For Quick Alerts
ALLOW NOTIFICATIONS  
For Daily Alerts
 

IPL 2024: ಅನ್‌ಸೋಲ್ಡ್‌ ಆಟಗಾರನ ಆಟ ಕಂಡು ಬೆರಗಾದ ಫ್ರಾಂಚೈಸಿ: ಪೇಚಿಗೆ ಬಿದ್ದ ಆರ್‌ಸಿಬಿ

ಕಳೆದ ಡಿಸೆಂಬರ್‌ನಲ್ಲಿ ಐಪಿಎಲ್‌ ಮಿನಿ ಹರಾಜು ದುಬೈನಲ್ಲಿ ನಡೆದಿತ್ತು. ಆಗ ನ್ಯೂಜಿಲೆಂಡ್‌ ಈ ಪ್ಲೇಯರ್‌ ಹೆಸರು ಬಂದಾಗ ಐಪಿಎಲ್‌ ಫ್ರಾಂಚೈಸಿಗಳು ಈತನತ್ತ ಮುಖ ಸಹ ಮಾಡಲಿಲ್ಲ. ಆದರೆ, ಪಾಕಿಸ್ತಾನ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಅನ್‌ಸೋಲ್ಡ್‌ ಆಟಗಾರ ಆಡಿದ ಧಾಟಿಯನ್ನು ಕಂಡು ಬೆರಗಾಗಿದ್ದಂತೂ ಸುಳ್ಳು ಅಲ್ಲವೇ ಅಲ್ಲ.

ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ ಶತಕ ಬಾರಿಸುವುದು ಕಾಮನ್‌.. ಶತಕ ಬಾರಿಸುವ ವೇಳೆ ಅವನು ಬಾರಿಸಿದ ಬೌಂಡರಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ನ್ಯೂಜಿಲೆಂಡ್‌ ಈ ಓಪನರ್‌ ಕೇವಲ 5 ಬೌಂಡರಿ ಬಾರಿಸಿ, ಬರೋಬ್ಬರಿ 16 ಸಿಕ್ಸರ್ ಸಿಡಿಸಿ ಗಮನ ಸೆಳೆದಿದ್ದಾನೆ. ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 224 ರನ್‌ ಬಾರಿಸಿದರೆ, ತಂಡದ ಮೊತ್ತದ ಶೇಕಡಾ 61 ರಷ್ಟು ರನ್‌ಗಳನ್ನು ಈ ಬ್ಯಾಟರ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾನೆ.

IPL 2024: Franchise stunned by unsold players performance: setback for RCB

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ಫಿನ್ ಅಲೆನ್ ಎಂಬ ಬಿರುಗಾಳಿಗೆ ಎದುರಾಳಿ ತಂಡ ಮಕಾಡೆ ಮಲಗಿದೆ. 24 ವರ್ಷದ ಬ್ಯಾಟ್ಸ್‌ಮನ್ 62 ಎಸೆತಗಳಲ್ಲಿ 137 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಒಂದರ ಹಿಂದೆ ಒಂದರಂತೆ 16 ಸಿಕ್ಸರ್‌ಗಳನ್ನು ಬಾರಿಸಿದರು. ಅದೇ ವೇಳೆ 5 ಬೌಂಡರಿಗಳನ್ನೂ ಬಾರಿಸಿದರು.

ಈ ಇನ್ನಿಂಗ್ಸ್‌ನ್ನು ಟಿವಿಯಲ್ಲಿ ನೋಡುತ್ತಾ ಕುಳಿತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಕೈ ಕೈ ಹಿಚಿಕೊಳ್ಳುವಂತೆ ಬ್ಯಾಟ್ ಮಾಡಿದರು. ಐಪಿಎಲ್-2024 ಹರಾಜಿನ ಮೊದಲು ಆರ್‌ಸಿಬಿ ಈ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ನನ್ನು ರಿಲೀಸ್‌ ಮಾಡಿದೆ. ಅಲ್ಲದೆ ಇವರನ್ನು ಯಾವುದೇ ತಂಡ ಖರೀದಿಸುವ ಗೋಜಿಗೆ ಹೋಗಲಿಲ್ಲ.

ಪಾಕಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಫಿನ್ ಅಲೆನ್ 48 ಎಸೆತಗಳಲ್ಲಿ ದಾಖಲೆಯ ಶತಕ ಸಿಡಿಸಿದ್ದಾರೆ. ಪಾಕ್‌ ಶಾಹೀನ್ ಅಫ್ರಿದಿಯಿಂದ ಹಿಡಿದು ಮೊಹಮ್ಮದ್ ವಾಸಿಂ ಜೂನಿಯರ್ ವರೆಗಿನ ಪ್ರತಿ ಬೌಲರ್‌ಗಳನ್ನು ಅಲೆನ್ ದಂಡಿಸಿದ್ದಾರೆ. ಹ್ಯಾರಿಸ್ ರೌಫ್ ಈ ಪಂದ್ಯದಲ್ಲಿ ಪಾಕಿಸ್ತಾನದ ಅತ್ಯಂತ ದುಬಾರಿ ಬೌಲರ್.

IPL 2024: Franchise stunned by unsold players performance: setback for RCB

ಆರ್‌ಸಿಬಿ ರಿಲೀಸ್ ಪ್ಲೇಯರ್‌ ಫಿನ್ ಅಲೆನ್

ಐಪಿಎಲ್ 2024 ರ ಹರಾಜಿನ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಿನ್ ಅಲೆನ್ ಅನ್ನು ಬಿಡುಗಡೆ ಮಾಡಿದೆ. ಫಿನ್ ಅಲೆನ್ ಐಪಿಎಲ್-2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಫ್ರಾಂಚೈಸಿ ಅವರನ್ನು 80 ಲಕ್ಷ ರೂ.ಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ, ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಫಿನ್ ಅಲೆನ್ ಐಪಿಎಲ್-2024 ರ ಮೂಲ ಬೆಲೆಯನ್ನು ರೂ 75 ಲಕ್ಷ ಆಗಿತ್ತು. ಆದರೆ ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಆಸಕ್ತಿ ತೋರಿಸಲಿಲ್ಲ.

ವೇಗದ ಶತಕ

ಅಲೆನ್ ಅವರ ಶತಕವು T20 ಅಂತಾರಾಷ್ಟ್ರೀಯ ಮಾದರಿಯಲ್ಲಿ ನ್ಯೂಜಿಲೆಂಡ್ ಆಟಗಾರ ಗಳಿಸಿದ ಮೂರನೇ ವೇಗದ ಶತಕವಾಗಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಶತಕಗಳ ಪಟ್ಟಿಯಲ್ಲಿ ಗ್ಲೆನ್ ಫಿಲಿಪ್ಸ್ (46 ಎಸೆತ) ಮತ್ತು ಕಾಲಿನ್ ಮುನ್ರೊ (37 ಎಸೆತ) ಮಾತ್ರ ಕಿವೀಸ್ ಓಪನರ್ ಅಲೆನ್‌ಗಿಂತ ಮುಂದಿದ್ದಾರೆ. ಇದು ಅಲೆನ್ ಅವರ T20 ವೃತ್ತಿಜೀವನದಲ್ಲಿ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಪೂರೈಸಿದ್ದರು.

ಮೂರನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 224 ರನ್‌ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 179 ರನ್‌ ಸೇರಿಸಿ ಸೋಲು ಕಂಡಿತು. ಈ ಮೂಲಕ ನ್ಯೂಜಿಲೆಂಡ್ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಅನ್‌ ಸೋಲ್ಡ್ ಆಟಗಾರರು ಐಪಿಎಲ್ ಆಡುವುದು ಹೇಗೆ?

ಐಪಿಎಲ್‌ ಹರಾಜಿನಲ್ಲಿ ಅನ್‌ಸೋಲ್ಡ್‌ ಆದ ಆಟಗಾರರಿಗೂ ಐಪಿಎಲ್‌ ಆಡುವ ಅವಕಾಶ ಸಿಗಲೂ ಬಹುದು. ಅದುಹೇಗೆಂದರೆ, ತಂಡಗಳಲ್ಲಿ ಈಗಿರುವ ಆಟಗಾರರಲ್ಲಿ ಯಾರಿಗಾದರೂ ಗಾಯವಾಗಿ ಟೂರ್ನಿಯಿಂದ ಹೊರ ನಡೆದಲ್ಲಿ, ಹೊರಗೋದ ಆಟಗಾರನ ಬದಲಿಗೆ ಬೇರೆ ಆಟಗಾರನನ್ನು ಬದಲಿಸುವ ಅವಕಾಶ ಇರುತ್ತದೆ. ಆಗ ಮಾಲೀಕರು ಈ ಆಟಗಾರರತ್ತ ಮುಖ ಮಾಡಬಹುದು.

Story first published: Wednesday, January 17, 2024, 11:13 [IST]
Other articles published on Jan 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+