IPL 2024: ಚಿನ್ನಸ್ವಾಮಿಯಲ್ಲಿ ಡಾಗ್ ಔಟ್ ವಲಯ ನಿರ್ಮಾಣ? ಇದರ ಲಾಭವೇನು?
ನೀವು ಕ್ರಿಕೆಟ್ ಪ್ರೇಮಿಗಳೆ.. ಪಂದ್ಯವನ್ನು ಸ್ಟೇಡಿಯಂನಲ್ಲಿ ನೋಡುವ ಆಸಕ್ತಿ ಇದೆಯಾ.. ಆದರೆ ನಿಮ್ಮ ಮನೆಯಲ್ಲಿ ನೀವು ಸಾಕಿದ ನಾಯಿ ಇದಕ್ಕೆ ಆಸ್ಪದ ಕೊಡುವುದಿಲ್ಲವೇ. ಹಾಗಿದಲ್ಲಿ ಇಲ್ಲಿದೆ ನಾಯಿ ಸಾಕಿದವರಿಗೆ ಗುಡ್ ನ್ಯೂಸ್.. ಐಪಿಎಲ್ ನೋಡಲು ನಿಮ್ಮ ಮನೆಯಲ್ಲಿ ಸಾಕಿರುವ ನಾಯಿಗಳನ್ನು ಕರೆತರಬಹುದು.
ಈ ಸುದ್ದಿಯನ್ನು ನೋಡಿದ ಅದೆಷ್ಟೋ ಜನರಿಗೆ ಖುಷಿಯಂತು ಆಗಿರುತ್ತದೆ. ಛೇ ಇದು ಬೇರೆ ಸ್ಟೇಡಿಯಂನಲ್ಲಿ ಆಯಿತಾ ಎಂದು ತಿಳಿದುಕೊಂಡರೆ ಅದು ನಿಮ್ಮ ತಪ್ಪು ಊಹೆ. ಈ ವ್ಯವಸ್ಥೆಯನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆ ಮಾಡಿದೆ.

ಐಪಿಎಲ್ 2024 ನ 10 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಕ್ರವಾರ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಎದುರಿಸಲಿದೆ. ಬೆಂಗಳೂರಿನಲ್ಲಿ ಈ ಪಂದ್ಯ ನಡೆಯಲಿದೆ. ಈಗ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಕ್ರೀಡೆಯನ್ನು ತಮ್ಮ ನಾಯಿ ಜೊತೆಗೆ ಆನಂದಿಸಬಹುದಾಗಿದೆ.
ಡಾಗ್ ಔಟ್
2019ರಲ್ಲಿ ಈ ರೀತಿಯ ವ್ಯವಸ್ಥೆಯನ್ನು ಬೆಂಗಳೂರು ತಂಡ ಮಾಡಿತ್ತು. ಆಗ ಪ್ರಾಯೋಗಿಕವಾಗಿ ಒಂದೇ ಪಂದ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಈಗ ಈ ವ್ಯವಸ್ಥೆಯನ್ನು ನಿರಂತರವಾಗಿ ಇಡಲು ವ್ಯವಸ್ಥೆ ಕಲ್ಪಿಸಲಾಗಿದೆ. ನೀವು ನಿಮ್ಮ ಪ್ರೀತಿಯ ನಾಯಿಯನ್ನು ಕರೆದುಕೊಂಡು ಸ್ಟೇಡಿಯಂಗೆ ಬರಬಹುದು. ಇದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಶಿಷ್ಟ ಸವಲತ್ತನ್ನು ನೀಡಿದೆ. ಇದರ ಅಡಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಾಗ್ ಔಟ್ ಝೋನ್ ರಚಿಸಲಾಗಿದೆ. ಇಲ್ಲಿ ಕ್ರಿಕೆಟ್ ಪ್ರೇಮಿಗಳು ತಮ್ಮ ಸಾಕುಪ್ರಾಣಿಗಳೊಂದಿಗೆ ಪಂದ್ಯವನ್ನು ವೀಕ್ಷಿಸಲು ಸಾಧ್ಯ.
ಆರ್‌ಸಿಬಿಯ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶಾಶ್ವತ ಡಾಗ್ ಔಟ್ ಝೋನ್ ಮಾಡಲಾಗಿದೆ. ನೀವು ನಿಮ್ಮ ಪ್ರೀತಿಯ ನಾಯಿಯೊಂದಿಗೆ ಐಪಿಎಲ್ ಪಂದ್ಯವನ್ನು ವೀಕ್ಷಿಸ ಬಹುದಾಗಿದೆ.

ನಾಯಿಗಳು ಸರಿಯಾಗಿ ವರ್ತಿಸುವವರೆಗೆ ಮತ್ತು ಆರೋಗ್ಯವಾಗಿ ಇರುವವರೆಗೆ, ನಾಯಿಗಳ ಹೊರ ವಲಯದಲ್ಲಿ ಎಲ್ಲಾ ತಳಿಗಳ ನಾಯಿಗಳ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಪಾಧ್ಯಕ್ಷ ರಾಜೇಶ್ ಮೆನನ್ ತಿಳಿಸಿದ್ದಾರೆ. ಪಂದ್ಯದ ವೇಳೆ ಅವರಿಗೆ ಆಹಾರ ಮತ್ತು ಪಾನೀಯದ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.
ಯಾವ ಗೇಟ್‌ನಿಂದ ಪ್ರವೇಶ?
ಡಾಗ್ ಔಟ್ ಪ್ರವೇಶಿಸಲು ಅಭಿಮಾನಿಗಳು ಗೇಟ್‌ನಂಬರ್ 21 ರಿಂದ ಬರಬೇಕಾಗುತ್ತದೆ. ಸಾಮಾನ್ಯವಾಗಿ ಈ ಗೇಟ್ ಪ್ರೇಕ್ಷಕರಿಗೆ ಪ್ರವೇಶ ಇರುವುದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications