Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಬೌಲರ್ಸ್‌ಗೆ ಮಾರ್ಯದೆ ಇಲ್ವಾ?; ಫ್ರಾಂಚೈಸಿ ಟಿ20 ಲೀಗ್‌ಗಳಿಂದ ಕ್ರಿಕೆಟ್‌ ಹಾಳಾಯ್ತಾ?

18ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಹುಟ್ಟಿಕೊಂಡ ಕ್ರಿಕೆಟ್‌ ಇಂದು ವಿಶ್ವದಾದ್ಯಂತ ಹಬ್ಬಿಕೊಂಡಿದೆ. ಅತಿ ಹೆಚ್ಚು ಜನರು ಆಡುವ ಮತ್ತು ಇಷ್ಟಪಡುವ ಕೆಲವೇ ಆಟಗಳಲ್ಲಿ ಕ್ರಿಕೆಟ್‌ ಕೂಡ ಒಂದಾಗಿದೆ. ಅದರಲ್ಲೂ ಭಾರತದಲ್ಲಿ ಅಂದಾಜು ಶೇ.80ಕ್ಕೂ ಹೆಚ್ಚು ಜನರು ಕ್ರಿಕೆಟ್‌ ನೊಂದಿಗೆ ಬೆರತು ಹೋಗಿದ್ದಾರೆ.

ಮೊದಲು ಟೆಸ್ಟ್‌ ಕ್ರಿಕೆಟ್ ಐದು ದಿನಗಳ ಕಾಲ ನಡೆಯುತ್ತಿತ್ತು. ಒಂದು ಟೆಸ್ಟ್‌ ಪಂದ್ಯವನ್ನು ಗೆಲ್ಲಲು ಎರಡು ತಂಡಗಳು ಐದು ದಿನಗಳವರೆಗೂ ಹೋರಾಟ ನಡೆಸುತ್ತಿದ್ದವು. ಅಂದು ಬೌಲರ್ಸ್‌‌ ಮತ್ತು ಬ್ಯಾಟರ್‌ಗಳ ನಡುವೆ ಪ್ರಬಲ ಪೈಪೋಟಿ ಇತ್ತು. ಮನೆಮಂದಿಯಲ್ಲ ಟಿವಿ ಮುಂದೆ ಕೂತು ಕ್ರಿಕೆಟ್‌ ನೋಡಿ ಆನಂದಿಸುತ್ತಿದ್ದರು.

IPL 2024 Franchise T20 leagues spoil the game of cricket

ಆದರೆ ಇದೀಗಾ ಹೊಡಿಬಡಿ, ಧಾಮ್‌ಧೂಮ್‌ ಅನ್ನೋ ರಂಗಬಿರಂಗಿ ಟಿ20 ಆಟದ ಮಧ್ಯೆ ಐದು ದಿನದ ಟೆಸ್ಟ್‌ ಪಂದ್ಯದ ಬಗೆಗಿನ ಕುತೂಹಲ ಹಿಂದಿಗಿಂತ ಈಗ ಹೆಚ್ಚಾಗಿ ಕೇಳಿಬರುತ್ತಿದೆ. ಅಷ್ಟರ ಮಟ್ಟಿಗೆ ಫ್ರಾಂಚೈಸಿ ಟಿ20 ಲೀಗ್‌ಗಳು ಕ್ರಿಕೆಟ್ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳವಂತೆ ಮಾಡಿವೆ.

ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದು ಕರೆಸಿಕೊಳ್ಳುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌), ಆಸ್ಟ್ರೇಲಿಯಾದಲ್ಲಿ ನಡೆಯುವ ‌ಬಿಗ್‌ ಬ್ಯಾಷ್‌‌ ಲೀಗ್ (ಬಿಬಿಎಲ್‌), ದಕ್ಷಿಣ ಆಫ್ರಿಕಾದ ಎಸ್‌20 ಲೀಗ್‌ ಹೀಗೆ ಹಲವು ಪ್ರತಿಷ್ಠಿತ ಟಿ20 ಟೂರ್ನಿಗಳಿಂದ ಕ್ರಿಕೆಟ್‌ ತನ್ನ ಅದ್ಭುತವನ್ನು ಮರೆ ಮಾಚುತ್ತಿದೆ ಎಂದರೆ ತಪ್ಪಲಾಗಲಾರದು.

IPL 2024 Franchise T20 leagues spoil the game of cricket

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್‌ ಟೂರ್ನಿ ಹಲವು ಯುವಪ್ರತಿಭೆಗಳಿಗೆ ತನ್ನ ಸಾಮರ್ಥ್ಯ‌ವನ್ನು ತೋರಿಸಲು ಉತ್ತಮ ವೇದಿಕೆಯಾಗಿದೆ. ಜೊತೆಗೆ ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆಯಲು ಒಳ್ಳೆಯ ಮಾರ್ಗವಾಗಿದೆ. ಆದರೆ ಇಂತಹ ಟಿ20 ಲೀಗ್‌ಗಳಿಂದ ಟೆಸ್ಟ್‌ ಮತ್ತು ಏಕದಿನ ಮಾದರಿ ಕ್ರಿಕೆಟ್‌ಗೆ ಅಪತ್ತು ಎದುರಾಗಿದ್ದು, ಆಟಗಾರರು ತಮ್ಮ ನೈಜ ಕ್ರಿಕೆಟ್‌ ಕೌಶಲ್ಯವನ್ನು ಹಾಳು ಮಾಡಿಕೊಳುತ್ತಿದ್ದಾರೆ.

ಕಳೆದ 15 ವರ್ಷಗಳ ಹಿಂದೆ ಐಪಿಎಲ್‌ನಲ್ಲಿ 130 ರಿಂದ 140 ರನ್‌ ಟಾರ್ಗೆಟ್‌ ನೀಡಿದರೆ, ಎದುರಾಳಿ ತಂಡಕ್ಕೆ ಚೇಸಿಂಗ್‌ ಮಾಡುವುದು ಕಷ್ಟವಾಗಿತ್ತು. ಬಳಿಕ ಆ ಸ್ಕೋರ್‌ 180 ರಿಂದ 190 ರವರೆಗೆ ಬಂದಿತ್ತು. ಅದರಲ್ಲೂ 200 ರನ್‌ ಹೊಡೆದರೆ ಎರಡನೇ ಇನ್ನಿಂಗ್ಸ್‌ ಆರಂಭಿಸುವ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಆಗಿತ್ತು. ಆದರೆ ಈ ಬಾರಿ ಐಪಿಎಲ್ ಎಲ್ಲ ಲೆಕ್ಕಚಾರಗಳನ್ನು ಬದಲು ಮಾಡಿದೆ.

250 ರನ್‌ ಹೊಡೆದರು ಅದು ಬ್ಯಾಟ್‌ಮೆನ್ಸ್‌ಗೆ ಲೆಕ್ಕಕ್ಕೆ ಇಲ್ಲ. ಇನ್ನು 200 ರನ್‌ಗೆ ಮಾರ್ಯದೆಯೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಆಟ ನಮಗೆ ಖುಷಿ ಕೊಡಬಹುದು. ಆದರೆ ಈ ರೀತಿ ಬ್ಯಾಟಿಂಗ್‌ ಫ್ರೆಂಡ್ಲಿ ಪಿಚ್‌ಗಳು ಕ್ರಿಕೆಟ್‌ ಎಂಬ ಸುಂದರ ಆಟವನ್ನು ಸರ್ವನಾಶ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ. ಅಷ್ಟಕ್ಕೂ ಐಪಿಎಲ್‌ನಲ್ಲಿ ಬ್ಯಾಟರ್‌ಗಳ‌ ಅಬ್ಬರ ಜೋರಾಗಿದ್ದು, ಬೌಲರ್ಸ್‌ಗೆ ಮಾರ್ಯದೆ ಇಲ್ಲವಾ ಎಂಬ ಪ್ರಶ್ನೆ ಉದ್ಭವಾಗಿದೆ.

ಕ್ರಿಕೆಟ್‌ ಅಭಿಮಾನಿಗಳನ್ನು ಮೈದಾನಕ್ಕೆ ಕರೆತರುವ ಉದ್ದೇಶದಿಂದ ಇಂತಹ ಬ್ಯಾಟಿಂಗ್ ಸ್ನೇಹಿ‌ ಪಿಚ್‌ಗಳನ್ನು ಮಾಡಲಾಗುತ್ತಿದೆ. ಇದರಿಂದ ಫ್ರಾಂಚೈಸಿಗಳು ಹೆಚ್ಚು ಆದಾಯಗಳಿಸುತ್ತಿದ್ದಾರೆ. ಇತ್ತ ಅಭಿಮಾನಿಗಳಿಗೆ ಕೇವಲ ಮನರಂಜನೆ ಸಿಗುತ್ತಿದೆ. ಆದರೆ ಕ್ರಿಕೆಟ್ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ.

ಮುಂಬವರುವ ಯುವ ಆಟಗಾರರು ತಾನು ಫೇಮಸ್‌ ಬೌಲರ್‌ ಆಗಬೇಕೆಂಬ ಬಯಕೆ ಇಟ್ಟು ಕೊಂಡಿರುತ್ತಾನೆ.‌ ಆದರೆ ಇಂತಹ ಲೀಗ್‌ನಲ್ಲಿ ಬ್ಯಾಟರ್‌ಗಳು ಅಬ್ಬರಿಸುವುದನ್ನು ನೋಡಿದ ಆಟಗಾರ ಸಹಾ ಬ್ಯಾಟರ್‌ ಆಗಿ ಪರಿವರ್ತನೆ ಆಗುಬಹುದು. ಆಗ ರಾಷ್ಟ್ರೀಯ ತಂಡಗಳಲ್ಲಿ ಬೌಲರ್ಸ್ ಕೊರತೆ ಎದುರಾಗಬಹುದು. ಹೀಗಾಗಿ ಕ್ರಿಕೆಟ್‌ ಆಟವನ್ನು ಸಮತೋಲನದಲ್ಲಿ ತೆಗೆದುಮಕೊಂಡು ಹೋಗುವುದು ಮುಖ್ಯವಾಗಿದೆ. ‌

ಇದರ ಪ್ರಭಾವದಿಂದ ಟೆಸ್ಟ್‌ ಕ್ರಿಕೆಟ್‌ ಎಷ್ಟು ಪ್ರಸ್ತುತ ಅನ್ನೋ ಪ್ರಶ್ನೆ ಕೇಳಿ ಬರುತ್ತಿದೆ. ಈಗಲೂ ಬೌಲರ್‌ ಮತ್ತು ಬ್ಯಾಟ್ಸ್‌ಮೆನ್‌ ನಿಜ ಕೌಶಲ್ಯ ಕಾಣಬೇಕಿದರೇ ಟೆಸ್ಟ್‌ ಪಂದ್ಯವೇ ಬೆಸ್ಟ್‌ ಅಂತಾ ಸಾಕಷ್ಟು ವಿಶ್ವದರ್ಜೆಯ ಅನುಭವಿ ಆಟಗಾರರೇ ಹೇಳುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ದೀರ್ಘಾವಧಿ ಕ್ರಿಕೆಟ್‌ ತನ್ನ ಸ್ವರೂಪವನ್ನು ಕಳೆದುಕೊಳ್ಳದೆ ಇರುವಂತೆ ಕ್ರಿಕೆಟ್‌ ಬೋರ್ಡ್‌ಗಳು ಎಚ್ಚರಿಕೆ ವಹಿಸಬೇಕಾಗಿದೆ.

Story first published: Thursday, May 9, 2024, 13:52 [IST]
Other articles published on May 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+