Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: SRH ತಂಡದಲ್ಲಿ ಒಬ್ಬ ಸೂಪರ್‌ ಮ್ಯಾನ್‌: ಫಾರೇನ್‌ ಲೀಗ್‌ನಲ್ಲಿ ಅದ್ಭುತ್ ಕ್ಯಾಚ್

ಪ್ರತಿದಿನ, ಕ್ರಿಕೆಟ್ ಮೈದಾನದಿಂದ ಅದ್ಭುತ ಕ್ಯಾಚ್‌ಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಮಂಗಳವಾರ ನಡೆದ ಎಸ್‌ಎಟಿ20 ಕ್ರಿಕೆಟ್‌ ಲೀಗ್‌ನಲ್ಲಿ ಸನ್‌ರೈಸರ್‌ ಈಸ್ಟರ್ನ್‌ ಕ್ಯಾಪ್‌ನ ನಾಯಕ ಇಂತಹದೊಂದು ಕ್ಯಾಚ್‌ ಹಿಡಿದಿದ್ದು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಏಡನ್‌ ಮಾರ್ಕ್‌ರಾಮ್‌ 2024ರ ಸಾಲಿನ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕನ ಫೀಲ್ಡಿಂಗ್ ಕಂಡು ಎಸ್‌ಆರ್‌ಎಚ್‌ ಮ್ಯಾನೇಜ್ಮೆಂಟ್ ಫುಲ್ ಖುಷ್ ಆಗಿದೆ. ಒಬ್ಬ ಪ್ಲೇಯರ್‌ ಈ ರೀತಿಯ ಕ್ಯಾಚ್‌ಗಳನ್ನು ಹಿಡಿದಾಗ ಸಾಮಾನ್ಯವಾಗಿ ಅಭಿಮಾನಿಗಳು ರಿಯಾಕ್ಟ್ ಮಾಡುವುದು ಕಾಮನ್‌. ಅಂತೆಯೆ ಈ ಕ್ಯಾಚ್‌ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

IPL 2024: A Superman in SRHs Team: Awraj Catches in Foreign League

ಮಾರ್ಕ್‌ರಾಮ್‌ ಒಬ್ಬ ಸ್ಟಾರ್ ಫೀಲ್ಡರ್ ಎಂಬುದನ್ನು ಸಾರೀ ಹೇಳಿದ್ದಾರೆ. ಎಸ್‌ಎಟಿ20 ಈ ಕ್ಯಾಚ್‌ ಪಡೆಯಲು ಜಿಂಕೆಯಂತೆ ಜಿಗಿದು ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಪಡೆದಿದ್ದಾರೆ. ಅವರ ಕ್ಯಾಚ್ ನೋಡಿದ ಬ್ಯಾಟ್ಸ್‌ಮನ್ ಸೇರಿದಂತೆ ಕ್ರೀಡಾಂಗಣದಲ್ಲಿದ್ದ ಎಲ್ಲರೂ ಬೆಚ್ಚಿಬಿದ್ದರು.

ಮಾರ್ಕ್‌ರಾಮ್‌ ಅಸಾಧ್ಯವಾದ ಕ್ಯಾಚ್ ಅನ್ನು ಸಾಧ್ಯವಾಗಿಸಿದರು. ಡರ್ಬನ್ ಸೂಪರ್ ಜೈಂಟ್ಸ್ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಸನ್‌ರೈಸರ್ಸ್ ನಾಯಕ ಏಡೆನ್ ಮಾರ್ಕ್ರಾಮ್ ಈ ಕ್ಲಾಸಿಕ್ ಕ್ಯಾಚ್ ಹಿಡಿದರು.

ಈ ಓವರ್‌ನ ಐದನೇ ಎಸೆತದಲ್ಲಿ ಡರ್ಬನ್ ಬ್ಯಾಟ್ಸ್‌ಮನ್ ಜೆಜೆ ಸ್ಮಟ್ಸ್ ಮುಂದೆ ಶಾಟ್ ಹೊಡೆಯಲು ಯತ್ನಿಸಿದರು. ಆದರೆ, ಚೆಂಡನ್ನು ಸರಿಯಾಗಿ ಟೈಮನ್ ಮಾಡಲು ಸಾಧ್ಯವಾಗಲಿಲ್ಲ. 30 ಯಾರ್ಡ್ ವೃತ್ತದ ಬಳಿ ನಿಂತಿದ್ದ ಏಡೆನ್ ಮಾರ್ಕ್ರಾಮ್ ಚೆಂಡು ತಮ್ಮ ಬಳಿ ಬರುತ್ತಿರುವುದನ್ನು ಗಮನಿಸಿ, ಗಾಳಿಯಲ್ಲಿ ಜಿಗಿದು ಭರ್ಜರಿ ಕ್ಯಾಚ್ ನೀಡಿದರು.

ಈ ಕ್ಯಾಚ್ ನೋಡಲು ಅಸಾಧ್ಯವೆನಿಸಿದರು ಈ ಕ್ಯಾಚ್ ಹಿಡಿಯುವ ಮೂಲಕ ಮಾರ್ಕ್ರಾಮ್ ತಮ್ಮ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು.

IPL 2024: A Superman in SRHs Team: Awraj Catches in Foreign League

ಎರಡನೇ ಬಾರಿಗೆ ಫೈನಲ್‌ಗೆ

ಪಂದ್ಯದ ಕುರಿತು ಮಾತನಾಡುತ್ತಾ, ಸನ್‌ರೈಸರ್ಸ್ ಈಸ್ಟರ್ನ್ ಕ್ಯಾಪ್ ತಂಡವು ಪ್ಲೇಆಫ್ ಪಂದ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ಅನ್ನು 51 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ತಂಡ 157 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಸೂಪರ್ ಜೈಂಟ್ಸ್ ತಂಡ ಕೇವಲ 106 ರನ್‌ಗಳಿಗೆ ಕುಸಿದಿತ್ತು. ಈ ಗೆಲುವಿನೊಂದಿಗೆ, ಸನ್‌ರೈಸರ್ಸ್ ಸತತ ಎರಡನೇ ಬಾರಿಗೆ SAT20 ಲೀಗ್‌ನ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿತು. ಕಳೆದ ವರ್ಷವೂ ಸನ್‌ರೈಸರ್ಸ್ ತಂಡ ಈ ಲೀಗ್‌ನಲ್ಲಿ ಪ್ರಶಸ್ತಿ ಜಯಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿದೆ.

Story first published: Wednesday, February 7, 2024, 15:16 [IST]
Other articles published on Feb 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+