IPL 2024: ಆರ್‌ಸಿಬಿ ಗೆಲುವಿನ ರೂವಾರಿಗೆ ತನ್ನ "POTM ಪ್ರಶಸ್ತಿ" ಅರ್ಪಿಸಿದ ನಾಯಕ ಫಾಪ್ ಡು ಪ್ಲೆಸಿಸ್
ಮೇ 19 ಭಾನುವಾರ, ಐಪಿಎಲ್ 2024ರ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.
ಸಿಎಸ್‌ಕೆ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆಯಿತು. ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್(54), ವಿರಾಟ್ ಕೊಹ್ಲಿ(47) ಮೊದಲ ವಿಕೆಟ್‌ಗೆ 78 ರನ್‌ಗಳ ಜೊತೆಯಾಟವಾಡಿದರು.

ನಂತರ ರಜತ್ ಪಾಟಿದಾರ್ ಹಾಗೂ ಕ್ಯಾಮರೋನ್ ಗ್ರೀನ್ ಮೂರನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟವಾಡುವ ಮೂಲಕ ಆರ್‌ಸಿಬಿಗೆ ನೆರವಾದರು. ರಜತ್ ಪಾಟೀದಾರ್ 41 ರನ್ ಸಿಡಿಸಿದರೆ, ಕ್ಯಾಮರೋನ್ ಗ್ರೀನ್ ಅಮೂಲ್ಯ 38 ರನ್ ಸಿಡಿಸಿದರು. ಹೀಗಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು.
ಆರ್‌ಸಿಬಿ ನೀಡಿದ 219 ರನ್‌ಗಳ ಗುರಿ ಬೆನ್ನಟ್ಟಿ ಸಿಎಸ್‌ಕೆ ಆರಂಭದಲ್ಲೇ ನಾಯಕ ಋತುರಾಜ್ ಗಾಯಕ್ವಾಡ್ ವಿಕೆಟ್ ಕಳದೆಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಆರ್‌ಸಿಬಿ ಬೌಲರ್ ಸಿಎಸ್‌ಕೆ ಬ್ಯಾಟರ್‌ಗಳು ರನ್ ಗಳಿಸದಂತೆ ನೋಡಿಕೊಂಡರು.
ಅಬ್ಬರ ಅರ್ಧಶತಕ ಬ್ಯಾಟಿಂಗ್ ಮಾಡಿದ ರಚಿನ್ ರವೀಂದ್ರ 37 ಎಸೆತಗಳಲ್ಲಿ 61 ರನ್, ರವೀಂದ್ರ ಜಡೇಜಾ 42 ಮತ್ತು ಅಜಿಂಕ್ಯ ರಹಾನೆ 33 ರನ್ ಗಳಿಸಿದರೂ ಸಿಎಸ್‌ಕೆ ತಂಡವನ್ನು ಗೆಲ್ಲಿಸಲು ವಿಫಲವಾದರು.

ಸಿಎಸ್‌ಕೆ ಎದುರು ಆರ್‌ಸಿಬಿ ಗೆದ್ದು ಪ್ಲೇ ಆಫ್ ತಲುಪುವ ದಾರಿ ಸುಲಭವಾಗಿರಲಿಲ್ಲ. ಆರಂಭದಲ್ಲಿ ಆಕ್ರಮಕಾರಿ ಬೌಲಿಂಗ್ ಮಾಡಿದ ಆರ್‌ಸಿಬಿ ಬೌಲರ್ಸ್ ಡೆತ್ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು.
ಹೀಗಾಗಿ ಚೆನ್ನೈಗೆ ಪ್ಲೇಆಫ್ ತಲುಪಲು ಕೊನೆಯ ಓವರ್‌ನಲ್ಲಿ 17 ರನ್‌ಗಳ ಅಗತ್ಯವಿತ್ತು. ಈ ವೇಳೆ ನಾಯಕ ಫಾಪ್ ಡು ಪ್ಲೆಸಿಸ್ ಅವರು ಕೊನೆಯ ಓವರ್ ಅನ್ನು ಯಶ್ ದಯಾಲ್ ಅವರಿಂದ ಮಾಡಿಸಲು ತೀರ್ಮಾನಿಸಿದರು.
ಅದರಂತೆ ಫಾಪ್ ನೀಡಿದ ಜವಾಬ್ದಾರಿ ಹೊತ್ತು ಬೌಲಿಂಗ್ ಮಾಡಿದ ಯಶ್ ದಯಾಳ್ಗೆ ಮೊದಲ ಎಸೆತದಲ್ಲೇ ಎಂ ಎಸ್ ಧೋನಿ ಸಿಕ್ಸರ್ ಹೊಡೆಯುವ ಮೂಲಕ ಆರ್‌ಸಿಬಿಗೆ ಶಾಕ್ ನೀಡಿದ್ದರು. ಈ ಸಿಕ್ಸರ್ ಹೋದ ನಂತರವೂ ಸಂಯಮ ಕಳೆದುಕೊಳ್ಳದ ದಯಾಳ್ ಎರಡನೇ ಎಸೆತದಲ್ಲಿ ಎಂಎಸ್ ಧೋನಿ ಅವರನ್ನು ಔಟ್ ಮಾಡಿದರು.
ಈ ಸಮಯದಲ್ಲಿ ಆರ್‌ಸಿಬಿ ಗೆಲುವಿಗೆ 4 ಎಸೆತಗಳಲ್ಲಿ ರವೀಂದ್ರ ಜಡೇಜಾ ಹಾಗು ಶಾರ್ದೂಲ್ ಠಾಕೂರ್ ರನ್ ಹೊಡೆಯದಂತೆ ಬೌಲಿಂಗ್ ಮಾಡಿದರು. ಇದರಿಂದ ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿತು.
ಯಶ್ ದಯಾಳ್ 4 ಓವರ್‌ಗಳಲ್ಲಿ 41 ರನ್‌ಗಳನ್ನು ನೀಡಿ ಡೆರಿಲ್ ಮಿಚೆಲ್ ಮತ್ತು ಎಂಎಸ್ ಧೋನಿ ಅವರ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದು ಅರ್‌ಸಿಬಿ ಗೆಲುವಿನ ರೂವಾರಿಯಾದರು.
ಮ್ಯಾನ್ ಆಫ್ ದಿ ಮ್ಯಾಚ್
ಪಂದ್ಯದ ಬಳಿಕ 58 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಆರ್‌ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಅವರಿಗೆ "ಮ್ಯಾನ್ ಆಫ್ ದಿ ಮ್ಯಾಚ್ (POTM)" ಪ್ರಶಸ್ತಿ ನೀಡಲಾಯಿತು. ಈ ವೇಳೆ ಮಾತನಾಡಿದ ಫಾಪ್ ಡು ಪ್ಲೆಸಿಸ್, ಎಂ ಎಸ್ ಧೋನಿ ಆಡುವುದನ್ನು ನೋಡಿ ಗೆಲುವು ಕಷ್ಟ ಎನ್ನಿಸಿತು. ಏಕೆಂದರೆ ಧೋನಿ ಹಲವು ಬಾರಿ ಪಂದ್ಯ ಗೆಲ್ಲಿಸಿದವರು.
ಅಂತಹ ಸಂದರ್ಭದಲ್ಲಿ ಯಶ್ ದಯಾಳ್ ಬೌಲಿಂಗ್ ಮಾಡಿರುವುದು ಅದ್ಭುತವಾಗಿತ್ತು. ಹೀಗಾಗಿ ನನ್ನ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಅನ್ನು ಯಶ್ ಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications