IPL 2024: ಮುಂಬೈ ತಂಡದಲ್ಲಿ ಮತ್ತೊಬ್ಬ ಯಾರ್ಕರ್ ಸ್ಪೇಷಲಿಸ್ಟ್: ವಿಡಿಯೋ ಸಖತ್ ವೈರಲ್
ಮುಂಬೈ ಇಂಡಿಯನ್ಸ್ ಐಪಿಎಲ್ 2024ಕ್ಕೆ ತಯಾರಿ ಆರಂಭಿಸಿದೆ. ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡ ನವ ಉತ್ಸಾಹದಲ್ಲಿ ಕಣಕ್ಕೆ ಇಳಿಯಲಿದೆ. ಶ್ರೀಲಂಕಾದ ಮಾಜಿ ಆಟಗಾರ ಲಸಿತ್ ಮಾಲಿಂಗ ನಿವೃತ್ತಿಯ ನಂತರ ಇವರು ಮುಂಬೈ ಕೋಚಿಂಗ್ ಸಿಬ್ಬಂದಿ ಆಗಿದ್ದಾರೆ.
ಮಾಲಿಂಗ ಈ ಬಾರಿ ಮುಂಬೈ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ. ಈ ಹಿಂದೆ ಅವರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು. ಇತ್ತೀಚೆಗಷ್ಟೇ ಮಾಲಿಂಗ ಮತ್ತು ಇಶಾನ್ ಕಿಶನ್ ಅವರ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ಇಶಾನ್ ಬೌಲಿಂಗ್ ನೋಡಿದ ಮಲಿಂಗ್ ಬಿದ್ದು ಬಿದ್ದು ನಕ್ಕಿದ್ದಾರೆ.

ಮುಂಬೈ ಇಂಡಿಯನ್ಸ್ ಇತ್ತೀಚೆಗೆ ತನ್ನ ಸಾಮಾಜಿಕ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಇಶಾನ್ ಕಿಶನ್ ಅವರು ಲಸಿತ್ ಮಾಲಿಂಗ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಇದಾದ ನಂತರ ಅವರು ಮಾಲಿಂಗ ಅವರ ಬೌಲಿಂಗ್ ಸ್ಟೈಲ್ ನಕಲು ಮಾಡಿದರು. ಬೌಲಿಂಗ್ ಮಾಡುವ ಮೊದಲು, ಇಶಾನ್‌ಗೆ ಮಾಲಿಂಗ ಅವರ ಹೇರ್‌ಸ್ಟೈಲ್ ಹೋಲುವಂತಹ ನಕಲಿ ವಿಗ್ ಧರಿಸಲಾಯಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ ಆಗುತ್ತಿದೆ.
ಇಶಾನ್ 91 ಐಪಿಎಲ್ ಪಂದ್ಯಗಳಲ್ಲಿ 2324 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 15 ಅರ್ಧಶತಕಗಳನ್ನು ಗಳಿಸಿದ್ದಾರೆ. ಐಪಿಎಲ್ ಸ್ಕೋರ್ 99 ಅವರ ಬೆಸ್ಟ್ ಸ್ಕೊರ್. 2020 ರ ಋತುವು ಅವರಿಗೆ ಅತ್ಯುತ್ತಮವಾಗಿತ್ತು. ಈ ಋತುವಿನಲ್ಲಿ 14 ಪಂದ್ಯಗಳನ್ನು ಆಡಿರುವ ಇಶಾನ್ 516 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 4 ಅರ್ಧ ಶತಕಗಳನ್ನು ಗಳಿಸಿದರು.
ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್‌ನ ಮೊದಲ ಪಂದ್ಯ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಮಾರ್ಚ್ 24 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದಾದ ಬಳಿಕ ಎರಡನೇ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ನಡೆಯಲಿದೆ.
ಈ ಪಂದ್ಯ ಮಾರ್ಚ್ 27 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಮುಂಬೈನ ಮೂರನೇ ಪಂದ್ಯ ರಾಜಸ್ಥಾನ ರಾಯಲ್ಸ್ ವಿರುದ್ಧ ಏಪ್ರಿಲ್ 1 ರಂದು ನಡೆಯಲಿದೆ. ಏಪ್ರಿಲ್ 7 ರಂದು ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications