For Quick Alerts
ALLOW NOTIFICATIONS  
For Daily Alerts
 

IPL 2024: ಫೆ.22 ಟ್ರೇಡ್‌ ಮಾಡಲು ಕೊನೆಯ ದಿನ: ಕುತೂಹಲ ಹೆಚ್ಚಿಸಿದೆ ಫ್ರಾಂಚೈಸಿಗಳ ನಡೆ

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ಹರಾಜು ಪ್ರಕ್ರಿಯೆ 2023ರ ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆಯಿತು. ಒಟ್ಟು 72 ಆಟಗಾರರನ್ನು ಖರೀದಿಸಲು, ಎಲ್ಲಾ ಹತ್ತು ಫ್ರಾಂಚೈಸಿಗಳು ಬರೋಬ್ಬರಿ 230.45 ಕೋಟಿ ರೂಪಾಯಿ ಖರ್ಚು ಮಾಡಿದವು.

ಆದರೆ, 2024ರ ಐಪಿಎಲ್‌ಗಾಗಿ ಎಲ್ಲಾ ತಂಡಗಳು ತಮ್ಮ ಆಟದ ಸಂಯೋಜನೆನ್ನು ಅಂತಿಮಗೊಳಿಸಲು ಇನ್ನೂ ಸಮಯ ಬಂದಿಲ್ಲ. ಏಕೆಂದರೆ 2023ರ ಡಿಸೆಂಬರ್ 20ರಿಂದ ಟ್ರೇಡ್ ವಿಂಡೋ ಆರಂಭಗೊಂಡಿದ್ದು, 2024ರ ಫೆಬ್ರವರಿ 22ರಂದು ಕೊನೆಗೊಳ್ಳಲಿದೆ.

IPL 2024: Feb 22nd Deadline for Franchises to Trade Players: Whats Next for the Franchises?

ನಾಳೆಗೆ ಯಾಕೆ ಕೊನೆ

ಐಪಿಎಲ್‌ನ ನಿಯಮಗಳ ಪ್ರಕಾರ, ಒಂದು ಋತುವಿನ ಅಂತ್ಯದ ನಂತರ, ಟ್ರೇಡ್ ವಿಂಡೋ ಮುಚ್ಚಿರುತ್ತದೆ ಮತ್ತು ಹರಾಜು ದಿನಾಂಕದ ಒಂದು ವಾರದ ಮೊದಲು ತೆರೆದಿರುತ್ತದೆ. ಇದು ಹರಾಜಿನ ನಂತರ ಮತ್ತೆ ಟ್ರೇಡ್ ವಿಂಡೋ ತೆರೆಯುತ್ತದೆ ಮತ್ತು ಮುಂದಿನ ಋತುವಿನ ಆರಂಭಕ್ಕೂ ಒಂದು ತಿಂಗಳ ಮೊದಲು ಕಾರ್ಯನಿರ್ವಹಿಸುತ್ತದೆ.

ಡಿಸೆಂಬರ್ 19ರ ಹರಾಜಿನ ನಂತರ, ಟ್ರೇಡ್ ವಿಂಡೋ ಓಪನ್ ಆಗಿದ್ದು, 2024ರ ಸೀಸನ್ ಪ್ರಾರಂಭವಾಗುವ ಒಂದು ತಿಂಗಳ ಮೊದಲು ವ್ಯಾಪಾರದ ವಿಂಡೋ ಮತ್ತೆ ತೆರೆದಿರುತ್ತದೆ.

ಗಮನಾರ್ಹವಾಗಿ, 2024ರ ಐಪಿಎಲ್‌ನ 17ನೇ ಆವೃತ್ತಿಯು ಮಾರ್ಚ್ 22ರಿಂದ ಆರಂಭಗೊಳ್ಳುವ ನಿರೀಕ್ಷೆ ಇದ್ದು, ಹೀಗಾಗಿ ಫೆಬ್ರವರಿ 22ರಂದು ಐಪಿಎಲ್‌ನ ಟ್ರೇಡ್ ವಿಂಡೋ ಕೊನೆಗೊಳ್ಳಲಿದೆ.

IPL 2024: Feb 22nd Deadline for Franchises to Trade Players: Whats Next for the Franchises?

ಟ್ರೇಡಿಂಗ್ ಯಾಕೆ?

ಐಪಿಎಲ್ ಫ್ರಾಂಚೈಸಿಗಳು ತಮ್ಮ ತಂಡದಲ್ಲಿರುವ ಆಟಗಾರರನ್ನು ಬೇರೊಂದು ತಂಡದೊಂದಿಗೆ ವ್ಯಾಪಾರ ಬಯಸಿದಲ್ಲಿ ಅಥವಾ ಆಟಗಾರನು ತನ್ನಿಷ್ಟದ ತಂಡದ ಭಾಗವಾಗಲು ಬಯಸಿದಲ್ಲಿ ಪೂರ್ಣ ಹಣಕಾಸಿನ ಮೂಲಕ, ಇಲ್ಲವಾದರೆ ಆಟಗಾರರ ನಡುವೆ ವ್ಯಾಪಾರ ಮಾಡಿಕೊಳ್ಳಬಹುದು.

ಟ್ರೇಡಿಂಗ್ ವಿಂಡೋ ತಂಡಗಳು ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಎಲ್ಲಾ ನಗದು ಒಪ್ಪಂದದಲ್ಲಿ ಆಟಗಾರನನ್ನು ಪಡೆದುಕೊಳ್ಳಲು ಅನುಮತಿಸುತ್ತದೆ. ಐಪಿಎಲ್ ಆಡಳಿತ ಮಂಡಳಿಯು ವ್ಯಾಪಾರಕ್ಕೆ ಅಂತಿಮ ಅನುಮೋದನೆಯನ್ನು ನೀಡುವ ಹಕ್ಕನ್ನು ಕಾಯ್ದಿರಿಸುತ್ತದೆ.

ಯಾರನ್ನು ಟ್ರೇಡ್ ಮಾಡಬಹುದು

ಐಪಿಎಲ್ ಫ್ರಾಂಚೈಸಿಗಳು ಬೇರೊಂದು ತಂಡದಿಂದ ಬೌಲರ್‌, ಬೌಲರ್‌ನೊಂದಿಗೆ ಮತ್ತು ಬ್ಯಾಟರ್, ಬ್ಯಾಟರ್‌ನೊಂದಿಗೆ ಪರಸ್ಪರ ವ್ಯಾಪಾರ ಮಾಡಿಕೊಳ್ಳುವ ಅವಕಾಶ ಹೊಂದಿವೆ. ಉಭಯ ಫ್ರಾಂಚೈಸಿಗಳು ಯಾವುದೇ ಮೊತ್ತದ ಒಪ್ಪಂದದ ಮೂಲಕ ಆಟಗಾರರನ್ನು ಪರಸ್ಪರ ವ್ಯಾಪಾರ ಮಾಡಿಕೊಳ್ಳಬಹುದು.

IPL 2024: Feb 22nd Deadline for Franchises to Trade Players: Whats Next for the Franchises?

ಇತ್ತೀಚಿಗೆ ಭಾರೀ ಸುದ್ದಿ ಮಾಡಿದ ಟ್ರೇಡ್‌ಗಳು

2024ರ ಐಪಿಎಲ್‌ಗಾಗಿ ನಡೆದ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಗುಜರಾತ್ ಟೈಟನ್ಸ್‌ನಿಂದ ಹಾರ್ದಿಕ್ ಪಾಂಡ್ಯರನ್ನು ಭಾರೀ ಮೊತ್ತಕ್ಕೆ ವ್ಯಾಪಾರ ಮಾಡಿಕೊಂಡಿತು. ನಂತರ ಪಾಂಡ್ಯರನ್ನು ತನ್ನ ಹೊಸ ನಾಯಕ ಎಂದು ಘೋಷಿಸಿತು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು ಕ್ಯಾಮೆರಾನ್ ಗ್ರೀನ್ ಅವರನ್ನು 17.50 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್‌ನಿಂದ ವ್ಯಾಪಾರ ಮಾಡಿಕೊಂಡಿತು.

ಲೋಕಸಭೆ ಚುನಾವಣೆಯ ಕಾರಣ, 2024ರ ಐಪಿಎಲ್ ಆವೃತ್ತಿ ಮಾರ್ಚ್ 22ರಂದು ಪ್ರಾರಂಭವಾಗಲಿದ್ದು, ಎರಡು ಕಂತುಗಳಲ್ಲಿ ಪಂದ್ಯಾವಳಿ ನಡೆಯಲಿದೆ ಎಂಬ ಸುಳಿವನ್ನು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಬಿಟ್ಟುಕೊಟ್ಟಿದ್ದಾರೆ.

Story first published: Wednesday, February 21, 2024, 13:52 [IST]
Other articles published on Feb 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+