For Quick Alerts
ALLOW NOTIFICATIONS  
For Daily Alerts
 

IPL 2024: ಲಕ್ನೋ ಸೂಪರ್‌ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ!

ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಐಪಿಎಲ್ 2024ಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಲು ಮುಂಚೂಣಿಯಲ್ಲಿದ್ದಾರೆ.

2023ರ ಐಪಿಎಲ್ ಮುಕ್ತಾಯದ ನಂತರ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯೊಂದಿಗಿನ ಎರಡು ವರ್ಷಗಳ ಒಪ್ಪಂದವು ಮುಕ್ತಾಯಗೊಂಡ ಕಾರಣ ಆಂಡಿ ಫ್ಲವರ್ ಅವರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ ಆ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂದು ವರದಿಯಾಗಿದೆ.

IPL 2024: Australia Former Cricketer Justin Langer To Be The Head Coach of Lucknow Super Giants

ಕ್ರಿಕ್‌ಬಜ್ ವರದಿಯ ಪ್ರಕಾರ, ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 2023ರ ಆಶಸ್ ಟೆಸ್ಟ್ ಸರಣಿಯಲ್ಲಿ ಕಾಮೆಂಟರಿ ತಂಡದ ಭಾಗವಾಗಿರುವ ಜಸ್ಟಿನ್ ಲ್ಯಾಂಗರ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಮ್ಯಾನೇಜ್‌ಮೆಂಟ್ ಸಂಪರ್ಕಿಸಿದೆ.

ಎರಡೂ ಕಡೆಗಳಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬೀಳದಿದ್ದರೂ, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಜಸ್ಟಿನ್ ಲ್ಯಾಂಗರ್‌ಗೆ ಮಾಜಿ ಮುಖ್ಯ ಕೋಚ್ ಆಂಡಿ ಫ್ಲವರ್ ಅವರ ಹುದ್ದೆಯನ್ನು ವಹಿಸಲು ಉತ್ಸುಕವಾಗಿದೆ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ 2021ರಲ್ಲಿ ಆಸ್ಟ್ರೇಲಿಯಾ ತಂಡ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಾಗ ಮುಖ್ಯ ಕೋಚ್ ಆಗಿದ್ದರು ಮತ್ತು ಆಸೀಸ್ ತಂಡ 4-0 ಅಂತರದಲ್ಲಿ ಆಶಸ್ ಟೆಸ್ಟ್ ಸರಣಿ ವಿಜಯದ ಭಾಗವಾಗಿದ್ದರು.

IPL 2024: Australia Former Cricketer Justin Langer To Be The Head Coach of Lucknow Super Giants

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸಿನ ಹೊರತಾಗಿ, ಜಸ್ಟಿನ್ ಲ್ಯಾಂಗರ್ ಅವರು ಆಸ್ಟ್ರೇಲಿಯಾದ ಪ್ರಮುಖ ದೇಶೀಯ ಪಂದ್ಯಾವಳಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅದ್ಭುತವಾಗಿ ಮಾರ್ಗದರ್ಶನ ಮಾಡಿದ್ದಾರೆ. ಪರ್ತ್ ಸ್ಕಾರ್ಚರ್ಸ್ ತಂಡದೊಂದಿಗೆ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಆಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಸತತವಾಗಿ ಪ್ಲೇಆಫ್ ಪ್ರವೇಶಿಸಿದ ಎಲ್‌ಎಸ್‌ಜಿ

52 ವರ್ಷದ ಜಸ್ಟಿನ್ ಲ್ಯಾಂಗರ್ ಅವರು ಆಟಗಾರರು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗಿನ ಜಗಳದ ನಂತರ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಪಾತ್ರದಿಂದ ವಿವಾದಾತ್ಮಕವಾಗಿ ರಾಜೀನಾಮೆ ನೀಡಿದರು. ಆ ಬಳಿಕ ಯಾವುದೇ ಕೋಚ್ ಹುದ್ದೆಯನ್ನು ಪಾತ್ರವನ್ನು ವಹಿಸಿಕೊಂಡಿಲ್ಲ.

ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸ್ ಮತ್ತು ಮಾಜಿ ಮುಖ್ಯ ಕೋಚ್ ಮಾತುಕತೆ ನಡೆಸುತ್ತಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

ಗಮನಾರ್ಹವಾಗಿ ಸಂಜೀವ್ ಗೋಯೆಂಕಾ ಮಾಲೀಕತ್ವದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸ್ ತಮ್ಮ ಎರಡು ಋತುಗಳಲ್ಲಿ ಆಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಅತ್ಯುತ್ತಮ ಯಶಸ್ಸು ಅನುಭವಿಸಿದೆ. ಸತತ ಎರಡು ವರ್ಷ ಪ್ಲೇಆಫ್ ಹಂತಗಳಿಗೆ ಅರ್ಹತೆ ಗಳಿಸಿದೆ.

ಆದರೆ, ನಿರ್ಣಾಯಕ ಪಂದ್ಯಗಳಲ್ಲಿ ತಂಡದ ಆಟಗಾರರು ಸಂದರ್ಭಕ್ಕೆ ತಕ್ಕಂತೆ ಆಟವಾಡಲು ಸಾಧ್ಯವಾಗಲಿಲ್ಲ. 2021ರಲ್ಲಿ ಐಪಿಎಲ್ ಪ್ರವೇಶಿಸಿದ ಲಕ್ನೋ ಸೂಪರ್ ಜೈಂಟ್ಸ್ ಕಳೆದ ಎರಡು ವರ್ಷಗಳಲ್ಲಿ ಮೂರನೇ ಸ್ಥಾನ ಗಳಿಸಿದೆ.

Story first published: Tuesday, July 11, 2023, 12:06 [IST]
Other articles published on Jul 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+