IPL 2024: ತಂಡದ ಪರ ಗರಿಷ್ಠ ಸ್ಕೊರ್‌ರ ಆದ ಹಿರಿಮೆ ಹೊಂದಿರುವ ಡೇವಿಡ್ ವಾರ್ನರ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17 ನೇ ಆವೃತ್ತಿ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಮೈದಾನದಲ್ಲಿ ಮತ್ತೊಮ್ಮೆ ಬೌಂಡರಿ, ಸಿಕ್ಸರ್‌ಗಳನ್ನು ನೋಡಲುಪ್ರೇಕ್ಷಕರು ಕಾದು ಕುಳಿತಿರುತ್ತಾರೆ. ಸ್ಪೋಟಕ ಬ್ಯಾಟರ್‌ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಸಾಲಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್.
ಐಪಿಎಲ್ ಲೀಗ್‌ನಲ್ಲಿ ಹಲವು ದಾಖಲೆಗಳು ಸ್ಮರಣೀಯವಾಗಿವೆ. ಹಲವು ಆಟಗಾರರು ಮೈದಾನದಲ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದೆ. ಬೌಲರ್‌ಗಳು ಕೆಟ್ಟ ಎಸೆತ ಎಸೆದಾಗಲೆಲ್ಲಾ, ಬ್ಯಾಟರ್‌ಗಳು ದೊಡ್ಡ ಹೊಡೆತ ಬಾರಿಸಿ, ರನ್ ಸ್ಕೋರ್ ಏರಿಸುತ್ತಲೇ ಇರುತ್ತಾರೆ.

ಐಪಿಎಲ್ ತಂಡಗಳಲ್ಲಿ ಹಲವು ಆಟಗಾರರು ಒನ್ ಮ್ಯಾನ್ ಶೋ ರೀತಿ ಆಟವಾಡುತ್ತಾರೆ. ತಂಡದ ಒಟ್ಟು ಸ್ಕೊರ್ ಹಾಗೂ ಒಬ್ಬ ಬ್ಯಾಟರ್ ಅರ್ಧಕ್ಕಿಂತಲೂ ಹೆಚ್ಚು ರನ್ ಬಾರಿಸಿ ತಂಡಕ್ಕೆ ನೆರವಾಗುತ್ತಿದ್ದರು. ಐಪಿಎಲ್‌ಗೂ ಮುನ್ನ ಒಂದು ತಂಡದ ಪರ ಅತಿ ಹೆಚ್ಚು ಬಾರಿ ಗರಿಷ್ಠ ರನ್ ಹೊಂದಿದ ಕೀರ್ತಿಯನ್ನು ಡೇವಿಡ್ ವಾರ್ನರ್ ಹೊಂದಿದ್ದಾರೆ.
ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಗರಿಷ್ಠ 64 ಬಾರಿ ಪಂದ್ಯಗಳಲ್ಲಿ ಗರಿಷ್ಠ ಸ್ಕೋರರ್ ಆಗಿದ್ದಾರೆ. ಇವರ ಸನಿಹದಲ್ಲಿ ಯಾವೊಬ್ಬ ಬ್ಯಾಟರ್ 60 ಬಾರಿಯೂ ಯಾವುದೇ ಆಟಗಾರನಿಗೆ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.
ವಿರಾಟ್‌ಗೆ ಎರಡನೇ ಸ್ಥಾನ
ಡೇವಿಡ್ ವಾರ್ನರ್ ಬಳಿಕ ಒಂದೇ ಇನ್ನಿಂಗ್ಸ್‌ನಲ್ಲಿ ತಂಡದ ಗರಿಷ್ಠ ರನ್ ಬಾರಿಸಿದ ಕೀರ್ತಿ, ವಿರಾಟ್ ಕೊಹ್ಲಿಗೆ ಸಲ್ಲುತ್ತದೆ. ಇವರು 55 ಬಾರಿ ಟಾಪ್ ಸ್ಕೊರ್ ಆಗಿದ್ದು, ಎರಡನೇ ಸ್ಥಾನದಲ್ಲಿದ್ದರೆ. ಉಳಿದಂತೆ, ಶಿಖರ್ ಧವನ್ (54) ಮೂರನೇ ಸ್ಥಾನದಲ್ಲಿದ್ದಾರೆ, ರೋಹಿತ್ ಶರ್ಮಾ (53) ನಾಲ್ಕನೇ ಸ್ಥಾನ ಮತ್ತು ಕ್ರಿಸ್ ಗೇಲ್ (44) 5 ನೇ ಸ್ಥಾನದಲ್ಲಿದ್ದಾರೆ.

ಎಬಿ ಡಿವಿಲಿಯರ್ಸ್ 41, ಗೌತಮ್ ಗಂಭೀರ್ 40, ಸುರೇಶ್ ರೈನಾ 39, ಫಾಫ್ ಡು ಪ್ಲೆಸಿಸ್ 37, ಕೆಎಲ್ ರಾಹುಲ್ ಮತ್ತು ರಾಬಿನ್ ಉತ್ತಪ್ಪ ಜಂಟಿಯಾಗಿ 36-36 ಬಾರಿ ಪಂದ್ಯದಲ್ಲಿ ಅಗ್ರ ಸ್ಕೋರರ್‌ಗಳಾಗಿದ್ದಾರೆ.
ಐಪಿಎಲ್‌ನಲ್ಲಿ ಸಾಧನೆ
ವಾರ್ನರ್ ಐಪಿಎಲ್‌ನಲ್ಲಿ ಒಬಟ್ಟು 176 ಪಂದ್ಯಗಳಲ್ಲಿ 41.54 ಸರಾಸರಿ ಮತ್ತು 139.92 ಸ್ಟ್ರೈಕ್ ರೇಟ್‌ನೊಂದಿಗೆ 6,397 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 4 ಶತಕ ಮತ್ತು 60 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಲೀಗ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 126 ರನ್. ಅಲ್ಲದೆ ಇದುವರೆಗೆ 22 ಬಾರಿ ಅಜೇಯರಾಗಿ ಉಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications