Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಪ್ರಿಲ್‌ನಲ್ಲಿ 2024ರ ಐಪಿಎಲ್ ಆವೃತ್ತಿ ಆರಂಭವಾಗೋದು ಡೌಟು! ಏಕೆಂದರೆ...

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜು ಪ್ರಕ್ರಿಯೆ ದುಬೈನಲ್ಲಿ ಮಂಗಳವಾರ, ಡಿಸೆಂಬರ್ 19ರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಎಲ್ಲಾ 10 ಫ್ರಾಂಚೈಸಿಗಳು ಒಟ್ಟು 262 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಜ್ಜಾಗಿವೆ.

ಒಟ್ಟು 333 ಆಟಗಾರರ ಪೈಕಿ 214 ಭಾರತೀಯ ಆಟಗಾರರು ಮತ್ತು 119 ಸಾಗರೋತ್ತರ ಆಟಗಾರರು ಹರಾಜು ಸುತ್ತಿಗೆಗೆ ಹೋಗಲಿದ್ದಾರೆ. ಆದರೆ, 77 ಸ್ಲಾಟ್‌ಗಳನ್ನು ಭರ್ತಿ ಮಾಡಲಾಗುವುದು, ಅದರಲ್ಲಿ 30 ವಿದೇಶಿ ಆಟಗಾರರಿಗೆ ಮೀಸಲಿದೆ. 2023ರ ಐಪಿಎಲ್ ರನ್ನರ್ ಅಪ್ ಗುಜರಾತ್ ಟೈಟನ್ಸ್ 38.15 ಕೋಟಿ ರೂಪಾಯಿ ಅತ್ಯಧಿಕ ಪರ್ಸ್ ಉಳಿಸಿಕೊಂದೆ.

IPL 2024 Edition Unlikely To start In April; Heres the reason

2024ರ ಐಪಿಎಲ್ ಹರಾಜಿನ ಒಂದು ದಿನದ ಮೊದಲು, ಕ್ರಿಕ್‌ಇನ್‌ಫೋ ಮತ್ತು ಕ್ರಿಕ್‌ಬಜ್ ಸೇರಿದಂತೆ ಹಲವು ವರದಿಗಳು 2024ರ ಐಪಿಎಲ್ ವಿಂಡೋ ಮಾರ್ಚ್ 22ರಿಂದ ಪ್ರಾರಂಭವಾಗಲಿದೆ ಮತ್ತು ಮೇ ಅಂತ್ಯದವರೆಗೆ ಮುಂದುವರಿಯುತ್ತದೆ ಎಂದು ವರದಿ ಮಾಡಿವೆ.

ಇದೇ ವೇಳೆ ಭಾರತದ ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗವು ಅಂತಿಮಗೊಳಿಸಿದ ನಂತರವೇ, ಐಪಿಎಲ್ 2024ರ ಅಂತಿಮ ದಿನಾಂಕಗಳನ್ನು ಘೋಷಿಸಲಾಗುತ್ತದೆ.

ಆಸ್ಟ್ರೇಲಿಯಾದ ಸ್ಟಾರ್ ವೇಗಿ ಜೋಶ್ ಹ್ಯಾಜಲ್‌ವುಡ್ ಅವರ ಪತ್ನಿ ಚೆರಿನಾ ಮರ್ಫಿ ಕ್ರಿಶ್ಚಿಯನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದರಿಂದ, ಹ್ಯಾಜಲ್‌ವುಡ್ ಅವರು ಮೇ ಮೊದಲ ವಾರದಿಂದ ಐಪಿಎಲ್ 2024ರ ಆವೃತ್ತಿಗೆ ಲಭ್ಯವಿರುತ್ತಾರೆ ಎಂದು ಕ್ರಿಕ್‌ಇನ್‌ಫೋ ವರದಿ ತಿಳಿಸಿದೆ.

ಆಸೀಸ್ ವೇಗದ ಬೌಲರ್‌ನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬಿಡುಗಡೆ ಮಾಡಿತು. ಐಪಿಎಲ್ 2024ರ ಹರಾಜಿನಲ್ಲಿ ಆಸ್ಟ್ರೇಲಿಯನ್ ಆಟಗಾರರ ಮೇಲೆ ಭಾರೀ ಕುತೂಹಲವಿದೆ. ಅದರಲ್ಲಿ ಮಿಚೆಲ್ ಸ್ಟಾರ್ಕ್ ಕೂಡ ಒಬ್ಬ ಆಟಗಾರನಾಗಿದ್ದು, ದೊಡ್ಡ ಮೊತ್ತ ಪಡೆಯುವುದನ್ನು ದಿನವನ್ನು ನಿರೀಕ್ಷಿಸಲಾಗಿದೆ.

ಆದರೆ, ಮಿಚೆಲ್ ಸ್ಟಾರ್ಕ್ 20 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಸಾಧ್ಯತೆ ಕಡಿಮೆ ಇದೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಕೋಚ್ ಅನಿಲ್ ಕುಂಬ್ಳೆ ಭಾವಿಸಿದ್ದಾರೆ.

"ಇಲ್ಲ, 25 ಆಟಗಾರರ ಒಂದು ತಂಡದಲ್ಲಿ ಒಬ್ಬ ಆಟಗಾರ 20 ಕೋಟಿ ರೂಪಾಯಿಗಳ ಗಡಿಯನ್ನು ಮೀರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನೀವು ಎಂಟು ವಿದೇಶಿ ಆಟಗಾರರನ್ನು ಹೊಂದಿರುವಿರಿ, ವಿದೇಶಿ ಆಟಗಾರರಿಗೆ ಪರ್ಸ್‌ನ ಮೂರನೇ ಒಂದು ಭಾಗದಷ್ಟು ಇರಬೇಕು," ಎಂದು ಅನಿಲ್ ಕುಂಬ್ಳೆ ಜಿಯೋ ಸಿನಿಮಾಗೆ ತಿಳಿಸಿದರು.

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಅವರು, ಈ ಐಪಿಎಲ್ ಮಿನಿ ಹರಾಜಿನಲ್ಲಿ ಶಾರ್ದೂಲ್ ಠಾಕೂರ್ ಭಾರತದ ಅತ್ಯಂತ ದುಬಾರಿ ಆಟಗಾರನಾಗಬಹುದು ಎಂದು ಭಾವಿಸಿದ್ದಾರೆ.

"ಶಾರ್ದೂಲ್ ಠಾಕೂರ್ ಆಲ್‌ರೌಂಡರ್ ಆಗಿರುವುದರಿಂದ, ಅವರ ಸುತ್ತ ಹೆಚ್ಚಿನ ಆಸಕ್ತಿ ಇರುತ್ತದೆ," ಎಂದು ಇಯಾನ್ ಮಾರ್ಗನ್ ಹೇಳಿದರು.

Story first published: Monday, December 18, 2023, 22:52 [IST]
Other articles published on Dec 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+