IPL 2024: ವಿರಾಟ್ ಕೊಹ್ಲಿ ಐಪಿಎಲ್ ಆಡಲ್ವಾ?; ಗವಾಸ್ಕರ್ ಬಳಿಕ ದೊಡ್ಡ ಸುಳಿವು ನೀಡಿದ ಎಬಿಡಿ
ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಕೇವಲ 20 ದಿನಗಳಿಗಿಂತ ಕಡಿಮೆ ಸಮಯ ಉಳಿದಿದೆ. ಏಕೆಂದರೆ ಮಾರ್ಚ್ 22ರಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆರಂಭಗೊಳ್ಳಲಿದೆ.
ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿಯೇ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅವರಂತಹ ಸ್ಟಾರ್ ಆಟಗಾರರನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದೆ.

ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯನ್ನು ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ತಪ್ಪಿಸಿಕೊಳ್ಳುವುದರೊಂದಿಗೆ, ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಟಾರ್ ಬ್ಯಾಟರ್ ಆಡುತ್ತಾರೆಯೇ ಎಂದು ಅನುಮಾನ ವ್ಯಕ್ತಪಡಿಸಿದರು.
ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತೀಯ ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿದ್ದ ಆರ್‌ಸಿಬಿ ಲೆಜೆಂಡ್ ವಿರಾಟ್ ಕೊಹ್ಲಿ, ಹೈದರಾಬಾದ್‌ನಲ್ಲಿನ ಮೊದಲ ಪಂದ್ಯಕ್ಕೆ ಮುನ್ನವೇ ಹೊರಗುಳಿಯಲು ನಿರ್ಧರಿಸಿದರು. ಇತ್ತೀಚಿಗೆ ಭಾರತೀಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತನ್ನ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿರುವುದಾಗಿ ಪ್ರಕಟಿಸಿದರು.
"ವಿರಾಟ್ ಕೊಹ್ಲಿ ಆಡುತ್ತಾರಾ... ಕಾರಣಾಂತರಗಳಿಂದ ಅವರು ಟೆಸ್ಟ್ ಸರಣಿ ಆಡಿಲ್ಲ, ಬಹುಶಃ ಅವರು ಐಪಿಎಲ್‌ನಲ್ಲೂ ಆಡದೇ ಇರಬಹುದು," ಎಂದು ಸುದೀರ್ಘ ವಿರಾಮದ ನಂತರ ಕೊಹ್ಲಿ ಅವರು ಐಪಿಎಲ್‌ನಲ್ಲಿ ರನ್‌ಗಳಿಗಾಗಿ ಹಸಿದಿದ್ದಾರೆಯೇ ಎಂದು ಪ್ರಶ್ನಿಸಿದಾಗ ಸುನಿಲ್ ಗವಾಸ್ಕರ್ ಆಘಾತಕಾರಿ ಹೇಳಿಕೆ ನೀಡಿದರು.

ಇದೀಗ ಆರ್‌ಸಿಬಿ ದಿಗ್ಗಜ ಮತ್ತು ಕೊಹ್ಲಿಯ ದೀರ್ಘಕಾಲದ ಸಹ ಆಟಗಾರ ಎಬಿ ಡಿವಿಲಿಯರ್ಸ್ ಅವರು ವಿರಾಟ್ ಕೊಹ್ಲಿ ಐಪಿಎಲ್‌ಗೆ ಹಾಜರಾಗಬಹುದು ಎಂಬ ಸುಳಿವು ನೀಡಿದ್ದಾರೆ.
2024ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಸದಸ್ಯರೊಂದಿಗೆ ಹಾಜರಾಗುತ್ತೀರಾ ಎಂದು ಕೇಳಿದಾಗ, ಇದಕ್ಕೆ ಎಬಿ ಡಿವಿಲಿಯರ್ಸ್ ಪ್ರತಿಕ್ರಿಯಿಸಿ, "ಇನ್ನೂ ಯಾವುದನ್ನೂ ದೃಢೀಕರಿಸಲಾಗಿಲ್ಲ. ವಿರಾಟ್ ಕೊಹ್ಲಿ ಅವರು ಮತ್ತು ಕೆಲವು ಬ್ಯಾಟರ್‌ಗಳೊಂದಿಗೆ ಸ್ವಲ್ಪ ಸಮಯ ಕಳೆಯಲು ನಾನು ಬರಲು ಬಯಸಬಹುದು ಎಂದು ಸುಳಿವು ನೀಡಿದ್ದಾರೆ. ಇನ್ನೂ ಯಾವುದನ್ನೂ ದೃಢಪಡಿಸಲಾಗಿಲ್ಲ," ಎಂದರು.
"ಆಂಡಿ ಫ್ಲವರ್, ಫಾಫ್ ಡು ಪ್ಲೆಸಿಸ್ ಮತ್ತು ಆರ್‌ಸಿಬಿ ತಂಡದಿಂದ ಕರೆ ಬಂದಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಸದ್ಯಕ್ಕೆ ನಾನು ಐಪಿಎಲ್‌ನ ಮೊದಲ ಕೆಲವು ವಾರ ಮುಂಬೈನಲ್ಲಿ ಇರಲಿದ್ದೇನೆ. ನಾನು ಸ್ವಲ್ಪ ಕಾಮೆಂಟರಿ ಮಾಡುತ್ತಿದ್ದೇನೆ. ಆದ್ದರಿಂದ ನಮ್ಮ ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ. ನಾಕೌಟ್‌ಗಾಗಿ ನಾನು ಬ್ಯಾಕೆಂಡ್‌ಗೆ ಹಿಂತಿರುಗುತ್ತೇನೆ," ಎಂದು ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಇನ್ನು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಇತ್ತೀಚೆಗೆ, ಟೀಮ್ ಇಂಡಿಯಾ ತನ್ನ ಕೆಲವು ಪ್ರಮುಖ ಸ್ಟಾರ್ ಆಟಗಾರರಿಲ್ಲದೆ, ಇಂಗ್ಲೆಂಡ್ ತಂಡವನ್ನು ಸೋಲಿಸಿದ ಸಾಧನೆಯ ಬಗ್ಗೆ ಹೆಮ್ಮೆಪಡಬೇಕು ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications