ಮೇ 21 ಮಂಗಳವಾರ, ಐಪಿಎಲ್ 2024ರ ಕ್ವಾಲಿಫೈಯರ್-1 ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವೆ ಇಂದು ನಡೆಯಲಿದೆ.
ನಂತರ ನಾಳೆ (ಮೇ22) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ರಾಜಸ್ಥಾನ ರಾಯಲ್ಸ್ (ಆರ್‌ಆರ್) ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಸೋತ ಐಪಿಎಲ್ ಫೈನಲ್ ಓಟದಿಂದ ತಂಡ ಹೊರಬೀಳಲಿದೆ.

ಆರ್‌ಸಿಬಿ ಮತ್ತು ಆರ್‌ಆರ್ ನಡುವಿನ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ. ಹೀಗಾಗಿ ಉಭಯ ತಂಡಗಳ ಅಭಿಮಾನಿಗಳು ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಮತ್ತೊಂದೆಡೆ ತಮ್ಮ ನೆಚ್ಚಿನ ತಂಡ ಆರ್‌ಸಿಬಿ ಮತ್ತು ಸ್ನೇಹಿತ ವಿರಾಟ್ ಕೊಹ್ಲಿಯನ್ನು ಬೆಂಬಲಿಸಲು ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ತಮ್ಮ ದೇಶದಿಂದ ಭಾರತಕ್ಕೆ ಬಂದಿದ್ದಾರೆ. ಸೋಮವಾರ ಮುಂಬೈನಲ್ಲಿ ಕಾಣಿಸಿಕೊಂಡಿರುವ ಎಬಿ ಡಿವಿಲಿಯರ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇ 18 ರಂದು ನಾಕೌಟ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಆರ್‌ಸಿಬಿ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ನಂತರ ಡಿವಿಲಿಯರ್ಸ್ ಸಂತಸ ವ್ಯಕ್ತಪಡಿಸಿದ್ದರು. 'ಗ್ರೇಟ್ ಗೇಮ್ ಆರ್‌ಸಿಬಿ ಈಗ ಟ್ರೋಫಿ ಗೆದ್ದಿದೆ' ಎಂದು ತಮ್ಮ ಟ್ವೀಟರ್ (ಎಕ್ಸ್)ನಲ್ಲಿ ವಿಡಿಯೋ ಹಂಚಿಕೊಂಡಿದ್ದರು.
ಹೀಗಿರುವಾಗ ಇದೀಗ ಆರ್‌ಸಿಬಿ ಆಪದ್ಬಾಂಧವ ಎಬಿ ಡಿವಿಲಿಯರ್ಸ್, ತಮ್ಮ ಹಳೆಯ ತಂಡ ಹಾಗೂ ಗೆಳೆಯ ಕೊಹ್ಲಿಗೆ ಬೆಂಬಲ ನೀಡಲು ಬಂದಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿಯ ಮತ್ತೊಬ್ಬ ಮಾಜಿ ಬ್ಯಾಟರ್ ಕ್ರಿಸ್ ಗೇಲ್ ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದು ತಂಡಕ್ಕೆ ಬೆಂಬಲಿಸಿದ್ದರು.
ಅದೇನೇ ಇರಲಿ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ನಡುವಿನ ಗೆಳೆತನ ಯಾರಿಂದಲೂ ಮರೆವಂತದಲ್ಲ. ಇಬ್ಬರೂ ತಮ್ಮ ಆಲೋಚನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ.
ಐಪಿಎಲ್‌ಗೂ ಮುನ್ನ ನಡೆದ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ದೂರ ಉಳಿದಿದ್ದರು. ಆ ವೇಳೆ ಕೊಹ್ಲಿ ಏಕೆ ಟೆಸ್ಟ್ ಆಡಿಲ್ಲ? ಎಲ್ಲಿ ಇದ್ದಾರೆ? ಎಂಬ ಹಲವು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದ್ದವು.
ಆಗ ಡಿವಿಲಿಯರ್ಸ್ ಶೀಘ್ರದಲ್ಲೇ ಕುಟುಂಬಕ್ಕೆ ಪುಟ್ಟ ಅತಿಥಿ ಆಗಮಿಸಲಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಇದರಲ್ಲೇ ತಿಳಿಯುತ್ತದೆ ಕೊಹ್ಲಿ ಮತ್ತು ಡಿವಿಲಿಯರ್ಸ್ ಅವರು ನಡುವೆ ಗೆಳತನ ಎಷ್ಟರ ಮಟ್ಟಿಗೆ ಇದೆ ಎಂಬುದು.
ಬುಧವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ. ರಾಜಸ್ಥಾನ ರಾಯಲ್ಸ್ ಗೆಲುವಿನ ಹಾದಿ ತಪ್ಪಿದ್ದು, ಫಾರ್ಮ್ ಕಳವಳಕಾರಿಯಾಗಿದೆ. ಆದರೆ ಕಳೆದ 6 ಪಂದ್ಯಗಳಿಂದ ಬೆಂಗಳೂರು ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದಿದೆ.
ಆರ್‌ಸಿಬಿಬ ಬ್ಯಾಟರ್ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಋತುವಿನಲ್ಲಿ ಅಗ್ರ ಸ್ಕೋರರ್ ಕೂಡ ಆಗಿದ್ದಾರೆ. ಹೀಗಿರುವಾಗ ಪಂದ್ಯವನ್ನು ಯಾರು ಗೆದ್ದು ಯಾವ ತಂಡವನ್ನು ಹೊರಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.