IPL 2024: ಗ್ರೌಂಡ್ಸ್‌ಮೆನ್, ಪಿಚ್ ಕ್ಯುರೇಟರ್ಸ್‌ಗೆ ಭಾರೀ ಮೊತ್ತದ ಬಹುಮಾನ ಘೋಷಿಸಿದ ಬಿಸಿಸಿಐ
ಭಾನುವಾರ, ಮೇ 26ರಂದು ಮುಕ್ತಾಯಗೊಂಡ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂದರ್ಭದಲ್ಲಿ ಗ್ರೌಂಡ್ಸ್‌ಮೆನ್ ಮತ್ತು ಪಿಚ್ ಕ್ಯುರೇಟರ್‌ಗಳಿಗೆ ಭಾರೀ ಮೊತ್ತದ ಬಹುಮಾನವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿದ ನಂತರ 17ನೇ ಆವೃತ್ತಿಯ ಪಂದ್ಯಾವಳಿಗೆ ತೆರೆ ಬಿದ್ದಿತು.

ಇದೇ ವೇಳೆ 10 ಸಾಮಾನ್ಯ ಸ್ಥಳಗಳ ಮೈದಾನದ ಸಿಬ್ಬಂದಿಯು "ಶ್ಲಾಘನೆಯ ಟೋಕನ್' ಆಗಿ ತಲಾ 25 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದರು. ಗುವಾಹಟಿ, ಧರ್ಮಶಾಲಾ ಮತ್ತು ವಿಶಾಖಪಟ್ಟಣದ ಇತರ 3 ಹೆಚ್ಚುವರಿ ಸ್ಥಳಗಳ ಮೈದಾನದ ಸಿಬ್ಬಂದಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನವನ್ನು ಜಯ್ ಶಾ ಘೋಷಿಸಿದರು.
"ನಮ್ಮ ಯಶಸ್ವಿ ಟಿ20 ಆವೃತ್ತಿಯ ಅಸಾಧಾರಣ ಹೀರೋಗಳು, ಮೈದಾನಗಳ ಸಿಬ್ಬಂದಿ. ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಹ ಅದ್ಭುತವಾದ ಪಿಚ್‌ಗಳನ್ನು ಒದಗಿಸಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ".
"ನಮ್ಮ ಶ್ಲಾಘನೆಯ ಸಂಕೇತವಾಗಿ 10 ಸಾಮಾನ್ಯ ಐಪಿಎಲ್ ಸ್ಥಳಗಳ ಗ್ರೌಂಡ್ಸ್‌ಮೆನ್ ಮತ್ತು ಕ್ಯುರೇಟರ್‌ಗಳು ತಲಾ 25 ಲಕ್ಷ ರೂಪಾಯಿಗಳನ್ನು ಸ್ವೀಕರಿಸುತ್ತಾರೆ. 3 ಹೆಚ್ಚುವರಿ ಸ್ಥಳಗಳ ಗ್ರೌಂಡ್ಸ್‌ಮೆನ್ ಮತ್ತು ಕ್ಯುರೇಟರ್‌ಗಳು ತಲಾ 10 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು," ಎಂದಿ ಜಯ್ ಶಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದಾಖಲೆ ಬರೆದ 2024ರ ಐಪಿಎಲ್
ಎಲ್ಲಾ 10 ತಂಡಗಳು ಬ್ಯಾಟಿಂಗ್ ಅಬ್ಬರಿಸಿದ್ದರಿಂದ ಐಪಿಎಲ್ 2024ರ ಪಂದ್ಯಾವಳಿ ರನ್‌ಗಳಿಂದ ತುಂಬಿತ್ತು. ಎಲ್ಲಾ ಪಿಚ್‌ಗಳು ಸಂಪೂರ್ಣ ಬ್ಯಾಟಿಂಗ್ ಸ್ನೇಹಿಗಳಾಗಿ ಹೊರಹೊಮ್ಮಿದ್ದರಿಂದ ಪಂದ್ಯಾವಳಿಯುದ್ದಕ್ಕೂ ದಾಖಲೆಗಳು ರಚಿಸಲ್ಪಟ್ಟವು.
ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲಲು ವಂಚಿತವಾದ ಸನ್ ರೈಸರ್ಸ್ ಹೈದರಾಬಾದ್ ತಂಡ, ಕಳೆದ ತಿಂಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡವನ್ನು ಎದುರಿಸಿದಾಗ 3 ವಿಕೆಟ್‌ಗೆ 287 ರನ್ ಗಳಿಸಿ ಐಪಿಎಲ್‌ನಲ್ಲಿ ಅತ್ಯಧಿಕ ತಂಡದ ಸ್ಕೋರ್‌ನ ದಾಖಲೆಯನ್ನು ನಿರ್ಮಿಸಿತು.
ಇದಕ್ಕೂ ಮೊದಲು, ಸನ್ ರೈಸರ್ಸ್ ತಂಡ ಹೈದರಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 3 ವಿಕೆಟ್‌ಗೆ 277 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು.
ಪಂಜಾಬ್ ಕಿಂಗ್ಸ್ ತಂಡವು ಪ್ಲೇಆಫ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ರನ್-ಚೇಸ್ ದಾಖಲೆಯನ್ನು ಸ್ಥಾಪಿಸಿದರು. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನೈಟ್ ರೈಡರ್ಸ್ ವಿರುದ್ಧ 262 ರನ್‌ಗಳ ಚೇಸ್ ಮಾಡಿದರು.
2024ರ ಪಂದ್ಯಾವಳಿಯಲ್ಲಿ 1260 ಸಿಕ್ಸರ್‌ಗಳು ಸಿಡಿಯಲ್ಪಟ್ಟವು. ಐಪಿಎಲ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು ಬಂದಿವೆ. ಎರಡು ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೇಕ್ ಫ್ರೇಸರ್-ಮೆಕ್‌ಗುರ್ಕ್ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.
ಸುನಿಲ್ ನರೈನ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳು ಅತ್ಯುತ್ತಮ ನಿಖರತೆಯೊಂದಿಗೆ ಬೌಲಿಂಗ್ ಮಾಡಿ ತಮ್ಮ ಸಂತೋಷದ ಪಾಲು ಹೊಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications