್ಲಿ ಆರ್‌ಸಿಬಿಗಿಂತ ಹೆಚ್ಷಿದ್ದು, ಆರ್‌ಸಿಬಿ ಇತರ ಎಲ್ಲ ತಂಡಗಳಿಗಿಂತ ಹೆಚ್ಚಿನ ರನ್ ರೇಟ್ ಹೊಂದಿದೆ.

IPL 2024 4 teams are competing for the last two places in the play off

ಚೆನ್ನೈ ಸೂಪರ್‌ ಕಿಂಗ್ಸ್‌ ಲೆಕ್ಕಚಾರ

ಪ್ಲೇ ಫ್ ತಲುಪಲು ಚೆನ್ನೈ ತಂಡವು ಅರ್‌ಸಿಬಿ ಅನ್ನು ಮಾತ್ರ ಸೋಲಿಸಬೇಕು. ಆಗ ನೇರವಾಗಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತದೆ. ಏಕೆಂದರೆ ಸಿಎಸ್‌ಕೆ ಇತರ ತಂಡಗಳಿಗಿಂತ 16 ಪಾಯಿಂಟ್‌ಗಳನ್ನು ಹೆಚ್ಚು ಹೊಂದಿರುತ್ತದೆ. ಆರ್‌ಸಿಬಿ ವಿರುದ್ಧ 19 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಅಥವಾ 18.1 ಓವರ್‌ಗಳ ನಂತರ ಸಿಎಸ್‌ಕೆ ಸೋತರೂ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತದೆ. ಏಕೆಂದರೆ ಲಕ್ನೋಗೆ ಇನ್ನೂ ಒಂದು ಪಂದ್ಯ ಉಳಿದಿದ್ದು, ಮುಂಬೈ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಬೇಕಾಗಿದೆ.

IPL 2024 4 teams are competing for the last two places in the play off

ಸನ್‌ ರೈಸರ್ಸ್ ಹೈದರಾಬಾದ್‌ ಲೆಕ್ಕಚಾರ

ಹೈದರಾಬಾದ್‌ಗೆ ಪ್ಲೇ ಆಫ್ ತಲುಪಲು ಉಳಿದಿರುವ ಎರಡು ಪಂದ್ಯಗಳ ಪೈಕಿ ಕೇವಲ ಒಂದನ್ನು ಗೆಲ್ಲಬೇಕು. ಎರಡೂ ಪಂದ್ಯಗಳನ್ನು ಗೆದ್ದರೆ ಅಥವಾ ರಾಜಸ್ಥಾನ ತನ್ನ ಎರಡು ಪಂದ್ಯಗಳಲ್ಲಿ ಒಂದನ್ನು ಸೋತರೆ, ಎಸ್‌ಆರ್‌ಹೆಚ್‌ ಪ್ಲೇ ಆಫ್‌ ಟಾಪ್-2 ರಲ್ಲಿ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಳ್ಳಲಿದೆ. ಜೊತೆಗೆ ಹೈದರಾಬಾದ್‌ ಫೈನಲ್ ಆಡುವ ಎರಡು ಅವಕಾಶಗಳನ್ನು ಪಡೆಯುತ್ತದೆ.

IPL 2024 4 teams are competing for the last two places in the play off

ಲಕ್ನೋ ಸೂಪರ್ ಜೈಂಟ್ಸ್‌ ಲೆಕ್ಕಚಾರ

ಪ್ಲೇ ಆಫ್‌ ತಲುಪುವ ಲಕ್ನೋ ತಂಡದ ಲೆಕ್ಕಚಾರ ಸ್ವಲ್ಪ ಕಷ್ಟಕರವಾಗಿದೆ. ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಮುಂಬೈ ವಿರುದ್ಧದ ತಮ್ಮ ಪಂದ್ಯವನ್ನು ದೊಡ್ಡ ಅಂತರದಿಂದ ಲಕ್ನೋ ಗೆಲ್ಲಬೇಕು. ಇಷ್ಟೇ ಅಲ್ಲ, ಚೆನ್ನೈನ ಸೋಲಿಗಾಗಿ ಅವರು ಪ್ರಾರ್ಥಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ತಂಡಗಳು 14 ಅಂಕಗಳನ್ನು ಹೊಂದಿದ್ದು, ಲಕ್ನೋ ಮುಂಬೈಯನ್ನು 10 ಓವರ್‌ಗಳಲ್ಲಿ ಸೋಲಿಸಿದರೆ ಉತ್ತಮ ರನ್‌ ರೇಟ್‌ನೊಂದಿಗೆ ಅದು ಪ್ಲೇ ಆಫ್‌ಗೆ ಅರ್ಹತೆ ಪಡೆಯವ ಅವಕಾಶವಿದೆ.

Story first published: Wednesday, May 15, 2024, 12:54 [IST]
Other articles published on May 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+