IPL 2024: ಮುಂಬೈ ಇಂಡಿಯನ್ಸ್ ಫ್ಯಾನ್ಸ್‌ನಿಂದ ಮಾರಣಾಂತಿಕ ಹಲ್ಲೆ; 63 ವರ್ಷದ ಸಿಎಸ್‌ಕೆ ಅಭಿಮಾನಿ ಸಾವು
ದುರಂತ ಘಟನೆಗಳ ತಿರುವಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಹಿರಿಯ ಅಭಿಮಾನಿ ಮತ್ತು ಇಬ್ಬರು ಮುಂಬೈ ಇಂಡಿಯನ್ಸ್ (ಎಂಐ) ಅಭಿಮಾನಿಗಳ ನಡುವಿನ ಸಾಮಾನ್ಯ ಕ್ರಿಕೆಟ್ ಚರ್ಚೆಯು ಮಾರಣಾಂತಿಕ ಹಲ್ಲೆಗೆ ಕಾರಣವಾದ ಘಟನೆಯು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.
ಮಾರ್ಚ್ 27ರಂದು ಇತ್ತೀಚಿನ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡದ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾದ ನಂತರ, ಸಿಎಸ್‌ಕೆ ತಂಡದ ವೃದ್ಧ ಅಭಿಮಾನಿಯು ಮುಂಬೈ ಇಂಡಿಯನ್ಸ್ ತಂಡದ ಮುಂದಿನ ಅವಕಾಶಗಳ ಬಗ್ಗೆ ಮುಗ್ಧವಾಗಿ ವಿಚಾರಿಸಿದಾಗ ವಾಗ್ವಾದವು ತಾರಕಕ್ಕೇರಿದೆ.

ವರದಿಗಳ ಪ್ರಕಾರ, ಚರ್ಚೆಯಲ್ಲಿ ನಿರುಪದ್ರವ ಪ್ರಶ್ನೆಯು ಬಿಸಿಯಾದ ಮಾತಿನ ವಿನಿಮಯಕ್ಕೆ ಪ್ರಚೋದಿಸಿತು. ನಂತರ ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ಅಭಿಮಾನಿಗಳು ಮರದ ಕೋಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ತಕ್ಷಣವೇ ವೃದ್ಧ ಕ್ರಿಕೆಟ್ ಅಭಿಮಾನಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಾಯದ ತೀವ್ರತೆಗೆ ಸಿಎಸ್‌ಕೆ ತಂಡದ ಹಿರಿಯ ಅಭಿಮಾನಿ ಸಾವನ್ನಪ್ಪಿದ್ದು, ಕ್ರಿಕೆಟ್ ಸಮುದಾಯದಲ್ಲಿ ದುಃಖದ ಛಾಯೆ ಆವರಿಸಿದೆ.
ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಹನ್ಮಂತವಾಡಿಯ ನಿವಾಸಿಗಳಾದ ಬಲವಂತ ಮಹಾದೇವ ಜಾಂಜಗೆ ಮತ್ತು ಸಾಗರ್ ಸದಾಶಿವ ಜಾಂಜಗೆ ಎಂದು ಗುರುತಿಸಲಾಗಿದ್ದು, ಕಾರವೀರ ಪೊಲೀಸರು ಕೂಡಲೇ ಬಂಧಿಸಿದ್ದಾರೆ.
ಇನ್ನು ಸಾವಿಗೀಡಾದ 63 ವರ್ಷದ ಸಿಎಸ್‌ಕೆ ಅಭಿಮಾನಿ ಬಂಡೋಪಂತ್ ಬಾಪ್ಸೊ ಕೂಡ ಹನ್ಮಂತವಾಡಿಯ ಸಹ ನಿವಾಸಿಯಾಗಿದ್ದು, ಕ್ರಿಕೆಟ್ ಮೇಲಿನ ಅವರ ಉತ್ಸಾಹವು ಅಂತಿಮವಾಗಿ ಅಕಾಲಿಕ ಸಾವಿಗೆ ಕಾರಣವಾಗಿದೆ.
ಈ ಘಟನೆಯು ಯಾವುದೇ ತಂಡಗಳ ಸಂಬಂಧವನ್ನು ಲೆಕ್ಕಿಸದೆ, ಅಭಿಮಾನಿಗಳ ನಡುವೆ ಕ್ರೀಡಾ ಮನೋಭಾವ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಒಗ್ಗೂಡಿಸುವ ಕ್ರೀಡೆ ಎಂದು ಗೌರವಿಸಲ್ಪಡುವ ಕ್ರಿಕೆಟ್ ಇಂತಹ ಖಂಡನೀಯ ಕೃತ್ಯಗಳಿಂದ ಕಳಂಕಕ್ಕೆ ಗುರಿಯಾಗಿದೆ.
ಇನ್ನು ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಡಿದ 2 ಪಂದ್ಯಗಳಲ್ಲಿ ಎರಡನ್ನೂ ಗೆದ್ದು 4 ಅಂಕಗಳು ಮತ್ತು 1.979 ನೆಟ್ ರನ್‌ರೇಟ್‌ನೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡವು ಆಡಿದ ಎರಡು ಪಂದ್ಯಗಳಲ್ಲಿ ಎರಡನ್ನೂ ಸೋತ ಕಾರಣ, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಸೊರಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications