IPL 2024: ವಿರಾಟ್ ಕೊಹ್ಲಿ ಆಡುತ್ತಾರೋ ಇಲ್ಲವೋ? ಬೆಳಕಿಗೆ ಬಂದು ದೊಡ್ಡ ಅಪ್‌ಡೇಟ್
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ಅಂಗಳದಿಂದ ದೂರ ಉಳಿದಿದ್ದಾರೆ. ಕೌಂಟುಬಿಕ ಕಾರಣಗಳನ್ನು ನೀಡಿದ್ದ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ವಿರಾಟ್ ಕೊಹ್ಲಿ ಅವರು ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಹೀಗಿರುವಾಗ ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನು ಯಾವುದೇ ಸುದ್ದಿಗಳು ಹೊರ ಬಂದಿರಲಿಲ್ಲ. ಆದರೆ ಈಗ ಈ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಈಗಾಗಲೇ ಆರ್‌ಸಿಬಿ ತಂಡ ಅಭ್ಯಾಸ ಶಿಭಿರವನ್ನು ಆರಂಭಿಸಿದೆ. ಈ ಶಿಭಿರದಲ್ಲಿ ದೇಶ ವಿದೇಶದ ಸ್ಟಾರ್ ಆಟಗಾರರು ಕ್ಯಾಂಪ್ ಸೇರಿದ್ದಾರೆ. ಆರ್‌ಸಿಬಿ ನಾಯಕ ಫಾಫ್ ಡುಪ್ಲೇಸಿಸ್ ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ ರೀತಿಯ ಸ್ಟಾರ್ ಆಟಗಾರರು ಈಗಾಗಲೇ ತಂಡವನ್ನು ಸೇರಿ ಅಭ್ಯಾಸ ಆರಂಭಿಸಿದ್ದಾರೆ. ಐಪಿಎಲ್ ಆರಂಭಕ್ಕೆ ಇನ್ನು ಆರು ದಿನಗಳು ಉಳಿದಿದ್ದು, ಇನ್ನು ಟೀಮ್ ಇಂಡಿಯಾದ ಸ್ಟಾರ್ ವಿರಾಟ್ ಕೊಹ್ಲಿ ಇನ್ನು ಸೇರಿಕೊಂಡಿಲ್ಲ.

ಇದುವರೆಗೆ ಕೊಹ್ಲಿ ಆಡುವ ಬಗ್ಗೆ ಅವರ ಫ್ರಾಂಚೈಸಿ ಆರ್‌ಸಿಬಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಪ್ರಕಾರ, ಕಿಂಗ್ ಕೊಹ್ಲಿ ಕ್ರಿಕೆಟ್ ಮೈದಾನಕ್ಕೆ ಮರಳಲು ಸಂಪೂರ್ಣವಾಗಿ ಸನ್ನದ್ಧರಾಗುತ್ತಿದ್ದಾರೆ. ವಿರಾಟ್ ಇನ್ನೂ ಆರ್‌ಸಿಬಿ ಕ್ಯಾಂಪ್‌ಗೆ ಸೇರದಿದ್ದರೂ, ಮಾರ್ಚ್ 22 ರಂದು ನಡೆಯಲಿರುವ ಆರಂಭಿಕ ಪಂದ್ಯಕ್ಕೂ ಮುನ್ನ ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಇವರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
ಬ್ಯಾಟಿಂಗ್ ಬಲ
ವಿರಾಟ್ ಕೊಹ್ಲಿ ಆರ್‌ಸಿಬಿ ಕ್ಯಾಂಪ್ ಸೇರಿಕೊಂಡಲ್ಲಿ, ಯುವ ಆಟಗಾರರಿಗೆ ಬೂಸ್ಟ್ ಸಿಕ್ಕಂತೆ ಆಗುತ್ತದೆ. ಅಲ್ಲದೆ ತಂಡದ ಟಾಪ್ ಆರ್ಡರ್‌ಗೆ ಬಲ ಸಿಕ್ಕಂತೆ ಆಗುತ್ತದೆ. ಅಲ್ಲದೆ ವಿರಾಟ್ ಬ್ಯಾಟಿಂಗ್ ಶೈಲಿ ಎದುರಾಳಿಗಳಿಗೆ ನಿದ್ದೆ ಕೆಡಿಸಬಲ್ಲರು. ವಿರಾಟ್, ಬ್ಯಾಟಿಂಗ್ ಶೈಲಿಯೇ ಅಂತಹದ್ದು. ಇವರು ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿ, ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ ಆರ್‌ಸಿಬಿ ತಂಡ ದೊಡ್ಡ ಮೊತ್ತದ ಕನಸು ಕಾಣಬೇಕಾದರೆ, ವಿರಾಟ್ ಕೊಹ್ಲಿ ಮೈದಾನದಲ್ಲಿ ಹೆಚ್ಚು ಸಮಯ ಕಳೆಯುವುದು ಅವಶ್ಯ. ಇನ್ನು ವಿರಾಟ್ ಅಬ್ಬರಿಸಿ ಆರ್‌ಸಿಬಿಗೆ ಐಪಿಎಲ್ ಟ್ರೋಫಿ ತೊಡಿಸುವ ಕನಸು ಕಾಣುತ್ತಿದ್ದಾರೆ.
ಗ್ರೀನ್ ಯಾವಾಗಿಂದ ಕಣಕ್ಕೆ?
ಸ್ಟಾರ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಐಪಿಎಲ್ 2024ರ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ನಡುವೆ ಅವರ ಬಗ್ಗೆ ಒಂದು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಗ್ರೀನ್ ಆರ್‌ಸಿಬಿ ಪಾಳಯಕ್ಕೆ ಸೇರ್ಪಡೆಗೊಂಡಿದ್ದು, ಮೊದಲ ಪಂದ್ಯದಿಂದಲೇ ಕಣಕ್ಕೆ ಇಳಿಯಲಿದ್ದಾರ. ಶೆಫೀಲ್ಡ್ ಶೀಲ್ಡ್ ಫೈನಲ್‌ನಲ್ಲಿ ಆಡದಿದ್ದಕ್ಕಾಗಿ ಅವರು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅನುಮೋದನೆ ಪಡೆದ ನಂತರ, ಗ್ರೀನ್ ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ ಆಡುವುದನ್ನು ಕಾಣಬಹುದು.

ಮಾರ್ಚ್ 22 ರಂದು ಉದ್ಘಾಟನಾ ಪಂದ್ಯ
17ನೇ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯ ಮಾರ್ಚ್ 22 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಅಂಗಳ ಸಾಕ್ಷಿಯಾಗಲಿದೆ. ದಕ್ಷಿಣ ಡರ್ಬಿ ಎಂದೇ ಖ್ಯಾತಿ ಪಡೆದಿರುವ ಈ ಪಂದ್ಯಗಳ ಕಾದಾಟವನ್ನು ಕಣ್ಣು ತುಂಬಿ ಕೊಳ್ಳಲು ಅಭಿಮಾನಿಗಳು ಸಹ ತಯಾರಿ ನಡೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications