IPL 2025: ಐಪಿಎಲ್‌ನಲ್ಲಿ 2 ಹೊಸ ನಿಯಮಗಳ ಸೇರ್ಪಡೆ: ಏನದು ನಿಯಮ?
ಐಪಿಎಲ್ ಇನ್ನೇನು ಎರಡು ದಿನಗಳಲ್ಲಿ ಆರಂಭವಾಗಲಿದೆ. ಈ ಲೀಗ್‌ಗೂ ಮುನ್ನ ಮುಂಬೈನಲ್ಲಿ ಬಿಸಿಸಿಐ ಎಲ್ಲ ನಾಯಕರ ಫೋಟೋ ಶೂಟ್ ನಡೆಸಿದೆ. ಅಲ್ಲದೆ ಬಿಸಿಸಿಐ ಎಲ್ಲ ನಾಯಕರೊಂದಿಗೆ ಸಭೆ ನಡೆಸಿದೆ. ಈ ಸಭೆಯಲ್ಲಿ ಎರಡು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ನಿಯಮಗಳು ಈ ಬಾರಿಯ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿವೆ. ಬಿಸಿಸಿಐ ಈಗ ತೆಗೆದುಕೊಂಡು ಬರಲು ಹೊರಟಿದ್ದ ನಿರ್ಧಾರದ ಬಗ್ಗೆ ಹಲವು ದಿನಗಳಿಂದ ಯೋಚನೆಯನ್ನು ಮಾಡಿತ್ತು ಈಗ ಇದಕ್ಕೆ ಅಂತಿಮ ಮುದ್ರೆ ಬಿದ್ದಿದೆ.
ಬಿಸಿಸಿಐ ತೆಗೆದುಕೊಂಡ ಈ ನಿರ್ಧಾರಗಳು ಪಂದ್ಯವನ್ನು ಇನ್ನು ರೋಚಕಗೊಳಿಸುತ್ತವೆ ಎಂಬುದನ್ನು ನಂಬಲಾಗಿದೆ. ಈ ಎರಡು ನಿರ್ಧಾರಗಳಿಂದ ಬಿಸಿಸಿಐ ಹಲವರನ್ನು ಚಕಿತ ಗೊಳಿಸಿದೆ. ಈ ಎರಡು ನಿರ್ಧಾರಗಳು ಖಂಡಿತವಾಗಿಯೂ ಪಂದ್ಯದಲ್ಲಿ ವ್ಯತ್ಯಾಸ ತರುವಂತಹದ್ದು ಎಂದು ನಂಬಲಾಗಿದೆ. ಬಿಸಿಸಿಐ ಈ ನಿಯಮಗಳಿಗೆ ಎಲ್ಲ ನಾಯಕರ ಸಭೆಯಲ್ಲಿ ಮುದ್ರೆಯನ್ನು ಒತ್ತಿದೆ.

ಏನು ಹೊಸ ನಿಯಮ?
ಐಪಿಎಲ್‌ನ ಆ ಒಂದು ಹೊಸ ನಿಯಮ ನಿಜಕ್ಕೂ ಬೌಲರ್‌ಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅದೆನಂದ್ರೆ ಬೌಲರ್‌ಗಳು ಇನ್ನು ಮುಂದೆ ಚೆಂಡಿನ ಶೈನ್ ಹೆಚ್ಚಿಸಲು ಲಾಲಾರಸವನ್ನು ಬಳಸಬಹುದು ಎಂಬ ನಿರ್ಧಾರಕ್ಕೆ ಬಂದಿದೆ. 2020ಕ್ಕೂ ಮೊದಲು ಬೌಲರ್‌ಗಳು ಚೆಂಡಿನ ಹೊಳಪಿಗಾಗಿ ಲಾಲಾರಸವನ್ನು ಬಳಸುತ್ತಿದ್ದರು.ಆದರೆ ಆ ಬಳಿಕ ಐಸಿಸಿ ಇದನ್ನು ಸ್ಥಗಿತಗೊಳಿಸಿತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ನಿಯಮ ಇನ್ನೂ ಜಾರಿಯಲ್ಲಿದೆ, ಆದರೆ ಬಿಸಿಸಿಐ ಒಂದು ಹೆಜ್ಜೆ ಮುಂದೆ ಹೋಗಿದೆ. ಐಪಿಎಲ್‌ನಲ್ಲಿ ಬೌಲರ್‌ಗಳು ಚೆಂಡಿಗೆ ಹೊಳಪು ತರಲು ಲಾವಾರಸವನ್ನು ಬಳಸಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಇದು ಬೌಲರ್‌ಗಳಿಗೆ ಸ್ವಿಂಗ್ ಮಾಡಲು ನೆರವಾಗುತ್ತದೆ.
