IPL 2024: ಭಾರತದ ಈ ಮಾಜಿ ಸ್ಟಾರ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ; ವರದಿ
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿಗೆ ಮುಂಚಿತವಾಗಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡ ಇದೀಗ ಹೊಸ ಮುಖ್ಯ ಕೋಚ್‌ನ ಹುಡುಕಾಟದಲ್ಲಿದೆ ಎಂದು ವರದಿಯಾಗಿದೆ.
ಐಪಿಎಲ್ 2023ರ ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ವೆಸ್ಟ್ ಇಂಡೀಸ್ ಮಾಜಿ ನಾಯಕ ಬ್ರಿಯಾನ್ ಲಾರಾ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತ್ತು.
2023ರ ಐಪಿಎಲ್ ಮಿನಿ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಒಟ್ಟುಗೂಡಿಸಿದ್ದರೂ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಬ್ರಿಯಾನ್ ಲಾರಾ ಮಾರ್ಗದರ್ಶನದಲ್ಲಿ ನಿರೀಕ್ಷೆಗೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಲು ವಿಫಲವಾಯಿತು.

ಆಡಿದ 14 ಪಂದ್ಯಗಳಿಂದ ಕೇವಲ ನಾಲ್ಕು ಗೆಲುವುಗಳೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು ಮತ್ತು ಪ್ಲೇಆಫ್ ತಪ್ಪಿಸಿಕೊಂಡರು.
""ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸ್ ಮತ್ತು ಬ್ರಿಯಾನ್ ಲಾರಾ ಈ ಕುರಿತು ಅಧಿಕೃತವಾಗಿ ತಿಳಿಸದಿದ್ದರೂ, ಕ್ರಿಕೆಟ್ ಲೆಜೆಂಡ್ ತನ್ನ ಕೋಚಿಂಗ್ ಶೈಲಿಯ ಬಗ್ಗೆ ಫ್ರಾಂಚೈಸಿಯ ಅತೃಪ್ತಿಯಿಂದಾಗಿ ಹೈದರಾಬಾದ್ ತಂಡದಿಂದ ಹೊರಗುಳಿಯಬಹುದು,'' ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
ಐಪಿಎಲ್ 2024ರ ಆವೃತ್ತಿಗೆ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇದೀಗ ತನ್ನ ಮಾಜಿ ಆಟಗಾರರೊಬ್ಬರನ್ನು ಮುಖ್ಯ ಕೋಚ್ ಆಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

2022ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಈಗಾಗಲೇ ತಮ್ಮ ಮಾಜಿ ಆಟಗಾರ ಡೇಲ್ ಸ್ಟೇನ್ ಅವರನ್ನು ವೇಗದ ಬೌಲಿಂಗ್ ಕೋಚ್ ಆಗಿ ನೇಮಿಸಿತ್ತು. ಹೀಗಾಗಿ, ಮುಂಬರುವ ಐಪಿಎಲ್ ಋತುವಿನಲ್ಲಿ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲು ತನ್ನ ಮತ್ತೊಬ್ಬ ಮಾಜಿ ಆಟಗಾರನನ್ನು ಪರಿಗಣಿಸುತ್ತಿರುವುದು ಅಚ್ಚರಿಯಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಮುಖ್ಯ ಕೋಚ್ ಆಗಿ ಭಾರತ ತಂಡದ ಮಾಜಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರಂತಹ ಮಾಜಿ ವಿಶ್ವ ಚಾಂಪಿಯನ್ ಆಟಗಾರನನ್ನು ನೇಮಿಸುವ ಆಲೋಚನೆಯನ್ನು ಹೊರಹಾಕಿದೆ ಎಂದು ವರದಿ ಹೇಳಿದೆ.
ಯುವರಾಜ್ ಸಿಂಗ್ ಸನ್‌ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಯಶಸ್ವಿ ಪ್ರದರ್ಶನ ಹೊಂದಿದ್ದಾರೆ. 2016ರಲ್ಲಿ ಆರ್‌ಸಿಬಿ ಸೋಲಿಸಿ ಅವರ ಮೊದಲ ಐಪಿಎಲ್ ಟ್ರೋಫಿಯನ್ನು ಗೆದ್ದರು.
ಮಾಜಿ ಅಲ್‌ರೌಂಡರ್ ಯುವರಾಜ್ ಸಿಂಗ್ 2019ರಲ್ಲಿ ಐಪಿಎಲ್‌ನಿಂದ ನಿವೃತ್ತರಾದ ನಂತರ, ಅವರು ಅಬುಧಾಬಿ ಟಿ10 ಲೀಗ್‌ನಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡಕ್ಕೆ ಮಾರ್ಗದರ್ಶನ ನೀಡುವ ಮೂಲಕ ಆಟದಲ್ಲಿ ತೊಡಗಿಸಿಕೊಂಡಿದ್ದಾರೆ.
ನ್ಯೂಯಾರ್ಕ್ ಸ್ಟ್ರೈಕರ್ಸ್ ತಮ್ಮ ಚೊಚ್ಚಲ ಋತುವಿನಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದರಿಂದ ಅತ್ಯುತ್ತಮ ಫಲಿತಾಂಶಗಳು ಬಂದವು. ಯುವರಾಜ್ ಸಿಂಗ್ ಅವರ ಅನುಭವ ಮತ್ತು ಸಾಧನೆಗಳನ್ನು ಗಮನಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಂಭಾವ್ಯ ಮುಖ್ಯ ಕೋಚ್ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications