ಸರ್ಫರಾಜ್ ಖಾನ್.. ಸದ್ಯ ಟೀಮ್ ಇಂಡಿಯಾದಲ್ಲಿ ಸನ್‌ಷೇನ್ ಕ್ರಿಯೇಟ್ ಮಾಡಿರುವ ಹೆಸರು. ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಸರ್ಫರಾಜ್ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ್ದರು. ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ್ದ ಸರ್ಫರಾಜ್ ಖಾನ್, ಅಭಿಮಾನಿಗಳ ಚಿತ್ತ ಕದ್ದಿದ್ದರು. ಆದರೆ ಈ ಬಾರಿ ಐಪಿಎಲ್‌ನಲ್ಲಿ ಸರ್ಫರಾಜ್ ಖಾನ್ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ರಾಜ್‌ಕೋಟ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸರ್ಫರಾಜ್ ಟೀಮ್ ಮ್ಯಾನೇಜ್ಮೆಂಟ್ ಮುಖದಲ್ಲಿ ಎದ್ದಿದ್ದ ಚಿಂತೆಯ ಗೆರೆಗಳನ್ನು ಅಳಿಸಿದ್ದರು. ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸರ್ಫರಾಜ್ ಖಾನ್ ಎಲ್ಲರ ಮನ ಗೆದ್ದಿದ್ದರು. ಇವರ ಕ್ಲಾಸಿಕ್ ಸ್ವೀಪ್ ಶಾಟ್‌ಗಳು ಹಾಗೂ ಬಿಗ್ ಹಿಟ್‌ಗಳು ಇವರನ್ನು ಚುಟುಕು ಫಾರ್ಮೆಟ್‌ಗೂ ಸೂಕ್ತ ಎಂದು ಸಾಬೀತು ಪಡಿಸಿದ್ದವು.

ಸರ್ಫರಾಜ್ ಖಾನ್ ಆಡಿದ ಧಾಟಿಯನ್ನು ನೋಡಿದ ಅಭಿಮಾನಿಗಳು ಈ ಪ್ಲೇಯರ್ ಐಪಿಎಲ್‌ನಲ್ಲಿ ಇದ್ದರೆ ಸೂಕ್ತ ಎಂದು ಭಾವಿಸಿದ್ದರು. ಆದರೆ ಐಪಿಎಲ್‌ನ ಯಾವುದೇ ಫ್ರಾಂಚೈಸಿ ಇವರತ್ತ ದುಬೈನಲ್ಲಿ ನಡೆದ ಹರಾಜಿನಲ್ಲಿ ಗಮನ ಹರಿಸಲಿಲ್ಲ. ದೇಶೀಯ ಟೂರ್ನಿಗಳ ರನ್‌ಗಳನ್ನು ಗುಡ್ಡೆ ಹಾಕಿರುವ ಪ್ಲೇಯರ್‌ಗೆ, ಐಪಿಎಲ್‌ನಲ್ಲಿ ಅವಕಾಶ ಸಿಗುವುದಿಲ್ಲವೇ ಎಂಬ ಪ್ರಶ್ನೆಗಳು ಎಳುತ್ತಿವೆ.
ಸರ್ಫರಾಜ್ ಖಾನ್ ದೇಶೀಯ ಟೂರ್ನಿಗಳಲ್ಲಿ ಅಬ್ಬರಿಸಿದ್ದಾರೆ. ಇದರ ಫಲವಾಗಿ ಅವರಿಗೆ ಭಾರತ ಎ ತಂಡದಲ್ಲೂ ಸ್ಥಾನ ಲಭಿಸಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಸರ್ಫರಾಜ್ ರನ್ ಕಲೆ ಹಾಕಿದ್ದರು. ಇದರ ಫಲವಾಗಿಯೇ ಟೀಮ್ ಇಂಡಿಯಾ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಸರ್ಫರಾಜ್ ಖಾನ್‌ಗೆ ಆಡುವ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸರ್ಫರಾಜ್ ತಮ್ಮ ಕ್ಷಮತೆ ಸಾಬೀತು ಪಡಿಸಿದ್ದರು.
ಆದರೆ, ಈ ಸ್ಟಾರ್ ಪ್ಲೇಯರ್‌ಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಈ ವರ್ಷ ದೂರ ಸರಿದಂತೆ ಕಾಣುತ್ತದೆ. ಫ್ರಾಂಚೈಸಿಗಳು ಸರ್ಫರಾಜ್ ಖಾನ್ ಲಾಂಗರ್ ಫಾರ್ಮೆಟ್‌ಗೆ ಸೂಕ್ತ ಆಟಗಾರ ಎಂದು ಹೇಳಿವೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಸರ್ಫರಾಜ್ ಖಾನ್ 2015ರಲ್ಲೇ ಆರ್‌ಸಿಬಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಸಿಕ್ಕ ಅವಕಾಶದಲ್ಲಿ ಆಗ ಸರ್ಫರಾಜ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದರು. ಆ ಆವೃತ್ತಿಯಲ್ಲಿ ಅವರಿಗೆ 13 ಪಂದ್ಯಗಳಲ್ಲಿ ಆಡುವ ಅವಕಾಶ ನೀಡಲಾಗಿದ್ದು, ಕೇವಲ 111 ರನ್ ಗಳಿಸಿದರು. ಒಟ್ಟಾರೆ ಐಪಿಎಲ್ ಅನುಭವವನ್ನು ನೋಡುವದಾದರೆ ಸರ್ಫರಾಜ್ ಖಾನ್, 50 ಐಪಿಎಲ್ ಪಂದ್ಯಗಳನ್ನು ಆಡಿದ್ದು, 585 ರನ್ ಸಿಡಿಸಿದ್ದಾರೆ. ಇದರಲ್ಲಿ ಕೇವಲ 1 ಅರ್ಧಶತಕ ಸೇರಿದೆ. 2023ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 4 ಬಾರಿ ಕಣಕ್ಕೆ ಇಳಿದಿದ್ದ ಸರ್ಫರಾಜ್ ಕೇವಲ 53 ರನ್ ಸಿಡಿಸಿದ್ದರು. ಹೀಗಾಗಿ ಫ್ರಾಂಚೈಸಿ ಅವರನ್ನು ಕೈ ಬಿಟ್ಟಿತ್ತು.
ಸರ್ಫರಾಜ್ ಖಾನ್ ಐಪಿಎಲ್ ಆಡುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಲು ಆಗದು. ಇವರನ್ನು ಟ್ರೇಡ್ ಮಾಡಲು ಆಗದು. ಬದಲಿಗೆ ಗಾಯಾಳು ಆಟಗಾರನ ರಿಪ್ಲೇಸ್ ಮೆಂಟ್ ಆಗಿ ಇವರು ಐಪಿಎಲ್ ತಂಡವನ್ನು ಸೇರಬಹುದು. ಇಲ್ಲದೇ ಇದ್ದರೆ ಮನೆಯಲ್ಲೇ ಟಿವಿ ಮುಂದೆ ಕುಳಿತು ಪಂದ್ಯವನ್ನು ನೋಡಬೇಕಾಗುತ್ತದೆ.
2025ರ ಐಪಿಎಲ್‌ಗೆ ಮೆಘಾ ಹರಾಜು ನಡೆಯಲಿದೆ. ಇದಕ್ಕೂ ಮುನ್ನ ಸರ್ಫರಾಜ್ ತಾನೂ ಎಲ್ಲ ಮಾದರಿಯ ಕ್ರಿಕೆಟ್‌ಗೆ ಹೊಂದಿಕೊಳ್ಳುವ ಆಟಗಾರ ಎಂದು ಸಾಬೀತು ಪಡಿಸಬೇಕು. ಅಂದಾಗ ಮಾತ್ರ ದೊಡ್ಡ ಮೊತ್ತವನ್ನು ಜೇಬಿಗೆ ಇಳಿಸಿಕೊಳ್ಳಬಲ್ಲರು.