IPL 2024: ಕೋಚಿಂಗ್ ಸ್ಟಾಫ್‌ನಿಂದ ಅಜಿತ್ ಅಗರ್ಕರ್, ಶೇನ್ ವ್ಯಾಟ್ಸನ್ ಕೈಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್; ಕಾರಣ?
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಕ್ತಾಯದ ಎರಡು ತಿಂಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಅಜಿತ್ ಅಗರ್ಕರ್ ಮತ್ತು ಶೇನ್ ವ್ಯಾಟ್ಸನ್ ಅವರನ್ನು ತಮ್ಮ ಕೋಚಿಂಗ್ ಸ್ಟಾಫ್‌ನಿಂದ ಬಿಡುಗಡೆಗೊಳಿಸಿದೆ.
ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಹುದ್ದೆಗೆ ಆಕಾಂಕ್ಷಿಯಾಗಿರುವ ಅಜಿತ್ ಅಗರ್ಕರ್ ಅವರು ಗುರುವಾರ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಹುದ್ದೆಯನ್ನು ತ್ಯಜಿಸಿದರು.

ಅಜಿತ್ ಅಗರ್ಕರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಮತ್ತು ಕಾಮೆಂಟೇಟರ್ ಆಗಿದ್ದರು. ಒಂದು ವೇಳೆ ಭಾರತ ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರ ಹುದ್ದೆಗೆ ಆಯ್ಕೆಯಾದರೆ, ಪ್ರಸ್ತುತ ವಾರ್ಷಿಕ ಪ್ಯಾಕೇಜ್‌ಗಿಂತ ಹೆಚ್ಚಿನದನ್ನು ಗಳಿಸುತ್ತಾರೆ. ಆದ್ದರಿಂದ, ಬಿಸಿಸಿಐ ಅಸ್ತಿತ್ವದಲ್ಲಿರುವ ವೇತನ ರಚನೆಯನ್ನು ಪರಿಶೀಲಿಸಬೇಕಾಗುತ್ತದೆ.
2023ರ ಐಪಿಎಲ್ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ರಿಕಿ ಪಾಂಟಿಂಗ್ (ಮುಖ್ಯ ಕೋಚ್) ಮತ್ತು ಸೌರವ್ ಗಂಗೂಲಿ (ಕ್ರಿಕೆಟ್ ನಿರ್ದೇಶಕ) ನೇತೃತ್ವದಲ್ಲಿ ಅಜಿತ್ ಅಗರ್ಕರ್ ಮತ್ತು ಶೇನ್ ವ್ಯಾಟ್ಸನ್ ಅವರು ತಂಡದಲ್ಲಿ ಸಹಾಯಕ ಕೋಚ್ ಆಗಿದ್ದರು.
2023ರ ಐಪಿಎಲ್ ಮಧ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತವಾಗಿ ಸೋಲು ಅನುಭವಿಸುತ್ತಿದ್ದಾಗ, ದೀರ್ಘಾವಧಿಯ ಕೋಚಿಂಗ್ ಸಿಬ್ಬಂದಿಯನ್ನು ಲೀಗ್ ಮುಕ್ತಾಯದ ನಂತರ ಬಿಡುಗಡೆಗೊಳಿಸಲಾಗುವುದು ಎಂಬ ವರದಿಗಳು ಬಂದಿದ್ದವು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿಂದಿನ ಸಂಪೂರ್ಣ ಕೋಚಿಂಗ್ ಸಿಬ್ಬಂದಿ ಹೀಗಿದೆ. ಕ್ರಿಕೆಟ್ ನಿರ್ದೇಶಕರಾಗಿ ಸೌರವ್ ಗಂಗೂಲಿ, ಮುಖ್ಯ ಕೋಚ್ ರಿಕಿ ಪಾಂಟಿಂಗ್, ಜೇಮ್ಸ್ ಹೋಪ್ಸ್ (ಸಹಾಯಕ ಕೋಚ್), ಅಜಿತ್ ಅಗರ್ಕರ್ (ಸಹಾಯಕ ಕೋಚ್), ಶೇನ್ ವ್ಯಾಟ್ಸನ್ (ಸಹಾಯಕ ಕೋಚ್), ಪ್ರವೀಣ್ ಆಮ್ರೆ (ಸಹಾಯಕ ಕೋಚ್), ಬಿಜು ಜಾರ್ಜ್ (ಸಹಾಯಕ ಕೋಚ್).
ಈ ಬಾರಿಯ ಐಪಿಎಲ್ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಗಾಯಾಳು ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ನಾಯಕನಾಗಿ ನೇಮಕಗೊಂಡ ಡೇವಿಡ್ ವಾರ್ನರ್ ಪಂದ್ಯಾವಳಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಮಾಡಲು ವಿಫಲರಾದರು.
ಪೃಥ್ವಿ ಶಾ ಮತ್ತು ರೋವ್‌ಮನ್ ಪೊವೆಲ್ ಅವರಂತಹ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿನ್ನಡೆಗೆ ಕಾರಣವಾಯಿತು.
ತಂಡದಲ್ಲಿ ಉಪನಾಯಕ ಅಕ್ಷರ್ ಪಟೇಲ್ ಅವರ ಕ್ರಮಾಂಕದ ಸುತ್ತ ವಿವಾದಗಳು ಸುತ್ತುವರೆದಿವೆ. ಎಡಗೈ ಆಲ್‌ರೌಂಡರ್ ಆಡುವ 11ರ ಬಳಗದಲ್ಲಿ ತನಗಿಂತ ಮೊದಲು ಆಡಿದ ಬ್ಯಾಟ್ಸ್‌ಮನ್‌ಗಳಿಗಿಂತ ಉತ್ತಮವಾಗಿ ಆಡಿದ್ದರೂ, 7ನೇ ಸ್ಥಾನದಲ್ಲಿ ನಿರಂತರವಾಗಿ ಬ್ಯಾಟ್ ಮಾಡಿದ್ದೇಕೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಮುಂದಿನ ಐಪಿಎಲ್ ಋತುವಿನ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಲ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಖಾಯಂ ನಾಯಕ ರಿಷಭ್ ಪಂತ್ ಮರಳುವ ನಿರೀಕ್ಷೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications