For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಆ ಒಂದು ನಿರ್ಧಾರ ಆಟಗಾರರ ಮುಖದಲ್ಲಿ ಮೂಡಿಸಿದೆ ಮಂದಹಾಸ: ಈ ಬಾರಿಯಿಂದ ಹೊಸ ನಿಯಮ ಜಾರಿ?

18ನೇ ಆವೃತ್ತಿಯ ಐಪಿಎಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ಲೀಗ್‌ನಲ್ಲಿ ಭಾಗವಹಿಸಲು 10 ತಂಡಗಳು ಈಗಾಗಲೇ ಭರದ ಅಭ್ಯಾಸವನ್ನು ನಡೆಸಿವೆ. ಹಲವು ತಂಡಗಳು ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವ ದೃಷ್ಟಿಯಿಂದ ಚಿತ್ತವನ್ನು ನೆಟ್ಟಿವೆ. ಈ ವೇಳೆ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಆಟಗಾರರ ಜೇಬು ಮಾತ್ರ ಭರ್ತಿ ಆಗಿರಲಿದೆ. ಈ ಹಿಂದೆ ಎಂದಿಗೂ ತಂದಿರದ ಹೊಸ ನಿಯಮವನ್ನು ಬಿಸಿಸಿಐ ಜಾರಿಗೆ ಮಾಡಿದೆ. ಈ ನಿಯಮದಿಂದ ಆಟಗಾರರ ಬ್ಯಾಂಕ್‌ ಬ್ಯಾಲೆನ್ಸ್‌ ಸ್ಥಿರವಾಗಿ ಏರಿಕೆ ಆಗಲಿದೆ.

ಈ ಬಾರಿಯ ಐಪಿಎಲ್‌ ಮಾರ್ಚ್‌ 22 ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಕಾದಾಟ ನಡೆಸಲಿವೆ. ಈ ಬಾರಿಯ ಐಪಿಎಲ್‌ನಲ್ಲಿ ಹರಾಜಿನಲ್ಲಿ ಆಟಗಾರರಿಗೆ ಫ್ರಾಂಚೈಸಿಗಳು ನೀಡಿದ ಹಣಕ್ಕಿಂತ ಹೆಚ್ಚಿನ ಹಣ ಸಿಗಲಿದೆ. ಅದು ಹೇಗೆ ಎಂಬ ಬಗ್ಗೆ ಕುತೂಹಲ ನಿಮಗೆ ಇದ್ದಲ್ಲಿ ಈ ವರದಿ ನೋಡಿ.

IPL 2024 BCCI Introduces Match Fees of 7 5 Lakh Per Game for Players

ಐಪಿಎಲ್‌ನಲ್ಲಿ ಆಡುತ್ತಿರುವ ಪ್ರತಿ ಆಟಗಾರ ಈ ಬಾರಿ ಪಂದ್ಯ ಶುಲ್ಕವನ್ನು ಪಡೆಯಲಿದ್ದಾನೆ ಎಂದು ಬಿಸಿಸಿಐ ಈ ಮೊದಲೇ ತಿಳಿಸಿತ್ತು. ಈ ಒಂದು ಘೋಷಣೆ ನಿಜಕ್ಕೂ ಹಲವು ಆಟಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇಂತಹ ನಿಯಮಗಳನ್ನು ಈ ಹಿಂದೆಯೂ ಜಾರಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿಂದೆ ಆಟಗಾರರು ಹರಾಜಿನಲ್ಲಿ ಪಡೆದ ಹಣ ಹಾಗೂ ಜಾಹೀರಾತಿ ಮೂಲಕ ಹಣವನ್ನು ಗಳಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಬಿಸಿಸಿಐ, ಆಟಗಾರರಿಗೆ ಪಂದ್ಯದ ಶುಲ್ಕವನ್ನು ನೀಡುವ ನಿರ್ಧಾರವನ್ನು ಮಾಡಿದೆ. ಇದು ನೀಡುವ ಹಣಕ್ಕಿಂತ ಭಿನವಾಗಿದೆ.

