IPL 2024: ಫಾಫ್ ಡು ಪ್ಲೆಸಿಸ್ ಸಮಯ ಮುಗೀತಾ?; ಐಪಿಎಲ್ 2025ಕ್ಕೆ ಆರ್‌ಸಿಬಿಗೆ ಹೊಸ ನಾಯಕ?
ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸೋಲಿನೊಂದಿಗೆ ಫಾಫ್ ಡು ಪ್ಲೆಸಿಸ್ ಅವರ ನಾಯಕತ್ವದ ಮುಂದುವರೆಕೆಯ ಬಗ್ಗೆ ಊಹಾಪೋಹಗಳನ್ನು ಹೆಚ್ಚಿಸಿದೆ.
2022ರ ಅವೃತ್ತಿಯಲ್ಲಿ ವಿರಾಟ್ ಕೊಹ್ಲಿಯಿಂದ ನಾಯಕತ್ವ ಜವಾಬ್ದಾರಿ ಸ್ವೀಕರಿಸಿದ ಫಾಫ್ ಡು ಪ್ಲೆಸಿಸ್ ಅವರ ಮೂರು ವರ್ಷಗಳ ಆರ್‌ಸಿಬಿ ನಾಯಕತ್ವದ ಅವಧಿಯ ಅಂತ್ಯವನ್ನು ಸಮೀಪಿಸಿದೆ ಎಂದು ಹೇಳಬಹುದು.

ಆರ್‌ಸಿಬಿ ಜೊತೆ ಫಾಫ್ ಡು ಪ್ಲೆಸಿಸ್ ಅಧಿಕಾರಾವಧಿ: ಮಿಶ್ರ ಪ್ರತಿಫಲ
ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಅಮೂಲ್ಯ ಆಸ್ತಿಯಾಗಿದ್ದರೂ, ಅವರ ನಾಯಕತ್ವವು ಪರಿಶೀಲನೆಗೆ ಒಳಪಟ್ಟಿದೆ. ನಾಯಕನಾಗಿ ಐಪಿಎಲ್ 2022ರ ಅವರ ಮೊದಲ ಆವೃತ್ತಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನವನ್ನು ತಲುಪಿತು. ಆದರೆ ಪ್ಲೇಆಫ್‌ನಲ್ಲಿ ಎಡವಿತು.
ಐಪಿಎಲ್ 2023ರಲ್ಲಿ ಫಾಫ್ ಡು ಪ್ಲೆಸಿಸ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರೆ, ತಂಡದ ಪ್ರದರ್ಶನವು ಕಡಿಮೆಯಾಗಿತ್ತು. ಏಕೆಂದರೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿತು.
ಇದೀಗ ಐಪಿಎಲ್ 2024ರಲ್ಲಿ ಅಭಿಯಾನದ ನಿರಾಶಾದಾಯಕ ಆರಂಭದ ನಂತರ, ಆರ್‌ಸಿಬಿ ತಂಡ ಸತತ ಆರು ಗೆಲುವುಗಳನ್ನು ದಾಖಲಿಸಿ ಪ್ಲೇಆಫ್‌ಗೆ ಪ್ರವೇಶಿಸಿತು. ಆದರೆ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಹೊರಬಿತ್ತು.

ಫಾಫ್ ಡು ಪ್ಲೆಸಿಸ್ ವಯಸ್ಸು ಒಂದು ಕಾರಣ
ಐಪಿಎಲ್ 2024ರ ನಂತರ ಆರ್‌ಸಿಬಿ ತಂಡದ ನಾಯಕತ್ವ ಬದಲಿಸಲು ಫಾಫ್ ಡು ಪ್ಲೆಸಿಸ್ ಅವರ ವಯಸ್ಸು (39) ಪರಿಗಣನೆಯ ಮತ್ತೊಂದು ಪ್ರಮುಖ ಅಂಶವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಸ್ಟಾರ್‌ನ ನಿವೃತ್ತಿಯ ಸಾಧ್ಯತೆಯೊಂದಿಗೆ, ಆರ್‌ಸಿಬಿ ದೀರ್ಘಾವಧಿಯ ನಾಯಕತ್ವದ ಪರಿಹಾರವನ್ನು ಹುಡುಕುತ್ತಿರಬಹುದು.
ಫಾಫ್ ಡು ಪ್ಲೆಸಿಸ್‌ಗೆ ಸಂಭಾವ್ಯ ಬದಲಿ ನಾಯಕರು
ಐಪಿಎಲ್ 2024ರ ನಂತರ ಫಾಫ್ ಡು ಪ್ಲೆಸಿಸ್ ಸಂಭಾವ್ಯವಾಗಿ ಚಿತ್ರಣದಿಂದ ಹೊರಗುಳಿದಿರುವುದರಿಂದ, ಐಪಿಎಲ್ 2025ರಲ್ಲಿ ಆರ್‌ಸಿಬಿ ನಾಯಕತ್ವದ ಪಾತ್ರಕ್ಕಾಗಿ ಕೆಲವು ಹೆಸರುಗಳು ಸ್ಪರ್ಧಿಗಳಾಗಿ ಹೊರಹೊಮ್ಮುತ್ತಿವೆ.
ಬೆನ್ ಸ್ಟೋಕ್ಸ್
ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ 2023ರ ಐಪಿಎಲ್ ಆವೃತ್ತಿ ಕಳಪೆಯಾಗಿದ್ದರೂ, 45 ಪಂದ್ಯಗಳಲ್ಲಿ 935 ರನ್ ಮತ್ತು 28 ವಿಕೆಟ್‌ಗಳೊಂದಿಗೆ ಉತ್ತಮವಾದ ಒಟ್ಟಾರೆ ದಾಖಲೆಯನ್ನು ಹೊಂದಿದ್ದಾರೆ. ಅವರ ಅನುಭವ ಮತ್ತು ನಾಯಕತ್ವ ಗುಣಗಳು ಅವರನ್ನು ಆರ್‌ಸಿಬಿ ನಾಯಕನ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿಯನ್ನಾಗಿ ಮಾಡುತ್ತದೆ.
ಕೆಎಲ್ ರಾಹುಲ್
ಸದ್ಯ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಕೆಎಲ್ ರಾಹುಲ್ ಬಿಡುಗಡೆ ಮಾಡಲು ನಿರ್ಧರಿಸಿದರೆ, ಆಗ ಆರ್‌ಸಿಬಿ ಕರ್ನಾಟಕ ಮೂಲದ ಆಟಗಾರನ ಸೇವೆಯನ್ನು ಪಡೆದುಕೊಳ್ಳಲು ಖಚಿತವಾಗಿ ನೋಡುತ್ತದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಆರ್‌ಸಿಬಿ ಫ್ರಾಂಚೈಸಿಗೆ ಕೆಎಲ್ ರಾಹುಲ್ ಮರಳುವಿಕೆಯನ್ನು ಸೂಚಿಸುತ್ತದೆ.
ಫಾಫ್ ಡು ಪ್ಲೆಸಿಸ್‌ಗೆ ನಾಯಕತ್ವವನ್ನು ಮೀರಿದ ಪರಿಷ್ಕರಣೆ
ಯಾವುದೇ ಕ್ರಿಕೆಟ್ ತಂಡಕ್ಕೆ ನಾಯಕತ್ವವು ನಿರ್ಣಾಯಕ ಅಂಶವಾಗಿದ್ದರೂ, ಆರ್‌ಸಿಬಿಗೆ ಹೆಚ್ಚು ಸಮಗ್ರ ವಿಧಾನದ ಅಗತ್ಯವಿದೆ. ಕ್ಯಾಮರೂನ್ ಗ್ರೀನ್ ದುಬಾರಿ ಆಟಗಾರನಾದರೂ ನಿರೀಕ್ಷಿತ ಪ್ರದರ್ಶನವನ್ನು ನೀಡಲಿಲ್ಲ ಮತ್ತು ಅವರ ಬೌಲಿಂಗ್ ದಾಳಿಯು ಕಳವಳಕಾರಿಯಾಗಿದೆ.
ಐಪಿಎಲ್ 2025ಕ್ಕಿಂತ ಮೊದಲು ಆರ್‌ಸಿಬಿ ನಿಲುವೇನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗಮನಾರ್ಹ ಆಫ್-ಸೀಸನ್ ಎದುರಿಸುತ್ತಿದೆ. ನಾಯಕತ್ವದ ಸಮಸ್ಯೆ ಮಾತ್ರವಲ್ಲದೆ ಒಟ್ಟಾರೆ ತಂಡದ ಸಂಯೋಜನೆಯನ್ನು, ವಿಶೇಷವಾಗಿ ಅವರ ಬೌಲಿಂಗ್ ವಿಭಾಗವನ್ನು ಸಹ ಪರಿಹರಿಸಬೇಕಾಗಿದೆ.
ಮುಂಬರುವ ಮೆಗಾ ಹರಾಜು ಆರ್‌ಸಿಬಿ ಫ್ರಾಂಚೈಸಿಗೆ ನಿರ್ಣಾಯಕ ಪರೀಕ್ಷೆಯಾಗಿದೆ. ಏಕೆಂದರೆ ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಪಡೆಯುವ ಸಾಮರ್ಥ್ಯವಿರುವ ತಂಡವನ್ನು ನಿರ್ಮಿಸಲು ಶ್ರಮಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications