For Quick Alerts
ALLOW NOTIFICATIONS  
For Daily Alerts
 

IPL 2024: ಮುಂಬೈ ಇಂಡಿಯನ್ಸ್‌ಗೆ ಆಘಾತದ ಮೇಲೆ ಆಘಾತ; ಸ್ಟಾರ್ ಬೌಲರ್ ಔಟ್

ಮುಂಬರುವ ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುನ್ನ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಆಘಾತದ ಮೇಲೆ ಆಘಾತ ಎದುರಿಸುತ್ತಿದೆ.

2024ರ ಐಪಿಎಲ್ ಆರಂಭಕ್ಕೂ ಮುನ್ನ ಸ್ಟಾರ್ ಬೌಲರ್ ಜೇಸನ್ ಬೆಹ್ರೆಂಡಾರ್ಫ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅವರ ಬದಲಿಗೆ ಇಂಗ್ಲೆಂಡ್ ಬೌಲರ್ ಲ್ಯೂಕ್ ವುಡ್ ಅವರನ್ನು ಆಯ್ಕೆ ಮಾಡಿದೆ.

IPL 2024 Big Setback for Mumbai Indians Star bowler Jason Behrendorff is Rulled Out

ಕಳೆದ ವರ್ಷದ ಐಪಿಎಲ್‌ಗೆ ಮುನ್ನ ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಅವರ ಮಾಜಿ ತಂಡ ಮುಂಬೈ ಇಂಡಿಯನ್ಸ್‌ಗೆ ವ್ಯಾಪಾರ ಮಾಡಿತು. ಐಪಿಎಲ್ 2023ರಲ್ಲಿ ಆಡಿದ 12 ಪಂದ್ಯಗಳಲ್ಲಿ 27.64ರ ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಪಡೆದರು.

2024ರ ಐಪಿಎಲ್ ಹರಾಜಿಗೂ ಮುನ್ನ ಎಡಗೈ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು ಉಳಿಸಿಕೊಳ್ಳಲಾಗಿತ್ತು. ಆದಾಗ್ಯೂ, ಶ್ರೀಮಂತ ಕ್ರಿಕೆಟ್ ಲೀಗ್‌ನ 17ನೇ ಆವೃತ್ತಿಗೆ ಆರಂಭಕ್ಕೆ ಕೆಲವೇ ದಿನಗಳಿಗೂ ಮುನ್ನ ಗಾಯಗೊಂಡು ಹೊರಗುಳಿದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವು ತಮ್ಮ ಯೋಜನೆಗಳನ್ನು ಬದಲಿಸಿದ್ದು, ಗಾಯದ ಕಾರಣದಿಂದ ಹೊರಗುಳಿದ ನಂತರ ಜೇಸನ್ ಬೆಹ್ರೆನ್‌ಡಾರ್ಫ್ ಅವರ ಬದಲಿಯಾಗಿ ಇಂಗ್ಲೆಂಡ್ ವೇಗಿ ಲ್ಯೂಕ್ ವುಡ್ ಅವರನ್ನು ಕರೆತಂದಿದೆ. ಲ್ಯೂಕ್ ವುಡ್ ಎಡಗೈ ವೇಗಿಯಾಗಿದ್ದು, ಇಂಗ್ಲೆಂಡ್ ತಂಡದ ಪರ ಐದು ಟಿ20 ಮತ್ತು ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ.

IPL 2024 Big Setback for Mumbai Indians Star bowler Jason Behrendorff is Rulled Out

ಲ್ಯೂಕ್ ವುಡ್ ತಮ್ಮ ಟಿ20 ವೃತ್ತಿಜೀವನದಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ 50 ಲಕ್ಷ ರೂಪಾಯಿಗಳ ಅವರ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸ್‌ಗೆ ಆಯ್ಕೆ ಮಾಡಿಕೊಂಡಿದೆ.

28 ವರ್ಷದ ಲ್ಯೂಕ್ ವುಡ್ ಅವರು ಟಿ20 ಮಾದರಿಯಲ್ಲಿ ಅನುಭವದ ಸಂಪತ್ತನ್ನು ಹೊಂದಿದ್ದಾರೆ. ಅವರು ಕಡಿಮೆ ಸ್ವರೂಪದಲ್ಲಿ 140 ಪಂದ್ಯಗಳನ್ನು ಆಡಿದ್ದಾರೆ ಮತ್ತು 25.87ರ ಸರಾಸರಿಯಲ್ಲಿ ಮತ್ತು 18.30ರ ಸ್ಟ್ರೈಕ್ ರೇಟ್‌ನಲ್ಲಿ 147 ವಿಕೆಟ್‌ಗಳನ್ನು ಪಡೆದಿದ್ದಾರೆ.

ಲ್ಯೂಕ್ ವುಡ್ ಅವರ ಎಕಾನಮಿ ದರವು 8.45 ಆಗಿದ್ದು, ಅದು ಉತ್ತಮವಾಗಿಲ್ಲದಿದ್ದರೂ, ಆದರೆ ಕೆಲವು ಕಠಿಣ ಓವರ್‌ಗಳನ್ನು ಬೌಲ್ ಮಾಡುತ್ತಾರೆ. ಲ್ಯೂಕ್ ವುಡ್ ವಿವಿಧ ಫ್ರಾಂಚೈಸಿ ಪಂದ್ಯಾವಳಿಗಳಲ್ಲಿ ಆಡಲು ಪ್ರಪಂಚದ ವಿವಿಧ ಭಾಗಗಳಿಗೆ ಪ್ರಯಾಣಿಸಿದ್ದಾರೆ.

ಲ್ಯೂಕ್ ವುಡ್ ಅವರು ಪೇಶಾವರ್ ಝಲ್ಮಿ, ಸಿಲ್ಹೆಟ್ ಸ್ಟ್ರೈಕರ್ಸ್, ಮೆಲ್ಬೋರ್ನ್ ಸ್ಟಾರ್ಸ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ಮುಂತಾದ ತಂಡಗಳ ಭಾಗವಾಗಿದ್ದಾರೆ.

ಪಿಎಸ್ಎಲ್ 2024ರಲ್ಲಿ 12 ವಿಕೆಟ್ ಪಡೆದ ಲ್ಯೂಕ್ ವುಡ್

ಲ್ಯೂಕ್ ವುಡ್ ಇತ್ತೀಚೆಗೆ ಮುಕ್ತಾಯಗೊಂಡ 2024ರ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಬಾಬರ್ ಅಜಂ ನಾಯಕತ್ವದ ಪೇಶಾವರ್ ಝಲ್ಮಿ ತಂಡದ ಭಾಗವಾಗಿದ್ದರು.

ಪೇಶಾವರ್ ಝಲ್ಮಿ ತಂಡವು ಎಲಿಮಿನೇಟರ್ 2 ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧ ಸೋತರು. ಈ ಪಂದ್ಯಾವಳಿಯಲ್ಲಿ ಲ್ಯೂಕ್ ವುಡ್ ಆಡಿದ 11 ಪಂದ್ಯಗಳಲ್ಲಿ 29.08ರ ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಪಡೆದರು.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಲ್ಯೂಕ್ ವುಡ್ ಅವರು ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೋಯಟ್ಜಿ ಮತ್ತು ದಿಲ್ಶನ್ ಮಧುಶಂಕರಂತಹ ಸ್ಟಾರ್ ವೇಗಿಗಳೊಂದಿಗೆ ಆಡಲಿದ್ದಾರೆ.

Story first published: Tuesday, March 19, 2024, 7:01 [IST]
Other articles published on Mar 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+