ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಕ್ರಿಕೆಟ್ ಲೋಕದ ಸ್ಪೋಟಕ ಬ್ಯಾಟರ್‌ಗಳಲ್ಲಿ ಒಬ್ಬರು. ಈ ಎಡಗೈ ಆರಂಭಿಕ ಆಟಗಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತಿ ಹೆಚ್ಚು ಅರ್ಧಶತಕಗಳಿಸಿ ದಾಖಲೆ ಬರೆದಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಭಾಗವಾಗಿದ್ದಾರೆ.
ಇದರ ಜೊತೆಗೆ ಐಪಿಎಲ್‌ನಲ್ಲೂ ಆನೇಕ ಬಾರಿ ಡೇವಿಡ್ ವಾರ್ನರ್ ಪಂದ್ಯದ ವೇಳೆ ಆಸಕ್ತಿದಾಯಕವಾದ್ದನ್ನು ಮಾಡುತ್ತ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ ಕ್ರಿಕೆಟ್ ಆಟಕ್ಕೆ ಸೀಮಿತವಾಗಿರದ ವಾರ್ನರ್ ಭಾರತೀಯ ಸಿನಿಮಾಗಳು ಮತ್ತು ಸಂಸ್ಕೃತಿಯ ಬಗ್ಗೆ ಸಾಕಷ್ಟು ಪ್ರೀತಿಯನ್ನು ಹೊಂದಿದ್ದು, ಈ ಬಗ್ಗೆ ಹಲವು ಬಾರಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದೀಗ ಎಲ್ಲರನ್ನು ಮತ್ತೆ ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡಿರುವ ವಾರ್ನರ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಏಪ್ರಿಲ್ 24 ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಐಪಿಎಲ್ 40ನೇ ಪಂದ್ಯದಲ್ಲಿ ಶುಭ್ಮನ್ ಗಿಲ್ ನೇತೃತ್ವ ಗುಜರಾತ್ ಟೈಟನ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲಿದೆ.
ಈ ಹಿನ್ನೆಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಭ್ಯಾಸದಲ್ಲಿ ತೊಡಗಿದ್ದು, ಈ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಮುನ್ನಲೆಗೆ ಬಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಧಿಕೃತ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ವಾರ್ನರ್ ಅವರ ವಿಡಿಯೋವೊಂದನ್ನು ವೈರಲ್ ಮಾಡಲಾಗಿದೆ.

ಈ ವಿಡಿಯೋದಲ್ಲಿ ವಾರ್ನರ್ ಮತ್ತು ಒಬ್ಬ ವ್ಯಕ್ತಿ ನಡುವಿನ ಸಂಭಾಷಣೆ ಆರ್ಕಷಣೆಯಾಗಿದೆ. ವ್ಯಕ್ತಿ ಮೊದಲು ಸಿನಿಮಾ ನೋಡಲು ಹೋಗೋಣ ಎಂದು ಕೇಳುತ್ತಾನೆ, ಆಗ ವಾರ್ನರ್ ಆಗುವುದಿಲ್ಲ ಎಂದು ಹೇಳುತ್ತಾರೆ. ಬಳಿಕ ಅಲ್ಲಿ ಸಮಾರಂಭ ನಡೆಯುತ್ತಿದೆ ಊಟ ಮಾಡಲು ಹೋಗೋಣ ಎಂದು ಕೇಳುತ್ತಾನೆ, ವಾರ್ನರ್ ಮತ್ತೆ ಇಲ್ಲ ಎನ್ನುತ್ತಾರೆ.
ನಂತರ ಅಲ್ಲಿ ನೋಡು ಹುಡುಗಿ ಎಷ್ಟು ಸುಂದರವಾಗಿದ್ದಾಳೆ ಎಂದು ಆಮಿಷ ಒಡ್ಡುತ್ತಾನೆ, ಅವಾಗಲೂ ವಾರ್ನರ್ ಯಾವುದೇ ಪ್ರತಿಕ್ರಿತೆ ನೀಡುವುದಿಲ್ಲ. ಕೊನೆಯದಾಗಿ ಅಲ್ಲಿ ಆರ್ಧಾರ್ ಕಾರ್ಡ್ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಂತೆ ವಾರ್ನರ್ ಆ ವ್ಯಕ್ತಿಯನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು ಓಡಿ ಹೋಗುತ್ತಾರೆ. ವಾರ್ನರ್ ಅವರಿಗೆ ಭಾರತ ದೇಶ ಹಾಗು ಭಾರತೀಯರ ಮೇಲೆ ಎಷ್ಟರ ಮಟ್ಟಿಗೆ ಪ್ರೇಮಾಂಕುರವಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.
2023ರ ಪುರುಷರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಆಸ್ಟ್ರೇಲಿಯಾ ತವರಿನಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಅವಾಗಲೂ ಕೂಡ ವಾರ್ನರ್ ಭಾರತೀಯರಿಗೆ ಪ್ರಶಸ್ತಿ ಗೆದ್ದಿದಕ್ಕೆ ಕ್ಷಮೆಯಾಚಿಸಿದ್ದರು. ಇತ್ತೀಚೆಗೆ ಕೂಡ ತೆಲುಗಿನ ಸೂಪರ್ ಹಿಟ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಜೊತೆಗೆ ವಾರ್ನರ್ ಕ್ರೆಡ್ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸಾಕಷ್ಟು ಸುದ್ದಿಯಾಗಿದ್ದರು.
ಈ ಹಿಂದೆ ವಾರ್ನರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದರಲ್ಲಿ ಆಧಾರ್ ಕಾರ್ಡ್ ಪಡೆಯಲು ಅರ್ಹನಾಗಿದ್ದೇನೆ ಎಂದು ಬರೆದುಕೊಂಡಿದ್ದರು. ಭಾರತದಲ್ಲಿ ಕ್ರಿಕೆಟ್ ಆಡುತ್ತಿರುವುದು ನನಗೆ ಆನೇಕ ವಿಷಯಗಳನ್ನು ಪರಿಚಯಿಸಿದೆ. ನಾನು ಮೆಚ್ಚಿದನ್ನು ಪಡೆಯಬೇಕಾದರೆ ಅದು ಭಾರತೀಯ ಸಿನಿಮಾಗಳಾಗಬಹುದು. ಪುಷ್ಪ, ಬಾಹುಬಲಿ, ಆರ್‌ಆರ್‌ಆರ್ ಈ ಅದ್ಭುತ ಚಿತ್ರಗಳನ್ನು ನಾನು ಎಷ್ಟು ಬಾರಿ ನೋಡಿದ್ದೇನೆ ಎಂಬ ಲೆಕ್ಕವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದರು.