Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್ ಬಗ್ಗೆ ಭಾರತದ ಮಾಜಿ ಆಟಗಾರರ ಅಭಿಪ್ರಾಯ

ಭಾನುವಾರ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಐಪಿಎಲ್‌ 2024ರ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್‌) ಮತ್ತು ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯ ಮುಗಿದ ಬಳಿಕವೂ ಚರ್ಚೆಯಾಗುತ್ತಿದೆ. ಈ ಮಹಾ ಕಾಳಗದಲ್ಲಿ ಕೆಕೆಆರ್‌ ವಿರುದ್ಧ ಆರ್‌ಸಿಬಿ ಕೇವಲ ಒಂದು ರನ್‌ಗಳಿಂದ ಸೋತಿತ್ತು.

ಕೆಕೆಆರ್‌ ನೀಡಿದ 223 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಲು ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ ಮತ್ತು ನಾಯಕ ಫಾಪ್​ ಡು ಪ್ಲೆಸಿಸ್ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದರು. ಆದರೇ ದುರದೃಷ್ಟಕರ ವಿರಾಟ್‌ ಕೊಹ್ಲಿ ಅವರಿಗೆ ಫುಲ್‌ ಟಾಸ್‌ ಬಾಲ್‌ಗೆ ಔಟ್‌ ನೀಡಿದ್ದು, ಸಾಕಷ್ಡು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

IPL 2024 Former Indian Cricketers opinion on Virat Kohli s controversial out

ಮೂರನೇ ಓವರ್‌ ಮಾಡಲು ಬಂದ ಯುವ ಬೌಲರ್‌ ಹರ್ಷಿತ್‌ ರಾಣಾ ಬ್ಯಾಟಿಂಗ್‌ ಮಾಡುತ್ತಿದ್ದ ವಿರಾಟ್‌ ಕೊಹ್ಲಿಗೆ ಸ್ಲೋವರ್‌ ಫುಲ್‌ ಟಾಸ್‌ ಎಸೆದರು. ನೇರವಾಗಿ ಬಂದ ಎಸೆತದಿಂದ ಗಾಬರಿಯಾದ ವಿರಾಟ್‌ ಕೊಹ್ಲಿ ತಡೆಯಲು ಯತ್ನಿಸಿದರು. ಆದರೆ ಹರ್ಷಿತ್‌ ರಾಣಾ ಕ್ಯಾಚ್‌ ಹಿಡಿಯುವಲ್ಲಿ ಯಶಸ್ವಿಯಾದರು. ತ‍ಕ್ಷಣ ವಿರಾಟ್‌ ಕೊಹ್ಲಿ ಇದು ಔಟ್‌ ಅಲ್ಲ, ನೋಬಾಲ್‌ ಎಂದು ಅಂಪೈರ್‌ ಕಡೆ ಮುಖ ಮಾಡಿ ಕೇಳಿದರು.

ಆದರೆ ಥರ್ಡ್ ಅಂಪೈರ್‌ ಇದು ನೋಬಾಲ್‌ ಅಲ್ಲ. ವಿರಾಟ್‌ ಕೊಹ್ಲಿ ಸೊಂಟದ ಏತ್ತರಕ್ಕಿಂತ ಚೆಂಡು ಕೆಳಗಿದೆ. ಹೀಗಾಗಿ ಇದು ಔಟ್‌ ಎಂದು ಅಂತಿಮ ನಿರ್ಧಾರ ನೀಡಿದರು. ಇದರಿಂದ ಮೈದಾನದಲ್ಲೆ ರೊಚ್ಚಿಗೆದ್ದ ಕೊಹ್ಲಿ ಅಂಪೈರ್‌ ಜೊತೆ ವಾಗ್ವಾದ ನಡೆಸಿ ಪ್ರತ್ಯೇಕ್ಷವಾಗಿಯೆ ಅಸಮಾಧಾನ ಹೊರಹಾಕಿದ್ದರು. ಬಳಿಕ ಪಂದ್ಯ 50% ರಷ್ಟು ದಂಡವನ್ನು ಕೂಡ ಕೊಹ್ಲಿಗೆ ವಿಧಿಸಲಾಗಿತ್ತು.

ಈ ಎಲ್ಲ ಬೆಳವಣಿಗೆ ನಂತರ ಕೊಹ್ಲಿ ಔಟ್‌ ಆದ ಬಗ್ಗೆ ಸಾಕಷ್ಟು ಕ್ರಿಕೆಟ್‌ ದಿಗ್ಗಜರು ವಿಮರ್ಶೆ ಮಾಡುತ್ತಿದ್ದು, ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಭಾರತ ತಂಡದ ಮಾಜಿ ಆಟಗಾರರಾದ ನವಜೋತ್‌ ಸಿಂಗ್‌ ಸಿದ್ದು ಮತ್ತು ಮೊಹಮ್ಮದ್‌ ಕೈಫ್ ಅವರು ವಿರಾಟ್‌ ಕೊಹ್ಲಿ ಪರವಾಗಿ ಬ್ಯಾಟ್‌ ಬೀಸಿದ್ದಾರೆ. ಆದರೆ ಇರ್ಪಾನ್‌ ಪಠಾಣ್‌ ಹಾಗು ಆಕಾಶ್‌ ಚೋಫ್ರಾ ಅವರು ವಿರಾಟ್‌ ಕೊಹ್ಲಿ ಔಟ್‌ ಕಾನೂನು ಬದ್ದವಾಗಿದೆ ಎಂದು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಕುರಿತು ಥರ್ಡ್ ಅಂಪೈರ್‌ ನಿರ್ಧಾರ ವಿರುದ್ಧ ನವಜೋತ್‌ ಸಿದ್ದು ಅಸಮಾಧಾನ ಹೊರಹಾಕಿದ್ದು, ನಾನು ನನ್ನ ಎದೆ ತಟ್ಟಿ ಹೇಳುತ್ತೇನೆ. ಕೊಹ್ಲಿ ನಾಟೌಟ್‌. ಈ ರೀತಿ ಘಟನೆ ನಡೆದಂತೆ ನಿಯಮಗಳನ್ನು ಬದಲಾಯಿಸಬೇಕಾಗಿದೆ. ಅಂಪೈರ್‌ನ ಒಂದೇ ಒಂದು ತಪ್ಪು ನಿರ್ಧಾರವು ಆಟದ ಬಣ್ಣವನ್ನು ಹಾಳು ಮಾಡಿತ್ತು ಎಂದು ಹೇಳಿದ್ದಾರೆ.

ಇನ್ನೊಂದೆಡೆ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಸಹಾ ಈ ವಿವಾದದ ಬಗ್ಗೆ ಮಾತನಾಡಿದ್ದು, ವಿರಾಟ್‌ ಕೊಹ್ಲಿ ನಿಜವಾಗಿಯೂ ಔಟ್‌ ಆಗಿರಲಿಲ್ಲ. ಔಟ್‌ ನೀಡಿರುವ ನಿರ್ಧಾರ ತುಂಬ ಕೆಟ್ಟದಾಗಿತ್ತು. ಹರ್ಷಿತ್‌ ಕೈಯಿಂದ ಚೆಂಡು ಜಾರಿ ಬಿದ್ದಿದ್ದರಿಂದ ಇದು ಇದು ಬೀಮರ್‌ ಎಸೆತವಾಗಿದ್ದು, ಕೊಹ್ಲಿ ಬಳಿ ಕ್ಷಮೆ ಕೇಳಬೇಕಿತ್ತು ಎಂದು ತಿಳಿದ್ದಾರೆ.

ಕೊಹ್ಲಿ ಪರ ಸಾಕಷ್ಟು ಅಭಿಪ್ರಾಯ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಟೀಮ್‌ ಇಂಡಿಯಾದ ಮಾಜಿ ವೇಗಿ ಇರ್ಫಾನ್‌ ಪಠಾಣ್‌ ಅಂಪೈರ್‌ ನಿರ್ಧಾರ ಸರಿ ಇದೆ ಎಂದು ನುಡಿದ್ದಾರೆ. ನನ್ನ ಹಾಗು ಐಪಿಎಲ್‌ ನಿಯಮಗಳ ಪ್ರಕಾರ ಇದು ಕಾನೂನು ಬದ್ದ ಎಸೆತವಾಗಿದೆ. ಇದು ನಿಧಾನಗತಿಯ ಚೆಂಡಾಗಿದ್ದು, ಅಂಪೈರ್‌ ನಿರ್ಧಾರ ತಪ್ಪಾಗಿರಲಿಲ್ಲ. ಚೆಂಡು ಸೊಂಟದ ಕಳೆಗಡೆ ಹೋಗುತ್ತಿತ್ತು. ಅಲ್ಲದೆ ವಿರಾಟ್‌ ಕ್ರೀಸ್‌ ನಿಂದ ಹೊರಗೆ ನಿಂತಿದ್ದರು. ವೇಗವಾಗಿ ಬಾಲ್‌ ಬಂದಿದ್ದರೆ ಖಂಡಿತವಾಗಿಯೂ ನೋ ಬಾಲ್ ಆಗುತ್ತಿತ್ತು ಎಂದಿದ್ದಾರೆ.

ನೋ ಬಾಲ್‌ ಎಂದುಕೊಂಡಿದ್ದೆ ಆದರೇ ಕೊಹ್ಲಿ ಔಟ್‌ :

ಭಾರತ ಪ್ರಸಿದ್ದ ಕ್ರಿಕೆಟ್‌ ಕಾಮೆಂಟರ್‌ ಹಾಗು ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಅವರು ವಿರಾಟ್‌ ಕೊಹ್ಲಿ ನಿಯಮಗಳ ಪ್ರಕಾರ ಔಟ್‌ ಆಗಿದ್ದಾರೆ ಎಂದಿದ್ದಾರೆ. ಕಾಮೆಂಟರಿ ಮಾಡುವಾಗ ನಾವು ಮೊದಲು ನೋ ಬಾಲ್‌ ಎಂದು ಭಾವಿಸಿದ್ದೆವು. ಆದರೇ ರಿಪ್ಲೇ ನೋಡಿದಾಗ ವಿರಾಟ್‌ ಕೊಗ್ಲಿ ನಿಯಮಗಳ ಪ್ರಕಾರವೇ ಔಟ್‌ ಆಗಿದ್ದಾರೆ. ಕ್ರೀಸ್‌ ನಿಂದ ಹೊರಗೆ ನಿಂತುಇ ಚೆಂಡ ಅನ್ನು ಎದುರಿಸಿದರೆ ಇಂತಹ ಎಸತೆಗಳು ನೋ ಬಾಲ್‌ ಆಗುವುದಿಲ್ಲ ಎಂದು ಕ್ರಿಕೆಟ್‌ ನಿಯಮಗಳು ಹೇಳುತ್ತೇವೆ ಎಂದು ತಿಳಿಸಿದ್ದಾರೆ.

Story first published: Tuesday, April 23, 2024, 11:46 [IST]
Other articles published on Apr 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+