IPL 2024: ಆರ್‌ಸಿಬಿ ಎದುರಿನ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹೊಸ ಕ್ಯಾಪ್ಟನ್ ಘೋಷಣೆ
ಮೇ 11 ಶನಿವಾರ, ನಿಧಾನಗತಿಯ ಓವರ್ ರೇಟ್‌ನಿಂದಾಗಿ ಐಪಿಎಲ್ ಒಂದು ಪಂದ್ಯಕ್ಕೆ ರಿಷಬ್ ಪಂತ್ ಅವರನ್ನು ಅಮಾನತುಗೊಳಿಸಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಇದರೊಂದಿಗೆ ಪಂತ್‌ಗೆ ದಂಡವನ್ನೂ ವಿಧಿಸಲಾಗಿದೆ.
ಹೀಗಿರುವಾಗ ರಿಷಬ್ ಪಂತ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಮೇ 12 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ನಾಯಕ ಯಾರೆಂಬುದು ಕನ್ಫರ್ಮ್ ಆಗಿದೆ.

ಮುಂದಿನ ಪಂದ್ಯದಲ್ಲಿ ಆಲ್ ರೌಂಡರ್ ಅಕ್ಸರ್ ಪಟೇಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗುತ್ತಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಅಕ್ಸರ್ ಡೆಲ್ಲಿ ತಂಡದ ಪ್ರಸ್ತುತ ಉಪನಾಯಕ ಕೂಡ ಹೌದು. ಆದ್ದರಿಂದ ಪಂತ್ ಬದಲಿಗೆ ತಂಡದ ನಾಯಕರಾಗಿ ಅಕ್ಸರ್ ಆರ್‌ಸಿಬಿ ಎದರು ಮುನ್ನೆಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಪಂದ್ಯ ಡೆಲ್ಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಡೆಲ್ಲಿ ಗೆದ್ದರೆ ಪ್ಲೇ ಆಫ್ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. ಆರ್‌ಸಿಬಿ ತಂಡಕ್ಕೂ ಈ ಪಂದ್ಯ ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿರಲು ಮಹತ್ವದಾಗಿದೆ.
14 ತಿಂಗಳ ನಂತರ ಕ್ರಿಕೆಟ್‌ಗೆ ಮರಳಿದ ಪಂತ್ ಈ ಋತುವಿನ ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಮೂಲಕ ಪ್ಲೇಆಫ್ ತಲುಪುವ ಅವಕಾಶವನ್ನು ಪಂತ್ ಹೊಂದಿದ್ದರು, ಆದರೆ ಈಗ ಪಂತ್ ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಅಲಭ್ಯರಾಗಿರುವುದು ಡೆಲ್ಲಿ ಪ್ಲೇ ಆಪ್ ಹಾದಿಗೆ ತುಂಬಾ ಕಷ್ಟಕರವಾಗಬಹುದು.
ಐಪಿಎಲ್ ಒಂದು ಪಂದ್ಯಕ್ಕೆ ರಿಷಬ್ ಪಂತ್ ಬ್ಯಾನ್
ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಿಷಬ್ ಪಂತ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಪಂದ್ಯಕ್ಕೆ ಬ್ಯಾನ್ ಮಾಡಿದ್ದು, 30 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ. ಮೇ 7 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ ಮಾಡಿರುವುದು ಸಾಬೀತಾದ ಹಿನ್ನೆಲೆ ರಿಷಬ್ ಪಂತ್ ವಿರುದ್ಧ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ಇದಕ್ಕೂ ಮುನ್ನ ಎರಡನೇ ಬಾರಿಗೆ ಏಪ್ರಿಲ್ 3 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಇಂಪ್ಯಾಕ್ಟ್ ಪ್ಲೇಯರ್ ಅಭಿಷೇಕ್ ಪೊರೆಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಆಡುವ ಹನ್ನೊಂದರ ಇತರ ಆಟಗಾರರಿಗೆ ತಲಾ ರೂ 6 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ 25% ರಷ್ಟು ದಂಡ ವಿಧಿಸಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications