ಬುಧವಾರ, ಮೇ 8ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 57ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನೀಡಿದ್ದ 166 ರನ್‌ಗಳ ಗುರಿಯನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಮೂಲಕ 10 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತು.
ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2024ರಲ್ಲಿ 7ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿತು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ 166 ರನ್‌ಗಳ ಗುರಿಯನ್ನು ಅಪಹಾಸ್ಯವೆಂಬಂತೆ ಬೆನ್ನಟ್ಟಿದರು.

ಲಕ್ನೋ ಸೂಪರ್ ಜೈಂಟ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಕೊಂಡಿತು. ಈ ವೇಳೆ ಪಿಚ್ ನಿಧಾನವಾಗಿದ್ದಂತೆ ತೋರುತ್ತಿತ್ತು. ಆಯುಷ್ ಬಡೋನಿ ಅವರ ಅರ್ಧಶತಕದ ನೆರವಿನಿಂದ ಅಂತಿಮವಾಗಿ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 165 ರನ್ ಕಲೆಹಾಕಿತು.
ನಂತರ ಎಲ್‌ಎಸ್‌ಜಿ ಬೌಲರ್‌ಗಳನ್ನು ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಮನಬಂದಂತೆ ದಂಡಿಸಿದರು. ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಕೇವಲ 9.4 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿದರು.
ಟ್ರಾವಿಸ್ ಹೆಡ್ ಅವರ 30 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಮೇತ ಅಜೇಯ 89 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಮೂಲಕ ಅಜೇಯ 75 ರನ್ ಗಳಿಸಿದ್ದರಿಂದ ಲಕ್ನೋ ಬೌಲರ್‌ಗಳ ಬಳಿ ಉತ್ತರವಿರಲಿಲ್ಲ.

166 - ಸನ್ ರೈಸರ್ಸ್ ಹೈದರಾಬಾದ್ 9.4 ಓವರ್‌ಗಳಲ್ಲಿ 166 ರನ್‌ಗಳನ್ನು ಬೆನ್ನಟ್ಟಿದ್ದು ಟಿ20 ಕ್ರಿಕೆಟ್‌ನ ಇತಿಹಾಸದಲ್ಲಿ 10 ಓವರ್‌ಗಳಲ್ಲಿ ಚೇಸ್ ಮಾಡಿದ ಗರಿಷ್ಠ ಮೊತ್ತವಾಗಿದೆ.
62 - 100ಕ್ಕೂ ಹೆಚ್ಚು ರನ್‌ಗಳ ಯಶಸ್ವಿ ಚೇಸಿಂಗ್‌ನಲ್ಲಿ ಉಳಿದಿರುವ ಅತಿ ಹೆಚ್ಚು ಎಸೆತಗಳು. ಎಸ್‌ಆರ್‌ಹೆಚ್ ಕೇವಲ 9.4 ಓವರ್‌ಗಳಲ್ಲಿ ತಮ್ಮ ಗುರಿಯನ್ನು ಬೆನ್ನಟ್ಟುವ ಮೂಲಕ ಹೊಸ ಐಪಿಎಲ್ ದಾಖಲೆಯನ್ನು ನಿರ್ಮಿಸಿತು.
4 - ಟ್ರಾವಿಸ್ ಹೆಡ್ ಐಪಿಎಲ್ 2024ರಲ್ಲಿ ಪವರ್‌ಪ್ಲೇ ಒಳಗೆ 4 ಬಾರಿ 50-ಪ್ಲಸ್ ಸ್ಕೋರ್‌ಗಳನ್ನು ಬಾರಿಸಿದ್ದಾರೆ. ಡೇವಿಡ್ ವಾರ್ನರ್ ತಮ್ಮ ಐಪಿಎಲ್ ವೃತ್ತಿಜೀವನದಾದ್ಯಂತ 6 ಬಾರಿ 50-ಪ್ಲಸ್ ಸ್ಕೋರ್ ಮೂಲಕ ಒಟ್ಟಾರೆ ದಾಖಲೆಯನ್ನು ಹೊಂದಿದ್ದಾರೆ.
3 - ಟ್ರಾವಿಸ್ ಹೆಡ್ ಅವರು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರ 20 ಎಸೆತಗಳ ಒಳಗೆ ಹೆಚ್ಚು ಅರ್ಧಶತಕಗಳ ದಾಖಲೆಯನ್ನು ಸರಿಗಟ್ಟಿದರು. ಎಲ್‌ಎಸ್‌ಜಿ ವಿರುದ್ಧ ಟ್ರಾವಿಸ್ ಹೆಡ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
34 - ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಎಲ್‌ಎಸ್‌ಜಿ ವಿರುದ್ಧ ಕೇವಲ 5.4 ಓವರ್‌ಗಳಲ್ಲಿ ಅಂದರೆ, 34 ಎಸೆತಗಳಲ್ಲಿ ತಮ್ಮ 100 ರನ್‌ಗಳ ಜೊತೆಯಾಟ ನಿರ್ಮಿಸಿದರು.
2 - ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2024ರಲ್ಲಿ 2 ಬಾರಿ ಪವರ್‌ಪ್ಲೇನಲ್ಲಿ 100ಕ್ಕೂ ಅಧಿಕ ರನ್ ಗಳಿಸಿದೆ.
35 - ಎಲ್‌ಎಸ್‌ಜಿ ವಿರುದ್ಧ 6 ಸಿಕ್ಸರ್ ಬಾರಿಸಿದ ಅಭಿಷೇಕ್ ಶರ್ಮಾ ಇದೀಗ ಐಪಿಎಲ್ 2024ರಲ್ಲಿ ಅತಿ ಹೆಚ್ಚು ಸಿಕ್ಸರ್ (35) ಸಿಡಿಸಿದ ಆಟಗಾರನಾಗಿದ್ದಾರೆ. ಟ್ರಾವಿಸ್ ಹೆಡ್‌ಗಿಂತ 4 ಸಿಕ್ಸರ್ ಹೆಚ್ಚು ಬಾರಿಸಿದ್ದಾರೆ.
27ಕ್ಕೆ 2 - ಪವರ್‌ಪ್ಲೇಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ 107 ರನ್ ಗಳಿಸಿದರೆ, ಲಕ್ನೋ ಸೂಪರ್ ಜೈಂಟ್ಸ್ ತನ್ನ ಮೊದಲ 6 ಓವರ್‌ಗಳಲ್ಲಿ 2 ವಿಕೆಟ್‌ಗೆ 27 ರನ್ ಗಳಿಸಿತು. ಇದು ಐಪಿಎಲ್ 2024ರಲ್ಲಿ ಅತ್ಯಂತ ಕಡಿಮೆ ಮೊತ್ತವಾಗಿದೆ.
80: ಐಪಿಎಲ್ ಇತಿಹಾಸದಲ್ಲಿ ಒಂದು ಪಂದ್ಯದಲ್ಲಿ ಎರಡು ತಂಡಗಳ ಪವರ್‌ಪ್ಲೇ ಸ್ಕೋರ್‌ಗಳ ನಡುವಿನ ಗರಿಷ್ಠ ವ್ಯತ್ಯಾಸ 80 ರನ್‌ಗಳು.
ಮೇ 19ರಂದು ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಐಪಿಎಲ್ 2024ರ ಅಭಿಯಾನವನ್ನು ಮುಗಿಸುವ ಮೊದಲು ಸನ್‌ರೈಸರ್ಸ್ ಹೈದರಾಬಾದ್ ತಂಡ ಮೇ 16ರಂದು ಹೈದರಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಇದೀಗ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶವನ್ನು ಪಡೆಯಲು ತನ್ನ ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.