IPL 2024: ಲೀಗ್ ಹಂತದಲ್ಲಿ CSK vs MI ಒಂದೇ ಬಾರಿ ಮುಖಾಮುಖಿ; ಕಾರಣವೇನು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯಗಳನ್ನು ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಅತ್ಯಂತ ತೀವ್ರವಾದ ಪೈಪೋಟಿ ಎಂದು ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ.
ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದಂತೆ, ಮುಂಬೈ ಇಂಡಿಯನ್ಸ್ ಮತ್ತು ಸಿಎಸ್‌ಕೆ ನಡುವಿನ ಹಣಾಹಣಿಯನ್ನು ಐಪಿಎಲ್‌ನ ಎಲ್ ಕ್ಲಾಸಿಕೋ ಎಂದು ಪರಿಗಣಿಸಲಾಗುತ್ತದೆ.
ಈ ಎರಡು ಪವರ್‌ಹೌಸ್ ತಂಡಗಳು ಐಪಿಎಲ್‌ನಲ್ಲಿ 36 ಬಾರಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್ 21 ಗೆಲುವುಗಳ ದಾಖಲೆಯನ್ನು ಹೊಂದಿದೆ. ಇದೇ ವೇಳೆ, ಎರಡೂ ದೈತ್ಯ ತಂಡಗಳು ತಲಾ ಐದು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಯಾವುದೇ ತಂಡಕ್ಕಿಂತ ಸಾಟಿಯಿಲ್ಲದ ದಾಖಲೆಯಾಗಿದೆ.

ವಿಭಿನ್ನ ಗುಂಪುಗಳಲ್ಲಿ ಸ್ಥಾನ ಪಡೆದಿರುವ ಮುಂಬೈ ಮತ್ತು ಚೆನ್ನೈ ತಂಡಗಳು ಸದ್ಯ ನಡೆಯುತ್ತಿರುವ ಐಪಿಎಲ್ 2024ರಲ್ಲಿ ಕೇವಲ ಒಮ್ಮೆ ಮಾತ್ರ ಸೆಣಸಾಡಲಿವೆ. ಆ ಹೈ-ವೋಲ್ಟೇಜ್ ಪಂದ್ಯ ಏಪ್ರಿಲ್ 14ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಐಪಿಎಲ್‌ನ ಸ್ವರೂಪದ ಪ್ರಕಾರ, ಪ್ರತಿ ತಂಡವು ತನ್ನ ಗುಂಪಿನ ಇತರ ನಾಲ್ಕು ತಂಡಗಳ ವಿರುದ್ಧ ತವರಿನಲ್ಲಿ ಮತ್ತು ಎದುರಾಳಿ ನೆಲದಲ್ಲಿ ಎಂಟು ಪಂದ್ಯಗಳನ್ನು ಆಡುತ್ತದೆ.
ಜೊತೆಗೆ, ಪ್ರತಿಯೊಂದೂ ತಂಡವು ಇನ್ನೊಂದು ಗುಂಪಿನ ತಂಡಗಳ ವಿರುದ್ಧ ತವರಿನಲ್ಲಿ ಅಥವಾ ಹೊರಗೆ ನಾಲ್ಕು ಪಂದ್ಯಗಳನ್ನು ಆಡುತ್ತದೆ. ಒಂದು ತಂಡವು ಉಳಿದ ತಂಡವನ್ನು ತವರಿನಲ್ಲಿ ಮತ್ತು ಹೊರಗೆ ಎರಡು ಬಾರಿ ಎದುರಿಸುತ್ತದೆ.
ಗಮನಾರ್ಹವಾಗಿ, ಗುಂಪುಗಳ ಫಾರ್ಮ್ಯಾಟಿಂಗ್ ಮತ್ತು ಗುಂಪುಗಳಾದ್ಯಂತ ಪಂದ್ಯಗಳ ಹಂಚಿಕೆಯನ್ನು ರ್ಯಾಂಡಮ್ ಡ್ರಾ ಮೂಲಕ ನಿರ್ಧರಿಸಲಾಗುತ್ತದೆ.

ಐಪಿಎಲ್ 2024: ಆರಂಭಿಕ ಪಂದ್ಯದಲ್ಲಿ ಸಿಎಸ್‌ಕೆ ಗೆಲುವು, ಮುಂಬೈ ಸೋಲು
ಶುಕ್ರವಾರ, ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸಿಎಸ್‌ಕೆ ತಂಡ ಆರು ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ತಮ್ಮ ಪ್ರಶಸ್ತಿ ರಕ್ಷಣೆ ಆರಂಭಿಸಿತು.
ನಡೆಯುತ್ತಿರುವ ಟೂರ್ನಿಯಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿವೆ.
ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮುಂದಿನ ಪಂದ್ಯದಲ್ಲಿ 2022ರ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಮಂಗಳವಾರ, ಮಾರ್ಚ್ 26ರಂದು ತನ್ನ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಮತ್ತೊಂದೆಡೆ, ಮಾರ್ಚ್ 24ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಭ್ಮನ್ ಗಿಲ್ ನಾಯಕತ್ವದ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಆರು ರನ್‌ಗಳ ರೋಚಕ ಸೋಲನ್ನು ಅನುಭವಿಸಿತು.
ಗಮನಾರ್ಹವಾಗಿ, ಈ ಸೋಲು ಮುಂಬೈ ಇಂಡಿಯನ್ಸ್ ತಂಡದ ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಸತತ 12 ಬಾರಿ ಸೋಲಿನ ಸರಣಿಯನ್ನು ವಿಸ್ತರಿಸಿತು. ಅವರು ಮುಂದಿನ ಪಂದ್ಯದಲ್ಲಿ ಮಾರ್ಚ್ 27ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ನಂತರ ಏಪ್ರಿಲ್ 1ರಂದು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವಾಂಖೆಡೆಯಲ್ಲಿ ಆತಿಥ್ಯ ವಹಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications