Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಮತ್ತೆ ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಟೀಕಿಸಿದ ಆರ್‌ಸಿಬಿ ಮಾಜಿ ಪ್ಲೇಯರ್

ಶನಿವಾರ, ಮೇ 4ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 52ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಮುಂದುವರೆಸಿದರು.

ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಭಾರತ ಹಾಗೂ ಆರ್‌ಸಿಬಿ ತಂಡದ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಹಿಗ್ಗಾಮುಗ್ಗಾ ಟೀಕಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ "ಅತಿಯಾಗಿ ಪುರಸ್ಕರಿಸಲ್ಪಟ್ಟ' ಆಟಗಾರ ಎಂದು ಕರೆದಿದ್ದಾರೆ.

IPL 2024 Ex-RCB Player Parthiv Patel Slams Glenn Maxwell for Continuing Poor Batting Form

ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಪಂದ್ಯದ ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಬಗ್ಗೆ ಪಾರ್ಥಿವ್ ಪಟೇಲ್ ಅವರಿಂದ ಈ ಹೇಳಿಕೆ ಬಂದಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಲ್‌ರೌಂಡರ್ ಮೂರು ಎಸೆತಗಳಲ್ಲಿ ಕೇವಲ ನಾಲ್ಕು ರನ್ ಗಳಿಸಿದರು. ಆದಾಗ್ಯೂ, ಆರ್‌ಸಿಬಿ ತಂಡ ತಮ್ಮ ತವರಿನ ಪ್ರೇಕ್ಷಕರ ಮುಂದೆ ಗುಜರಾತ್ ಟೈಟನ್ಸ್ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಸದ್ಯ ನಡೆಯುತ್ತಿರುವ ಐಪಿಎಲ್ 2024ರಲ್ಲಿ 35 ವರ್ಷದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕಳಪೆ ಪ್ರದರ್ಶನಕ್ಕಾಗಿ ಪಾರ್ಥಿವ್ ಪಟೇಲ್ ತಮ್ಮ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಟೀಕಿಸಿದರು. "ಗ್ಲೆನ್ ಮ್ಯಾಕ್ಸ್‌ವೆಲ್... ಐಪಿಎಲ್ ಇತಿಹಾಸದಲ್ಲಿ ಅತಿಯಾಗಿ ಪುರಸ್ಕರಿಸಲ್ಪಟ್ಟ ಆಟಗಾರನಾಗಿದ್ದಾರೆ,'' ಎಂದು ಬರೆದುಕೊಂಡಿದ್ದಾರೆ.

ಐಪಿಎಲ್‌ನ 17ನೇ ಆವೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ ಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ 104 ರನ್ ಗಳಿಸಿದ್ದಾರೆ. ಇನ್ನು ಆರ್‌ಸಿಬಿ ಪರ 8.33ರ ಎಕಾನಮಿ ದರದಲ್ಲಿ ರನ್ ನೀಡಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

IPL 2024 Ex-RCB Player Parthiv Patel Slams Glenn Maxwell for Continuing Poor Batting Form

ಆರ್‌ಸಿಬಿ vs ಗುಜರಾತ್ ಟೈಟನ್ಸ್ ಪಂದ್ಯದ ವಿವರ

ಟಾಸ್ ಗೆದ್ದ ನಂತರ ಆರ್‌ಸಿಬಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆಗ ಗುಜರಾತ್ ಟೈಟನ್ಸ್ ಒಂದು ಹಂತದಲ್ಲಿ 19 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಶಾರುಖ್ ಖಾನ್ (37 ರನ್) ಮತ್ತು ಡೇವಿಡ್ ಮಿಲ್ಲರ್ (30 ರನ್) ನಡುವಿನ 61 ರನ್‌ಗಳ ಜೊತೆಯಾಟವು ಗುಜರಾತ್ ಟೈಟನ್ಸ್ ಆಟಕ್ಕೆ ಮರಳಲು ಸಹಾಯ ಮಾಡಿತು.

ಆರ್‌ಸಿಬಿ ನಿಯಮಿತ ವಿಕೆಟ್‌ಗಳನ್ನು ಪಡೆಯುತ್ತಲೇ ಇತ್ತು ಮತ್ತು ಮತ್ತೊಮ್ಮೆ ಗುಜರಾತ್ ಟೈಟನ್ಸ್ ತಂಡ 87 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕುಸಿಯಿತು. ನಂತರ ರಾಹುಲ್ ತೆವಾಟಿಯಾ (35 ರನ್) ಮತ್ತು ರಶೀದ್ ಖಾನ್ (18 ರನ್) ನಡುವಿನ 44 ರನ್‌ಗಳ ಜೊತೆಯಾಟದಿಂದ 100ರ ಗಡಿ ದಾಟಿತು. ಅಂತಿಮವಾಗಿ 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು.

ಆರ್‌ಸಿಬಿ ಪರ ಯಶ್ ದಯಾಳ್ 21 2 ವಿಕೆಟ್, ವಿಜಯ್‌ಕುಮಾರ್ ವೈಶಾಕ್ 23 ರನ್ ನೀಡಿ 2 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ 29 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರೆ, ಕ್ಯಾಮರೂನ್ ಗ್ರೀನ್ ಮತ್ತು ಕರ್ಣ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

148 ರನ್‌ಗಳ ಚೇಸಿಂಗ್ ವೇಳೆ ಆರ್‌ಸಿಬಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರಾರಂಭಿಸಿತು. ಫಾಫ್ ಡು ಪ್ಲೆಸಿಸ್ (64 ರನ್) ಮತ್ತು ವಿರಾಟ್ ಕೊಹ್ಲಿ (42 ರನ್) ಮೊದಲ ವಿಕೆಟ್‌ಗೆ 92 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಆ ಬಳಿಕ ಜೋಶುವಾ ಲಿಟಲ್ 45 ರನ್ ನೀಡಿ 4 ವಿಕೆಟ್ ಮತ್ತು ನೂರ್ ಅಹ್ಮದ್ 23 ರನ್ ನೀಡಿ 2 ವಿಕೆಟ್ ಅವರ ಅದ್ಭುತ ಸ್ಪೆಲ್‌ನಿಂದ ಆರ್‌ಸಿಬಿ ದಾರಿ ತಪ್ಪಿತ್ತು. ಆದರೆ, ದಿನೇಶ್ ಕಾರ್ತಿಕ್ ಅಜೇಯ 21 ರನ್ ಮತ್ತು ಸ್ವಪ್ನಿಲ್ ಸಿಂಗ್ ಅಜೇಯ 15 ರನ್‌ ಗಳಿಸಿ ತಮ್ಮ ತಂಡವನ್ನು 38 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನತ್ತ ಮುನ್ನಡೆಸಿದರು.

Story first published: Sunday, May 5, 2024, 22:18 [IST]
Other articles published on May 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+