For Quick Alerts
ALLOW NOTIFICATIONS  
For Daily Alerts
 

IPL 2024: ಐಪಿಎಲ್‌ನಲ್ಲೂ ಅಬ್ಬರಿಸಿದ್ದಾರೆ ಬೌಲರ್ಸ್‌: ಹ್ಯಾಟ್ರಿಕ್‌ ಪಡೆದು ಮಿಂಚಿರುವ ಸ್ಟಾರ್ಸ್‌:

ಐಪಿಎಲ್‌ ಅಂದರೆ ಬ್ಯಾಟರ್‌ಗಳ ಆರ್ಭಟ ಎಂದೇ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಬ್ಯಾಟರ್‌ಗಳಿಗೆ ಕಡಿವಾಣ ಹಾಕಬಲ್ಲ ಸ್ಟಾರ್ ಬೌಲರ್‌ಗಳು ಇದ್ದಾರೆ. ಈ ಸ್ಟಾರ್‌ ವೇಗದ ಬೌಲರ್‌ಗಳು ಸಹ ತಮ್ಮ ಶಿಸ್ತು ಬದ್ಧ ದಾಳಿಯಿಂದಲೇ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಬ್ಯಾಟ್ಸ್‌ಮನ್‌ಗಳ ಮೆರೆದಾಟದಲ್ಲಿ ಬೌಲರ್‌ಗಳು ಮಿಂಚಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್‌ ಪಡೆಯುವುದೇ ದೊಡ್ಡ ಸಾಧನೆ. ಅದ್ರಲ್ಲೂ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡುವುದು ಎಂದರೆ ತಮಾಷೆಯ ಮಾತು ಅಲ್ಲ. ಬ್ಯಾಟರ್‌ಗಳ ನಡೆಯನ್ನು ಅರಿತು ಆಡುವ ಅನಿವಾರ್ಯತೆ ಇರುತ್ತದೆ. ಅಂದಾಗ ವಿಕೆಟ್‌ ಸಿಗಬಹುದು. ಅಲ್ಲದೆ ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳ ಒತ್ತಡವನ್ನು ನಿಭಾಯಿಸಿ ಬೌಲಿಂಗ್ ಮಾಡಬೇಕು. ಅಂದಾಗ ಮಾತ್ರ ವಿಕೆಟ್‌ಗಳು ಲಭಿಸುತ್ತಿವೆ. ಐಪಿಎಲ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ ಇಲ್ಲಿದೆ..

ಮೊದಲ ಹ್ಯಾಟ್ರಿಕ್

ಲಕ್ಷ್ಮೀಪತಿ ಬಾಲಾಜಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾಗ 2008ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಆ ಪಂದ್ಯದಲ್ಲಿ ಪಂಜಾಬ್ ತಂಡ ಚೇಸಿಂಗ್ ಮಾಡಿತ್ತು, ಆದರೆ ಕೊನೆಯ ಓವರ್‌ನಲ್ಲಿ ಇರ್ಫಾನ್ ಪಠಾಣ್, ಪಿಯೂಷ್ ಚಾವ್ಲಾ ಮತ್ತು ವಿಆರ್‌ವಿ ಸಿಂಗ್ ಅವರನ್ನು ಖೆಡ್ಡಾಕ್ಕೆ ಕೆಡವಿ ಈ ಸಾಧನೆ ಮಾಡಿದರು.

IPL 2024 Bowlers Make a Mark as Stars Shine with Hat-Trick Brilliance

ಅಮಿತ್ ಮಿಶ್ರಾ

ಅಮಿತ್ ಮಿಶ್ರಾ ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ 3 ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. 2008 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿದ್ದಾಗ ಪಂಜಾಬ್ ವಿರುದ್ಧ ಮೊದಲ ಹ್ಯಾಟ್ರಿಕ್ ಸಾಧಿಸಿದರು. 2011ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡುತ್ತಿದ್ದಾಗ ಮತ್ತೊಮ್ಮೆ ಪಂಜಾಬ್ ವಿರುದ್ಧ, 2013 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಆಡುವಾಗ ಪುಣೆ ವಾರಿಯರ್ಸ್ ವಿರುದ್ಧ ಅವರ ಕೊನೆಯ ಹ್ಯಾಟ್ರಿಕ್ ಪಡೆದಿದ್ದಾರೆ.

ಮಖಯಾ ಎನ್ಟಿನಿ

2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವಾಗ ಮಖಯಾ ಎನ್ಟಿನಿ KKR ವಿರುದ್ಧ ಹ್ಯಾಟ್ರಿಕ್ ಪಡೆದು ಬೀಗಿದ್ದಾರೆ.

