For Quick Alerts
ALLOW NOTIFICATIONS  
For Daily Alerts
 

IPL 2024: ಎಲ್ಲ ಐಪಿಎಲ್ ಆವೃತ್ತಿಗಳ ದಾಖಲೆ ಮುರಿದು ಹೊಸ ಮೈಲಿಗಲ್ಲು ಸ್ಥಾಪನೆ

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆವೃತ್ತಿಯು ಟಿ20 ಕ್ರಿಕೆಟ್‌ ಆಟದ ಡೈನಾಮಿಕ್ಸ್ ಅನ್ನೇ ಬದಲಾಯಿಸಿದೆ. ಒಂದರ ನಂತರ ಒಂದರಂತೆ ದಾಖಲೆಗಳು ಮುರಿಯುತ್ತಿವೆ ಮತ್ತು ಹೊಸ ದಾಖಲೆಗಳು ನಿರ್ಮಾಣಗೊಳ್ಳುತ್ತಿವೆ.

ಮಂಗಳವಾರ, ಮೇ 14ರಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು, ಐಪಿಎಲ್ ಪಂದ್ಯಾವಳಿ ಇತಿಹಾಸದಲ್ಲಿಯೇ ಸದ್ಯ ನಡೆಯುತ್ತಿರುವ 2024ರ ಆವೃತ್ತಿಯು ಅತಿ ಹೆಚ್ಚು ಸಿಕ್ಸರ್‌ಗಳಿಗೆ ಸಾಕ್ಷಿಯಾಯಿತು.

IPL 2024 Breaking Record of All IPL Editions And Create A New Six-hitting Milestone

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಒಟ್ಟು 20 ಸಿಕ್ಸರ್‌ಗಳನ್ನು ಸಿಡಿಸಲಾಯಿತು. ಈ 20 ಸಿಕ್ಸರ್‌ಗಳು ನಡೆಯುತ್ತಿರುವ ಋತುವಿನಲ್ಲಿ ಒಟ್ಟಾರೆ ಸಿಕ್ಸರ್‌ಗಳ ಸಂಖ್ಯೆಯನ್ನು 1,125ಕ್ಕೆ ಮುನ್ನಡೆಸಿತು.

ಇದು ಯಾವುದೇ ಐಪಿಎಲ್ ಋತುವಿಗಿಂತ ಅತಿ ಹೆಚ್ಚು ಸಿಕ್ಸರ್‌ಗಳ ಆವೃತ್ತಿಯಾಗಿದೆ. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 19 ರನ್‌ಗಳ ಗೆಲುವಿನೊಂದಿಗೆ ಐಪಿಎಲ್ 2024ರ ಲೀಗ್ ಮುಕ್ತಾಯಗೊಳಿಸಿತು.

ಪ್ರಸಕ್ತ ಐಪಿಎಲ್ ಋತುವಿನಲ್ಲಿ ಈವರೆಗೆ ಆಡಿದ 65 ಪಂದ್ಯಗಳಲ್ಲಿ 1125 ಸಿಕ್ಸರ್‌ಗಳನ್ನು ಸಿಡಿಸಲಾಗಿದೆ. ಈ ಆವೃತ್ತಿಯನ್ನು ಮುಗಿಸಲು ಕನಿಷ್ಠ 10 ಪಂದ್ಯಗಳು ಬಾಕಿ ಇರುವಾಗ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಒಟ್ಟು ಸಿಕ್ಸರ್‌ಗಳ ದಾಖಲೆಯನ್ನು ಮುರಿದಿದೆ. ಕಳೆದ ವರ್ಷ 74 ಪಂದ್ಯಗಳ ಋತುವಿನಲ್ಲಿ 1124 ಸಿಕ್ಸರ್‌ಗಳು ಹಿಂದಿನ ದಾಖಲೆಯಾಗಿತ್ತು.

ಇದಕ್ಕೂ ಮೊದಲು, ಸನ್‌ ರೈಸರ್ಸ್ ಹೈದರಾಬಾದ್ ತಂಡವು ಸಿಕ್ಸರ್‌ಗಳ ದಾಖಲೆಯಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ಮುರಿದಿತ್ತು. ಅಲ್ಲದೆ ಹಲವು ತಂಡಗಳು ಸಹ ಶತಕದ ಗಡಿ ದಾಟಿವೆ. ಐಪಿಎಲ್ 2024ರ ಪಂದ್ಯ ನಂ 64ರ ನಂತರ ತಂಡಗಳು ಗಳಿಸಿದ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿ ಇಲ್ಲಿದೆ.

IPL 2024 Breaking Record of All IPL Editions And Create A New Six-hitting Milestone

ಐಪಿಎಲ್ 2024ರಲ್ಲಿ ತಂಡಗಳಿಂದ ಅತಿ ಹೆಚ್ಚು ಸಿಕ್ಸರ್‌ಗಳು

ಸನ್‌ರೈಸರ್ಸ್ ಹೈದರಾಬಾದ್ - 12 ಪಂದ್ಯಗಳಲ್ಲಿ 146 ಸಿಕ್ಸರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು - 13 ಪಂದ್ಯಗಳಲ್ಲಿ 141 ಸಿಕ್ಸರ್

ಡೆಲ್ಲಿ ಕ್ಯಾಪಿಟಲ್ಸ್ - 14 ಪಂದ್ಯಗಳಲ್ಲಿ 135 ಸಿಕ್ಸರ್

ಕೋಲ್ಕತ್ತಾ ನೈಟ್ ರೈಡರ್ಸ್ - 12 ಪಂದ್ಯಗಳಲ್ಲಿ 125 ಸಿಕ್ಸರ್

ಮುಂಬೈ ಇಂಡಿಯನ್ಸ್ - 13 ಪಂದ್ಯಗಳಲ್ಲಿ 122 ಸಿಕ್ಸರ್

ಪಂಜಾಬ್ ಕಿಂಗ್ಸ್ - 12 ಪಂದ್ಯಗಳಲ್ಲಿ 102 ಸಿಕ್ಸರ್

ರಾಜಸ್ಥಾನ್ ರಾಯಲ್ಸ್ - 12 ಪಂದ್ಯಗಳಲ್ಲಿ 100 ಸಿಕ್ಸರ್

ಚೆನ್ನೈ ಸೂಪರ್ ಕಿಂಗ್ಸ್ - 13 ಪಂದ್ಯಗಳಲ್ಲಿ 99 ಸಿಕ್ಸರ್

ಲಕ್ನೋ ಸೂಪರ್ ಜೈಂಟ್ಸ್ - 13 ಪಂದ್ಯಗಳಲ್ಲಿ 88 ಸಿಕ್ಸರ್

ಗುಜರಾತ್ ಟೈಟನ್ಸ್ - 12 ಪಂದ್ಯಗಳಲ್ಲಿ 67 ಸಿಕ್ಸರ್

2024ರ ಐಪಿಎಲ್ ಪಂದ್ಯಾವಳಿಯಲ್ಲಿ ಆಡಲು ಇನ್ನೂ ಬೆರಳೆಣಿಕೆಯಷ್ಟು ಪಂದ್ಯಗಳು ಬಾಕಿಯಿರುವುದರಿಂದ ಸಿಕ್ಸರ್‌ಗಳ ಸಂಖ್ಯೆ ಇನ್ನಷ್ಟು ಏರಿಕೆ ಕಾಣಲಿದೆ. ಹಿಂದಿನ ಐಪಿಎಲ್ ಆವೃತ್ತಿಯಲ್ಲಿ 1,124 ಸಿಕ್ಸರ್‌ಗಳನ್ನು ಸಿಡಿಸಲಾಗಿದ್ದರೆ, 2022ರಲ್ಲಿ 1,062 ಬಾರಿ ಚೆಂಡನ್ನು ಸ್ಟ್ಯಾಂಡ್‌ಗೆ ಕಳಿಸಲಾಗಿತ್ತು.

ಕಳೆದ ಮೂರು ಆವೃತ್ತಿಗಳ ಲೆಕ್ಕಾಚಾರವು ಸಿಕ್ಸರ್‌ಗಳಲ್ಲಿ ವ್ಯವಹರಿಸುವ ಪ್ರವೃತ್ತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಮತ್ತು ಬ್ಯಾಟರ್‌ಗಳ ಪ್ರಾಬಲ್ಯವನ್ನು ಸೂಚಿಸುತ್ತದೆ.

Story first published: Wednesday, May 15, 2024, 14:08 [IST]
Other articles published on May 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+