Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ರಾಜಸ್ಥಾನ ರಾಯಲ್ಸ್‌ಗೆ ಸಿಕ್ಕ ಮತ್ತೊಬ್ಬ ಓಪನರ್‌

ಐಪಿಎಲ್ 2024ರ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿವೆ. ರಾಜಸ್ಥಾನ್ ರಾಯಲ್ಸ್ ಕೂಡ ಮತ್ತೊಮ್ಮೆ ಚಾಂಪಿಯನ್ ಪಟ್ಟಕೇರಲು ಪ್ಲ್ಯಾನ್ ಮಾಡಿಕೊಂಡಿದೆ. ಐಪಿಎಲ್ 17ಕ್ಕೂ ಮುನ್ನ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲು ರಾಜಸ್ಥಾನ ಚಿಂತನೆ ನಡೆಸಿದೆ.

ರಾಜಸ್ಥಾನ ಹೊಸ ಆರಂಭಿಕರನ್ನು ಕಣಕ್ಕೆ ಇಳಿಸುವ ಆಲೋಚನೆಯನ್ನು ನಡೆಸುತ್ತಿದೆ. ಆರಂಭಿಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಪ್ರಭಾವ ಬೀರುತ್ತಿಲ್ಲ ಎಂದಲ್ಲ. ತಂಡದಲ್ಲೇ ಇರುವ ಇನ್ನೋಬ್ಬ ಆರಂಭಿಕನಿಗೆ ಮಣೆ ಹಾಕಲು ರಾಜಸ್ಥಾನ ರಣತಂತ್ರ ರೂಪಿಸಿಕೊಂಡಿದೆ.

IPL 2024 Another opener for Rajasthan Royals

ರಾಜಸ್ಥಾನ್ ರಾಯಲ್ಸ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ತಂಡದಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಲಾಗಿದೆ. ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಬೌಲಿಂಗ್ ಮಾಡದೆ ಬ್ಯಾಟಿಂಗ್ ಅಭ್ಯಾಸಕ್ಕೆ ಸಿದ್ಧರಾಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಚಹಾಲ್, "ಜೋಸ್ ಭಾಯ್, ನಾನು ಹೊಸ ಆರಂಭಿಕ ಆಟಗಾರ. ಅವರು (ಜೋಸ್ ಬಟ್ಲರ್) ಎಷ್ಟು ರನ್ ಗಳಿಸಿದರು?" "870?" ಆಗ ಚಹಾಲ್, "ನಾನು ಕೇವಲ 1000 ಗಳಿಸುತ್ತೇನೆ. ಜೋಸ್ ಭಾಯ್ ಪ್ರಭಾವಿ ಆಟಗಾರ. ಅವರು ಲೆಗ್ ಸ್ಪಿನ್ ಬೌಲ್ ಮಾಡುತ್ತಾರೆ" ಎಂದು ಚಹಾಲ್‌ ಹೇಳಿದ್ದಾರೆ.

IPL 2024 Another opener for Rajasthan Royals

ಇದರ ನಂತರ ಚಾಹಲ್ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ಮಾಡಿದರು. ಅಲ್ಲಿ ಒಬ್ಬ ವ್ಯಕ್ತಿ ಚಾಹಲ್‌ಗೆ, "ನೀವು ನಿಜವಾಗಿ ಬ್ಯಾಟ್ಸ್‌ಮನ್" ಎಂದು ಹೇಳುತ್ತಾರೆ. ಇದಾದ ನಂತರ ಚಾಹಲ್ ನೆಟ್ಸ್‌ನಲ್ಲಿ ಕೆಲವು ಶಾಟ್‌ಗಳನ್ನು ಹೊಡೆಯುವುದನ್ನು ಕಾಣಬಹುದು. ಇದು ಕೇವಲ ತಮಾಷೆಯ ವೀಡಿಯೊ ಆಗಿದೆ. ರಾಜಸ್ಥಾನ್ ರಾಯಲ್ಸ್ ಆರಂಭಿಕವಾಗಿ ಯಾವುದೇ ಬದಲಾವಣೆಯನ್ನು ಅಧಿಕೃತವಾಗಿ ಘೋಷಿಸಲಿಲ್ಲ.

ಕಳೆದ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಕಳಪೆ ಪ್ರದರ್ಶನ ನೀಡಿದೆ. ತಂಡವು 14 ಲೀಗ್ ಪಂದ್ಯಗಳಲ್ಲಿ 7 ರಲ್ಲಿ ಮಾತ್ರ ಗೆದ್ದಿತ್ತು. ನಂತರ ಅವರು ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಈಗ ಈ ಬಾರಿ ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಮತ್ತು ಉತ್ತಮ ತಂತ್ರದೊಂದಿಗೆ ರಾಯಲ್ಸ್ ತಂಡವು ಮೈದಾನದಲ್ಲಿ ಇಳಿಯಲು ಸೂತ್ರ ಹೆಣೆದುಕೊಂಡಿದೆ.

Story first published: Saturday, March 16, 2024, 10:33 [IST]
Other articles published on Mar 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+