ಇಬ್ಬನಿಯಿಂದ ಆಗುವ ತೊಂದರೆಗಳನ್ನು ತಪ್ಪಿಸಲು ಬಿಸಿಸಿಐ ಮತ್ತೊಂದು ನಿಯಮವನ್ನು ಜಾರಿಗೆ ತಂದಿದೆ. ಅಂದಹಾಗೆ ಐಪಿಎಲ್ ಪಂದ್ಯದಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಇನ್ನು ಎರಡು ಚೆಂಡುಗಳು ಸಿಗಲಿವೆ. ಎರಡನೇ ಇನಿಂಗ್ಸ್‌ನ 11 ಓವರ್‌ಗಳ ಬಳಿಕ, 12ನೇ ಓವರ್ ಆರಂಭದಲ್ಲಿ ಹೊಸ ಚೆಂಡನ್ನು ನೀಡಲಾಗುತ್ತದೆ. ಹೆಚ್ಚಿನ ಐಪಿಎಲ್ ಪಂದ್ಯಗಳು ಸಂಜೆ ನಡೆಯುವುದರಿಂದ ಇಬ್ಬನಿ ಕಾಣಿಸಿಕೊಳುತ್ತದೆ. ಇದು ಬೌಲರ್‌ಗಳು ಹಾಗೂ ಫೀಲ್ಡರ್‌ಗಳಿಗೆ ಹಾನಿಯುಂಟು ಮಾಡುತ್ತದೆ. ಟಾಸ್ ಗೆದ್ದ ತಂಢ ಪಂದ್ಯವನ್ನು ಗೆಲ್ಲುತ್ತದೆ ಎಂಬ ಲೆಕ್ಕಾಚಾರಗಳು ಈ ಮೊದಲು ಇದ್ದವು. ಇದನ್ನು ತಪ್ಪಿಸಲು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿದೆ.

ಅಂಪೈರ್‌ಗಳ ಬಿಟ್ಟ ನಿರ್ಧಾರ
ಎರಡನೇ ಹೊಸ ಚೆಂಡಿನ ಬಳಕೆಗೆ ಬಿಸಿಸಿಐ ಒಂದು ಷರತ್ತನ್ನು ಸಹ ಹಾಕಿದೆ. ಪಂದ್ಯದ ವೇಳೆ ಚೆಂಡನ್ನು ಬದಲಿಸುವ ನಿರ್ಧಾರವನ್ನು ಅಂಪೈರ್‌ಗಳು ತೆಗೆದುಕೊಳ್ಳಲಿದ್ದಾರೆ. ಈ ನಿರ್ಧಾರವನ್ನು ಅಂಪೈರ್‌ಗಳು ಕೈಗೊಳ್ಳಿದ್ದಾರೆ. 11 ಓವರ್ ಬಳಿಕ ಚೆಂಡನ್ನು ಬದಲಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರವನ್ನು ಅಂಪೈರ್‌ಗಳು ತೆಗೆದುಕೊಳ್ಳಲಿದ್ದಾರೆ. ಮಧ್ಯಾಹ್ನ ನಡೆಯುವ ಪಂದ್ಯದಲ್ಲಿ ಎರಡನೇ ಚೆಂಡಿನ ಅವಶ್ಯಕತೆ ಬೀಳುವುದಿಲ್ಲ. ಸಂಜೆ ನಡೆಯುವ ಪಂದ್ಯಗಳಲ್ಲಿ ಇದರ ಅವಶ್ಯಕತೆ ಅಧಿಕವಾಗಿರುತ್ತದೆ.
ಈ ನಿಯಮದಲ್ಲಿ ಬದಲಾವಣೆ ಇಲ್ಲ
ಐಪಿಎಲ್‌ನಲ್ಲಿ ಬಹು ಚರ್ಚಾ ವಸ್ತುವಾಗಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಈ ಬಾರಿಯೂ ಮುಂದುವರಿಸುವದಾಗಿ ಬಿಸಿಸಿಐ ತಿಳಿಸಿದೆ. ಈ ನಿಯಮವನ್ನು 2023ರಲ್ಲಿ ಜಾರಿಗೆ ತರಲಾಗಿತ್ತು. ಈ ನಿಯಮದ ಬಗ್ಗೆ ಅನೇಕ ಹಾಲಿ ಹಾಗೂ ಮಾಜಿ ಆಟಗಾರರು ಹೇಳಿಕೆಗಳನ್ನು ನೀಡಿದ್ದರು. ಈ ನಿಯಮ ಆಲ್‌ರೌಂಡರ್ ಆಟಗಾರರ ಪ್ರಾಮುಖ್ಯತೆ ತಿಳಿಸುತ್ತದೆ. ಈ ನಿಯಮ 2027ರ ವರೆಗೆ ಜಾರಿ ಇರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications