IPL 2024: ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಆ ಒಂದು ತಪ್ಪಿನಿಂದ ಕೈಯಲ್ಲಿದ್ದ ಪಂದ್ಯವನ್ನು ಕಳೆದುಕೊಂಡ ಮುಂಬೈ
ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ 2024ರ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ತಂಡವನ್ನು 168 ರನ್‌ಗಳಿಗೆ ಕಟ್ಟಿ ಹಾಕಿತು. ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡಿ ಬಿಡಬಹುದು ಎಂದೇ ಎಲ್ಲರೂ ಅಂದು ಕೊಂಡಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಮಾಡಿದ ಆ ಒಂದು ತಪ್ಪು ತಂಡಕ್ಕೆ ಮುಳವಾಗಿ ಪರಿಣಮಿಸಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್ ಸೇರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 162 ರನ್ ಸೇರಿಸಿತು. ಎಲ್ಲವೂ ಮುಂಬೈ ಅಂದುಕೊಂಡಂತೆ ಆಗಿತ್ತು. ಆದರೆ ಹಾರ್ದಿಕ್ ಪಾಂಡ್ಯ ಅವರು ಮಾಡಿದ ಆ ಒಂದು ತಪ್ಪು ನಿರ್ಧಾರ ತಂಡಕ್ಕೆ ಮುಳವಾಗಿ ಪರಿಣಮಿಸಿತು.

ಟಾಸ್ ಗೆದ್ದು ಫೀಲ್ಡಿಂಗ್
ಮುಂಬೈ ಇಂಡಿಯನ್ಸ್ ಟಾಸ್ ಗೆಲ್ಲುತ್ತಿದ್ದಂತೆ ಫೀಲ್ಡಿಂಗ್ ಮಾಡಲು ಮುಂದಾಯಿತು. ಏಕೆಂದರೆ, ಈ ಮೈದಾನದಲ್ಲಿ ಮಂಜು ಬೀಳುತ್ತೆ ಎಂಬ ಕಾರಣವಿತ್ತು. ಇದರಂತೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವಾಗ ಮಂಜು ಸಹ ಬಿದ್ದಿತ್ತು. ಆದರೆ ಇದರ ಲಾಭವನ್ನು ಪಡೆಯುವಲ್ಲಿ ಮುಂಬೈ ವಿಫಲಾಯಿತು. ಸ್ಪಿನ್ ಬೌಲರ್‌ಗಳು ಬೌಲಿಂಗ್ ಮಾಡಲು ಸಮಸ್ಯೆ ಎದುರಿಸಿದರೂ ಸಹ, ಬಿಗುವಿನ ದಾಳಿ ನಡೆಸಿದರು.
ಹಾರ್ದಿಕ್ ಮಾಡಿದ ತಪ್ಪೇನು?
ಮುಂಬೈ ಇಂಡಿಯನ್ಸ್ ಗುರಿಯನ್ನು ಬೆನ್ನಟ್ಟಿದಾಗ ರೋಹಿತ್ ಶರ್ಮಾ 29 ಎಸೆತಗಳಲ್ಲಿ 43 ರನ್ ಸೇರಿಸಿ ಸಾಯಿ ಕಿಶೋರ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಮುಂಬೈ ಗೆಲುವಿಗೆ 47 ಎಸೆತಗಳಲ್ಲಿ 62 ರನ್ ಅವಶ್ಯಕತೆ ಇತ್ತು. ಟಿ20 ಕ್ರಿಕೆಟ್‌ನಲ್ಲಿ ಈ ಅಂಕಿ ಅಂಶ ಚೇಸ್ ಮಾಡಬಹುದಾಗಿತ್ತು. ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟರ್‌ಗಳನ್ನು ಸರಿಯಾದ ಸಮಯದಲ್ಲಿ ಕಳಿಸದೆ ಪಂದ್ಯವನ್ನು ಕೈ ಚೆಲ್ಲಿತು.

ನಾಲ್ಕನೇ ಕ್ರಮಾಂಕದಲ್ಲಿ ಬಂದಿದ್ದಾರು?
ಗುಜರಾತ್ ಟೈಟನ್ಸ್ ತಂಡದಲ್ಲಿ ಹಾರ್ದಿಕ್ ನಾಲ್ಕನೇ ಕ್ರಮಾಂಕದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಈ ಲೆಕ್ಕಾಚಾರವನ್ನು ನೋಡಿದರೆ, ಹಾರ್ದಿಕ್ ಈ ಕ್ರಮಾಂಕದಲ್ಲಿ ಬ್ಯಾಟ್‌ಗೆ ಬರುತ್ತಾರೆ ಎಂದೇ ಅಂದು ಕೊಂಡಿದ್ದರು. ಆದರೆ ಹಾಗೆ ಆಗಲಿಲ್ಲ. ಡೆವಾಲ್ಡ್ ಬ್ರೆವಿಸ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಇವರಿಗೆ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳಲ್ಲಿ ಆಡಿದ ಅನುಭವ ಕಮ್ಮಿ. ಈ ಸ್ಥಾನದಲ್ಲಿ ಬ್ಯಾಟ್ ಮಾಡುವ ಆಟಗಾರ ತಂಡಕ್ಕೆ ಬಲ ತುಂಬವ ಪ್ಲೇಯರ್. ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಕಲೆಯನ್ನು ಹೊಂದಿರಬೇಕು. ನಾಲ್ಕನೇ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ ಅವರನ್ನು ಕಳುಹಿಸಲಾಯಿತು. ಇವರು ಉತ್ತಮವಾಗಿ ಆಡಿ ಸೈ ಎನಿಸಿಕೊಂಡರು.
ಏಳನೇ ಕ್ರಮಾಂಕದಲ್ಲಿ ಏಕೆ?
ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವರನ್ನು, ಆರನೇ ಕ್ರಮಾಂಕದಲ್ಲಿ ಟೀಮ್ ಡೆವಿಡ್ ಅವರನ್ನು ಕಳುಹಿಸಿದರು. ಹಾರ್ದಿಕ್ ಪಾಂಡ್ಯ ಕ್ರೀಸ್‌ಗೆ ಬಂದಾಗ ಮುಂಬೈ ಗೆಲುವಿಗೆ 12 ಎಸೆತಗಳಲ್ಲಿ 27 ರನ್ ಅವಶ್ಯಕತೆ ಇತ್ತು. ಈ ವೇಳೆ ದೊಡ್ಡ ಹೊಡೆತವನ್ನು ಆಡಬೇಕಾದ ಪರಿಸ್ಥಿತಿ ಇತ್ತು. ಆದರೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಪಾಂಡ್ಯಗೆ ಸಮಯದ ಅವಶ್ಯಕತೆ ಇತ್ತು. ಅದಾಗಲೇ ಸಮಯ ಮೀರಿ ಆಗಿತ್ತು. ಕೊನೆಯ ಓವರ್‌ನಲ್ಲಿ ಕಮಾಲ್ ಮಾಡುವ ಹಾರ್ದಿಕ್ ಆಸೆ ಕಮರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications