IPL 2024: ಮುಂಬೈ ಇಂಡಿಯನ್ಸ್‌ಗೆ ಮತ್ತೊಂದು ಆಘಾತ; 4.60 ಕೋಟಿ ಮೊತ್ತದ ದುಬಾರಿ ಆಟಗಾರನಿಗೆ ಗಾಯ!
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಗಾಗಿ ಭಾರತದಲ್ಲಿ ಕ್ರಿಕೆಟ್ ಜ್ವರ ಅತ್ಯುನ್ನತ ಮಟ್ಟ ತಲುಪಿದ್ದು, ಉದ್ಘಾಟನಾ ಪಂದ್ಯಕ್ಕೆ ಕೇವಲ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಮಾರ್ಚ್ 22ರಂದು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಮೊದಲ ಪಂದ್ಯ ನಡೆಯಲಿದೆ.
ಇದೇ ವೇಳೆ ಬಾಂಗ್ಲಾದೇಶ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಿಂದ ಶ್ರೀಲಂಕಾ ವೇಗದ ಬೌಲರ್ ದಿಲ್ಶಾನ್ ಮಧುಶಂಕ ಹೊರಗುಳಿದಿದ್ದಾರೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ದಿಲ್ಶನ್ ಮಧುಶಂಕ ಕೆಲವು ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಲು ಸಿದ್ಧರಾಗಿದ್ದಾರೆ. ಇದು ಐದು ಬಾರಿಯ ಚಾಂಪಿಯನ್ ತಂಡಕ್ಕೆ ಭಾರೀ ಹಿನ್ನಡೆ ತಂದೊಡ್ಡಿದೆ.

ಶುಕ್ರವಾರ, ಮಾರ್ಚ್ 15ರಂದು ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ನಡೆದ 2ನೇ ಪಂದ್ಯದ ವೇಳೆ ವೇಗಿ ದಿಲ್ಶನ್ ಮಧುಶಂಕ ಎಡ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡೂ ಪಂದ್ಯಗಳಲ್ಲಿ ದಿಲ್ಶನ್ ಮಧುಶಂಕ 5.04ರ ಎಕಾನಮಿ ದರದಲ್ಲಿ 4 ವಿಕೆಟ್ ಪಡೆದರು. ಇದೀಗ ಅವರು ಮಾರ್ಚ್ 18ರಂದು ನಡೆಯಲಿರುವ 3ನೇ ಏಕದಿನ ಪಂದ್ಯಕ್ಕಾಗಿ ಶ್ರೀಲಂಕಾ ತಂಡದಿಂದ ಹೊರಗುಳಿದಿದ್ದಾರೆ.
ಎಂಆರ್ಐ ಸ್ಕ್ಯಾನ್ ತನ್ನ ಗಾಯವನ್ನು ದೃಢಪಡಿಸಿದ ನಂತರ, ಸ್ಪೀಡ್‌ಸ್ಟರ್ ದಿಲ್ಶನ್ ಮಧುಶಂಕ ತನ್ನ ಪುನರ್ವಸತಿಗೆ ಹಿಂತಿರುಗಲಿದ್ದಾನೆ.
"ದಿಲ್ಶನ್ ಮಧುಶಂಕ ಅವರು ನಡೆಯುತ್ತಿರುವ ಪ್ರವಾಸದಲ್ಲಿ ಮುಂದುವರೆಯುವುದಿಲ್ಲ. ಏಕೆಂದರೆ ಬೌಲರ್ 2ನೇ ಏಕದಿನ ಪಂದ್ಯದ ವೇಳೆ ಗಾಯಗೊಂಡ ನಂತರ, ಪುನರ್ವಸತಿ ಕೆಲಸವನ್ನು ಪ್ರಾರಂಭಿಸಲು ಹಿಂತಿರುಗುತ್ತಾನೆ".
"ಎರಡನೇ ಏಕದಿನ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಮೈದಾನದಿಂದ ನಿರ್ಗಮಿಸಿದ ದಿಲ್ಶಾನ್ ಮಧುಶಂಕ ಎಡ ಮಂಡಿರಜ್ಜು ಗಾಯಕ್ಕೆ ಒಳಗಾಗಿರುವುದು ಆಟಗಾರನ ಮೇಲೆ ನಡೆಸಿದ ಎಂಆರ್‌ಐ ಸ್ಕ್ಯಾನ್‌ನಿಂದ ದೃಢಪಟ್ಟಿದೆ," ಎಂದು ಶ್ರೀಲಂಕಾ ಕ್ರಿಕೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮುಂಬೈ ಇಂಡಿಯನ್ಸ್‌ಗೆ ಆಘಾತ
ಕಳೆದ ವರ್ಷ ಭಾರತದ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅವರ ಪ್ರಭಾವಶಾಲಿ ಪ್ರದರ್ಶನದ ನಂತರ ದಿಲ್ಶನ್ ಮಧುಶಂಕ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆ ಮಾಡಲಾಯಿತು.
ಎಡಗೈ ವೇಗಿ ವಿಶ್ವಕಪ್‌ನ 8 ಪಂದ್ಯಗಳಿಂದ 5 ವಿಕೆಟ್ ಗೊಂಚಲು ಸೇರಿದಂತೆ 21 ವಿಕೆಟ್‌ಗಳನ್ನು ತನ್ನ ಹೆಸರಿಗೆ ಪಡೆದರೂ, ಶ್ರೀಲಂಕಾ ತಂಡ ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
2024ರ ಐಪಿಎಲ್‌ಗಾಗಿ ನಡೆದ ಮಿನಿ ಹರಾಜಿನಲ್ಲಿ ದಿಲ್ಶನ್ ಮಧುಶಂಕ 50 ಲಕ್ಷ ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದರು. ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಫ್ರಾಂಚೈಸಿಯೊಂದಿಗಿನ ಬಿಡ್ಡಿಂಗ್ ವಾರ್‌ನಲ್ಲಿ 4.60 ಕೋಟಿ ರೂಪಾಯಿ ಬೆಲೆಗೆ ಮುಂಬೈ ಇಂಡಿಯನ್ಸ್ ಖರೀದಿಸಿತು.
ದಿಲ್ಶನ್ ಮಧುಶಂಕ ಅವರ ಹೊರತಾಗಿ, ಮುಂಬೈ ಇಂಡಿಯನ್ಸ್ ತಂಡವು ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ನುವಾನ್ ತುಶಾರ ಅವರಲ್ಲಿ ಸಾಗರೋತ್ತರ ವೇಗದ ಬೌಲಿಂಗ್ ಆಯ್ಕೆಗಳನ್ನು ಸಹ ಹೊಂದಿದೆ.
2024ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯವು ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ವಿರುದ್ಧ ಭಾನುವಾರ, ಮಾರ್ಚ್ 24ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications