For Quick Alerts
ALLOW NOTIFICATIONS  
For Daily Alerts
 

IPL 2024: ಮುಂಬೈ ಸತತ ಸೋಲಿಗೆ ಹಾರ್ದಿಕ್‌ ಪಾಂಡ್ಯ ಕಾರಣನಲ್ಲ; ಮಾಜಿ ಕ್ರಿಕೆಟಿಗ ಹೇಳಿದ್ದು ನಿಜಾನಾ?

ಮೇ 21 ಮಂಗಳವಾರ, 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಬದಲಾವಣೆ ಸಖತ್‌ ಸುದ್ದಿಯಾಗಿತ್ತು.

ಇದೀಗಾ ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್‌ (ಎಂಐ) ಈ ಋತುವಿನಲ್ಲಿ ಕಳಪೆ ಪ್ರದರ್ಶನದಿಂದಾಗಿ ಟೂರ್ನಿನಿಂದ ಹೊರ ಬಿದ್ದಿದರೂ ತಂಡದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಿಂತಿಲ್ಲ.

IPL 2024 Former cricketer has given reason for Mumbai Indians defeat

ಐಪಿಎಲ್‌ 2024ರಲ್ಲಿ ಮುಂಬೈ ಈ ಪರಿಸ್ಥಿತಿ ತಲುಪಲು ನೇರವಾಗಿ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅವರನ್ನು ಹೊಣೆಗಾರಿಕೆ ಮಾಡಲಾಗುತ್ತಿದೆ. ಲೀಗ್‌ ಹಂತದಲ್ಲಿ ಮುಂಬೈ ಆಡಿದ 14 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಮಾತ್ರ ಗೆದ್ದು, 10 ರಲ್ಲಿ ಸೋಲು ಕಂಡಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ 10ನೇ ಸ್ಥಾನದಲ್ಲೇ ಮುಂಬೈ ಉಳಿದಿದೆ.

ಮುಂಬೈ ಟೂರ್ನಿಯಿಂದ ಹೊರ ಬೀಳಲು ನಾಯಕ ಹಾರ್ದಿಕ್‌ ಪಾಂಡ್ಯ ಅವರು ಕಾರಣನಲ್ಲ ಎಂದು ಟೀಮ್‌ ಇಂಡಿಯಾ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಹೇಳಿದ್ದಾರೆ. ಜೊತೆಗೆ ಮುಂಬೈ ಸತತ ಸೋಲಿಗೆ ಸರಿಯಾದ ಕಾರಣ ಕೊಟ್ಟಿದ್ದಾರೆ.

ಮೊದಲು ನಾಯಕನಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಫ್ರಾಂಚೈಸಿಗೆ ಮರಳಿ ಕರೆತರುವ ಮುಂಬೈ ಇಂಡಿಯನ್ಸ್ (ಎಂಐ) ನಿರ್ಧಾರವು ಹಿನ್ನಡೆಯಾಯಿತು. ಬಳಿಕ ಪಂದ್ಯಗಳನ್ನು ತಂಡದಲ್ಲಿ ಒಗ್ಗಟ್ಟಾಗಿ ಆಡಲಿಲ್ಲ. ಒಂದು ವರ್ಷದ ನಂತರ ಫ್ರಾಂಚೈಸಿ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದಿತ್ತು. ಹೀಗಾಗಿ ಇದರಲ್ಲಿ ಹಾರ್ದಿಕ್‌ ತಪ್ಪಿಲ್ಲ ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.

ಮುಂಬೈ ದೊಡ್ಡ ತಂಡವನ್ನು ಹೊಂದಿದೆ. ನಾನು ಅದಕ್ಕಾಗಿ ಆಡಿದ್ದೇನೆ. ನಿರ್ವಹಣೆ ಅದ್ಭುತವಾಗಿದ್ದು, ತಂಡವನ್ನು ಚೆನ್ನಾಗಿ ನಡೆಸುತ್ತದೆ. ಆದರೆ ನಾಯಕತ್ವ ಬದಲಾವಣೆಯ ನಿರ್ಧಾರವು ಉಲ್ಟಾ ಹೊಡೆದಿದೆ.

ಫ್ರಾಂಚೈಸಿಯಿಂದ ಬಹುಶಃ ಭವಿಷ್ಯವನ್ನು ಹುಡುಕುವ ಆಲೋಚನೆ ಇರಬಹುದು. ಇದು ತಂಡಕ್ಕೆ ಸರಿಹೊಂದುವುದಿಲ್ಲ ಎಂದು ತೋರುತ್ತದೆ. ತಂಡದಲ್ಲಿ ಆಟಗಾರರು ಒಗ್ಗಟ್ಟಾಗಿ ಕಾಣಲಿಲ್ಲವಾದ್ದರಿಂದ, ಅಂತಹ ಒಂದು ದೊಡ್ಡ ತಂಡವು ಅಂತಹ ಕಳಪೆ ಫಲಿತಾಂಶಗಳನ್ನು ಎದುರಿಸುವುದು ನನಗೆ ನೋವುಂಟುಮಾಡುತ್ತದೆ ಎಂದು ಹರ್ಭಜನ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಪ್ರದರ್ಶನ

ಈ ಋತುವಿನಲ್ಲಿ ಹಾರ್ದಿಕ್‌ ಪಾಂಡ್ಯ ಒಟ್ಟು 14 ಪಂದ್ಯಗಳಿಂದ 143.04 ಸ್ಟ್ರೈಕ್ ರೇಟ್‌ನೊಂದಿಗೆ 18.00 ಸರಾಸರಿಯಲ್ಲಿ 216 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಪಾಂಡ್ಯ ಅವರ ಬ್ಯಾಟ್‌ನಿಂದ ಒಂದು ಅರ್ಧಶತಕ ಬಂದಿಲ್ಲ.

ಇನ್ನು ಬೌಲಿಂಗ್‌ ಪಾಂಡ್ಯ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. 35.18ರ ಕಳಪೆ ಸರಾಸರಿ ಮತ್ತು 10.75 ರ ಎಕಾನಮಿ ರೇಟ್‌ನಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ.

ಹಾರ್ದಿಕ್‌ ಪಾಂಡ್ಯ ಫಾರ್ಮ್‌ನಲ್ಲಿ ಇಲ್ಲದಿದ್ದರೂ, ಜೂನ್ 1 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ಆರಂಭವಾಗುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಪರ ವಿಭಿನ್ನ ಆಟಗಾರನಾಗಿ ಹೊರಹೊಮ್ಮುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.

ಟೀಮ್‌ ಇಂಡಿಯಾ ಅಭಿಯಾನ

ಭಾರತವು ಜೂನ್ 5 ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಟಿ20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಜೂನ್ 9 ರಂದು ಅದೇ ಸ್ಟೇಡಿಯಂನಲ್ಲಿ ಪಾಕಿಸ್ತಾನದ ವಿರುದ್ಧ ಹೈ

Story first published: Tuesday, May 21, 2024, 17:00 [IST]
Other articles published on May 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+