For Quick Alerts
ALLOW NOTIFICATIONS  
For Daily Alerts
 

IPL 2024: ಈ ಭಾರತೀಯ ಆಟಗಾರ ಆಟದ ಮೇಲೆ ಎಲ್ಲರ ಕಣ್ಣು

ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಐಪಿಎಲ್‌2024 ಆರಂಭವಾಗಲಿದೆ. ಈ ಟೂರ್ನಿ ಸ್ಟಾರ್ ಆಟಗಾರರು ಹಾಗೂ ಅಭಿಮಾನಿಗಳನ್ನು ಹತ್ತಿರ ಮಾಡುವ ಲೀಗ್. ವಿಶ್ವದ ಸ್ಟಾರ್ ಆಟಗಾರರನ್ನು ಒಂದೇ ಸೂರಿನಲ್ಲಿ ನೋಡುವ ಅವಕಾಶ. ದೇಶದ ಪರ ಆಡುವಾಗ ಎದುರಾಳಿಗಳಂತೆ ಕದಾಟ ನಡೆಸುವ ಸ್ಟಾರ್‌ಗಳು ಈ ಅಂಗಳದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಆಡುತ್ತಾರೆ.

IPL 2024 ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ ಮತ್ತು ಈ ಪಂದ್ಯಾವಳಿಯು ಮೇ 26 ರವರೆಗೆ ಮುಂದುವರಿಯುತ್ತದೆ. ಕೆಲ ತಿಂಗಳ ಹಿಂದೆ ನಡೆದ ಹರಾಜಿನಲ್ಲಿ ತಂಡಗಳು ಹಲವು ದೊಡ್ಡ ಆಟಗಾರರನ್ನು ಟ್ರೇಡ್ ಮಾಡಿ, ಕೆಲವು ತಂಡಗಳಿಗೆ ಹೊಸ ನಾಯಕರನ್ನು ಆಯ್ಕೆ ಮಾಡಿವೆ. ಇನ್ನು ಕೆಲವು ಯುವ ಆಟಗಾರರು ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕಾರಣ ಸುದ್ದಿಗೆ ಬಂದಿದ್ದಾರೆ. ಐಪಿಎಲ್ 2024 ರಲ್ಲಿ ಎಲ್ಲರ ಕಣ್ಣು ನೆಟ್ಟಿರುವ ಭಾರತೀಯ ಆಟಗಾರರ ಬಗ್ಗೆ ಇಲ್ಲಿದೆ ವರದಿ.

IPL 2024 All eyes on this Indian player game

ಇಶಾನ್ ಕಿಶನ್‌, ಶ್ರೇಯಸ್ ಅಯ್ಯರ್‌

ನಿಜಕ್ಕೂ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರ ಪಾಲಿಗೆ ಮಹತ್ವದಾಗಿದೆ. ಐಪಿಎಲ್‌ 2024ರಲ್ಲಿ ಈ ಸ್ಟಾರ್ ಆಟಗಾರರು ಅಬ್ಬರಿಸುವ ಅನಿವಾರ್ಯತೆ ಇದೆ. ಇಶಾನ್‌ ಕಿಶನ್‌ ಹಾಗೂ ಶ್ರೇಯಸ್ ಅಯ್ಯರ್‌ ಅವರನ್ನು ಬಿಸಿಸಿಐ ಕೇಂದ್ರ ಒಪ್ಪಂದದಿಂದ ಕೈ ಬಿಟ್ಟಿದೆ. ಹೀಗಾಗಿ ಐಪಿಎಲ್‌ನಲ್ಲಿ ಅಬ್ಬರಿಸುವ ಮೂಲಕ ತಮ್ಮಲ್ಲಿ ಇನ್ನು ಕ್ಷಮತೆ ಇರುವುದಾಗಿ ಸಾಬೀತು ಪಡಿಸಬೇಕಿದೆ. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ತಮ್ಮ ಸ್ಥಾನ ಭಧ್ರ ಪಡಿಸಿಕೊಳ್ಳಲು ಐಪಿಎಲ್‌ ಬೆಸ್ಟ್‌ ವೇದಿಕೆ.

IPL 2024 All eyes on this Indian player game

ಸಮೀರ್ ರಿಜ್ವಿ

ಐಪಿಎಲ್ 2024ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 8.40 ಕೋಟಿ ರೂ.ಗೆ ಬಿಡ್ ಮಾಡಿದಾಗ ಸಮೀರ್ ರಿಜ್ವಿ ಹೆಸರು ಸುದ್ದಿಯಲ್ಲಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್ ಆಡದ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದರು. ಸಮೀರ್ ತಮ್ಮ ಸ್ಥಿರ ಪ್ರದರ್ಶನದ ಫಲದಿಂದಲೇ ದೇಶೀಯ ಕ್ರಿಕೆಟ್‌ನಲ್ಲಿ ಸದ್ದು ಮಾಡಿದ್ದರು. ಅಲ್ಲದೆ ಈ ಪ್ಲೇಯರ್‌ ಭರ್ಜರಿ ಪ್ರದರ್ಶನ ನೀಡಿ ತಮ್ಮಲ್ಲಿರುವ ಕ್ಷಮತೆಯನ್ನು ಸಾಬೀತು ಪಡಿಸಬೇಕಿದೆ.

IPL 2024 All eyes on this Indian player game

ಮುಂಬೈ ಕ್ಯಾಪ್ಟನ್‌ ಪಾಂಡ್ಯ

ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಐಪಿಎಲ್ 2024ಗೂ ಮುನ್ನ ಮುಂಬೈ ಟ್ರೇಡ್ ಮಾಡಿ ಖರೀದಿಸಿತು. ಇನ್ನೂ ಅಚ್ಚರಿಯ ಸಂಗತಿ ಎಂದರೆ ಮುಂದಿನ ಋತುವಿನಲ್ಲಿ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಲಿದ್ದು, 5 ಟ್ರೋಫಿ ಗೆದ್ದಿರುವ ರೋಹಿತ್ ಶರ್ಮಾ ಪಾಂಡ್ಯ ನೇತೃತ್ವದಲ್ಲಿ ಆಡಲಿದ್ದಾರೆ. ಮುಂಬೈ ತಂಡದ ನಾಯಕನಾಗಿ ಪಾಂಡ್ಯ ಯಾವ ರೀತಿ ಪ್ರದರ್ಶನ ನೀಡುತ್ತಾನೆ ಎಂಬುದನ್ನು ನೋಡಬೇಕು.

IPL 2024 All eyes on this Indian player game

ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಐಪಿಎಲ್ 2023 ರಲ್ಲಿ 14 ಪಂದ್ಯಗಳಲ್ಲಿ 625 ರನ್ ಗಳಿಸಿದ್ದಾರೆ, ಇದರಲ್ಲಿ ಒಂದ ಶತಕವೂ ಸೇರಿದೆ. ಆದರೆ ಇತ್ತೀಚಿನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ ಕಾಣಿಸಿಕೊಂಡಿರುವ ಫಾರ್ಮ್ ಮುಂಬರುವ ಐಪಿಎಲ್ ಋತುವಿನಲ್ಲಿ ಅವರು ಅನೇಕ ದಾಖಲೆಗಳನ್ನು ಮುರಿಯಬಹುದು ಎಂದು ತೋರಿಸುತ್ತದೆ.

IPL 2024 All eyes on this Indian player game

ರಿಂಕು ಸಿಂಗ್

ಐಪಿಎಲ್ 2024 ರಲ್ಲಿ ರಿಂಕು ಸಿಂಗ್ ಆಟದ ಮೇಲೆ ಎಲ್ಲರ ದೃಷ್ಟಿ ನೆಟ್ಟಿರುತ್ತದೆ. ಕಳೆದ ಸೀಸನ್‌ನಲ್ಲಿ ಯಶ್ ದಯಾಳ್ ಅವರ ಓವರ್‌ನಲ್ಲಿ 5 ಸಿಕ್ಸರ್ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ರಿಂಕು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ ಮತ್ತು ಸ್ಥಿರ ವೇಗದ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ರಿಂಕು ಮುಂದಿನ ಋತುವಿನಲ್ಲಿ KKR ಪರ ಆಡುವುದನ್ನು ಕಾಣಬಹುದು ಮತ್ತು ಪ್ರೇಕ್ಷಕರು ಮತ್ತೊಮ್ಮೆ ಅವರ ಮ್ಯಾಚ್ ಫಿನಿಶಿಂಗ್ ಇನ್ನಿಂಗ್ಸ್ ನೋಡಲು ಉತ್ಸುಕರಾಗಿದ್ದಾರೆ.

Story first published: Monday, March 11, 2024, 8:00 [IST]
Other articles published on Mar 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+