ಪ್ರತಿ ಆಟಗಾರನಿಗೆ ಎಷ್ಟು ಸಂಭವಾನೆ?

ಈ ಐಪಿಎಲ್‌ನಲ್ಲಿ ಪ್ರತಿ ಪಂದ್ಯವನ್ನು ಆಡುವ ಆಟಗಾರ 7.5 ಲಕ್ಷ ರೂಪಾಯಿ ಪಂದ್ಯ ಶುಲ್ಕವನ್ನು ಪಡೆಯಲಿದ್ದಾನೆ ಎಂದು ಈ ಮೊದಲೇ ಬಿಸಿಸಿಐ ತಿಳಿಸಿತ್ತು. ಆಟಗಾರನ ಪಂದ್ಯಗಳ ಸಂಖೆಗೆ ಈ ಮೊತ್ತ ಏರಿಕೆ ಆಗುತ್ತದೆ. ಅಂದರೆ ಒಬ್ಬ ಪ್ಲೇಯರ್‌ ಲೀಗ್‌ ಹಂತದ 14 ಪಂದ್ಯಗಳನ್ನು ಆಡಿದ್ರೆ ಆತ ಸರಿ ಸುಮಾರು 1 ಕೋಟಿ ರೂಪಾಯಿ ಪಡೆಯಲಿದ್ದಾನೆ. ನಿಶ್ಚಿತವಾಗಿ ಪಂದ್ಯಗಳ ಸಂಖ್ಯೆ ಕಡಿಮೆ ಆದಲ್ಲಿ ಆಟಗಾರನಿಗೆ ಸಿಗುವ ಪಂದ್ಯದ ಶುಲ್ಕವೂ ಸಹ ಕಡಿಮೆ ಆಗುತ್ತದೆ. ಪ್ಲೇ ಆಫ್‌ ಹಂತದ ಪಂದ್ಯಗಳನ್ನು ಆಡಿದ ಆಟಗಾರನ ಪಂದ್ಯದ ಶುಲ್ಕ 1 ಕೋಟಿ ರೂಪಾಯಿಗೂ ಹೆಚ್ಚಾಗುತ್ತದೆ.

IPL 2024 BCCI Introduces Match Fees of 7 5 Lakh Per Game for Players

ಯಾರಿಗೆ ಲಾಭ?

ಕಡಮಿ ಮೊತ್ತಕ್ಕೆ ತಂಡವನ್ನು ಸೇರಿಕೊಂಡು ಭರ್ಜರಿ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಇದರ ಲಾಭವಾಗಲಿದೆ. ಯುವ ಹಾಗೂ ಅನುಭವಿ ಆಟಗಾರ ಉತ್ತಮ ಪ್ರದರ್ಶನ ಆಡಿದಲ್ಲಿ ಆತ ಆಡುವ ಪಂದ್ಯಗಳ ಸಂಖ್ಯೆಯೂ ನಿವ್ವಳವಾಗಿ ಹೆಚ್ಚಾಗುತ್ತದೆ. ಈ ನಿಯಮ ಪಂದ್ಯದಲ್ಲಿ ಆಡುವ ಆಟಗಾರರಿಗೆ ಮಾತ್ರ ಅನ್ವಯವಾಗುತ್ತದೆ. ಬೆಂಚ್ ಕಾಯುವ ಆಟಗಾರನಿಗೆ ಇದರಿಂದ ಯಾವುದೇ ಲಾಭವಿಲ್ಲ. ಈ ಶುಲ್ಕಗಳು ಭಾರತೀಯ, ವಿದೇಶಿ ಆಟಗಾರರು, ದೇಶೀಯ ಆಟಗಾರರು, ಅನ್‌ಕ್ಯಾಪ್ಡ್‌ ಪ್ಲೇಯರ್‌ ಎಲ್ಲರಿಗೂ ಅನ್ವಯವಾಗುತ್ತದೆ.

Story first published: Thursday, March 20, 2025, 21:54 [IST]
Other articles published on Mar 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+