IPL 2024 Bowlers Make a Mark as Stars Shine with Hat-Trick Brilliance

ಯುವರಾಜ್ ಸಿಂಗ್

ಯುವರಾಜ್ ಸಿಂಗ್ 2009 ರಲ್ಲಿ ಪಂಜಾಬ್ ಕಿಂಗ್ಸ್ ಪರ 2 ಹ್ಯಾಟ್ರಿಕ್ ಗಳಿಸಿದ್ದರು. ಅವರ ಮೊದಲ ಹ್ಯಾಟ್ರಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮತ್ತು ಎರಡನೆಯದು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಪಡೆದಿದ್ದರು. ಐಪಿಎಲ್ ಇತಿಹಾಸದಲ್ಲಿ ಒಂದೇ ಋತುವಿನಲ್ಲಿ 2 ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಯುವಿ ಪಾತ್ರರಾಗಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಬೌಲರ್ ಆಗಿ ಗುರುತಿಸಿಕೊಂಡವರು. 2009 ರಲ್ಲಿ ಡೆಕ್ಕನ್ ಚಾರ್ಜಸ್‌ ಪರ ಆಡಿದ್ದ ರೋಹಿತ್, ಮುಂಬೈ ಇಂಡಿಯನ್ಸ್ ವಿರುದ್ಧದ ಹ್ಯಾಟ್ರಿಕ್ ಪಡೆದು ಬೀಗಿದ್ದರು.

ಪ್ರವೀಣ್ ಕುಮಾರ್

ಪ್ರವೀಣ್ ಕುಮಾರ್ ಅವರ ಐಪಿಎಲ್ ವೃತ್ತಿಜೀವನದ ಮೊದಲ ಮತ್ತು ಕೊನೆಯ ಹ್ಯಾಟ್ರಿಕ್ 2010 ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧವಾಗಿತ್ತು. ಆ ಪಂದ್ಯದಲ್ಲಿ ಪ್ರವೀಣ್ ಡೇಮಿಯನ್ ಮಾರ್ಟಿನ್, ಸುಮಿತ್ ನರ್ವಾಲ್ ಮತ್ತು ಪರಾಸ್ ಡೋಗ್ರಾ ಅವರನ್ನು ಸತತ 3 ಎಸೆತಗಳಲ್ಲಿ ಔಟ್ ಮಾಡಿದ್ದರು.

IPL 2024 Bowlers Make a Mark as Stars Shine with Hat-Trick Brilliance

ಶ್ರೇಯಸ್ ಗೋಪಾಲ್, ಹರ್ಷಲ್‌ ಪಟೇಲ್

ರಾಯಲ್ ಚಾಲೆಂಜರ್ಸ್‌ ಪರ ಆಡಿದ್ದ ಸ್ಯಾಮ್ಯುಯೆಲ್ ಬದ್ರಿ ಅವರು 2017 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 2019 ರಲ್ಲಿ ಸತತ 3 ಎಸೆತಗಳಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರನ್ನು ಔಟ್ ಮಾಡುವ ಮೂಲಕ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇನ್ನು ಹರ್ಷಲ್ ಪಟೇಲ್ ಆರ್‌ಸಿಬಿ ಪರ 2021ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅವರು ಹಾರ್ದಿಕ್ ಪಾಂಡ್ಯ, ಕೀರಾನ್ ಪೊಲಾರ್ಡ್ ಮತ್ತು ರಾಹುಲ್ ಚಹಾರ್ ಅವರನ್ನು ಔಟ್ ಮಾಡಿದ್ದರು.

ಉಳಿದಂತೆ ಅಜಿತ್ ಚಾಂಡಿಲಾ (2012), ಸುನಿಲ್ ನಾರಾಯಣ್ ( 2013), ಪ್ರವೀಣ್ ತಾಂಬೆ (2014), ಶೇನ್ ವ್ಯಾಟ್ಸನ್ (2014), ಅಕ್ಷರ್ ಪಟೇಲ್ (2016), ಆಂಡ್ರ್ಯೂ ಟೈ (2017), ಜಯದೇವ್ ಉನದ್ಕತ್ (2017), ಸ್ಯಾಮ್ ಕರ್ರಾನ್ (2019), ಯುಜುವೇಂದ್ರ ಚಹಾಲ್ (2022), ರಶೀದ್ ಖಾನ್ (2023), ಬೌಲರ್‌ಗಳು ಸಹ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

Story first published: Wednesday, March 13, 2024, 8:01 [IST]
Other articles published on Mar 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+