For Quick Alerts
ALLOW NOTIFICATIONS  
For Daily Alerts
 

RCB ಮುಂದಿನ ಪಂದ್ಯಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಅಲಭ್ಯ!; ಗಾಯವೋ, ಕೈಬಿಡಲಾಗಿದೆಯೋ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಹೀಗಾಗಿ ಇದು ಅವರಿಗೆ ದುರಂತದ ಆವೃತ್ತಿಯಾಗಿದೆ.

ಐಪಿಎಲ್ 2024ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ ಆರು ಪಂದ್ಯಗಳಲ್ಲಿ ಮೂರು ಬಾರಿ ಡಕ್‌ಗೆ ಔಟಾಗಿದ್ದಾರೆ. ಇತ್ತೀಚಿಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

IPL 2024 Glenn Maxwell Likely To Unavailable for RCB Next match Against SRH Injured or Dropped

ಹೀಗಾಗಿ ಆರ್‌ಸಿಬಿ ತಂಡ ಇದೀಗ ಫಾರ್ಮ್‌ನಲ್ಲಿಲ್ಲದ ಆಸ್ಟ್ರೇಲಿಯಾ ಆಲ್‌ರೌಂಡರ್‌ನನ್ನು ಮುಂದಿನ ಪಂದ್ಯಕ್ಕಾಗಿ ತಮ್ಮ ಆಡುವ 11ರ ಬಳಗದಿಂದ ಕೈಬಿಡಲು ದೊಡ್ಡ ಕಾರಣವನ್ನು ಹೊಂದಿದೆ.

ಆಸ್ಟ್ರೇಲಿಯಾದ ಏಕದಿನ ವಿಶ್ವಕಪ್ ವಿಜೇತ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ 2024ರಲ್ಲಿ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 32 ರನ್ ಗಳಿಸಿದ್ದಾರೆ ಮತ್ತು 5.33ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವುದು ಅತ್ಯಂತ ಶೋಚನೀಯವಾಗಿದೆ. ಇದು ಈಗಾಗಲೇ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

IPL 2024 Glenn Maxwell Likely To Unavailable for RCB Next match Against SRH Injured or Dropped

ಸನ್ ರೈಸರ್ಸ್ ಹೈದರಾಬಾದ್ ಪಂದ್ಯವನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದುಕೊಳ್ಳುತ್ತಾರಾ?
ಬಹು ಮಾಧ್ಯಮ ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಬಲ ಹೆಬ್ಬೆರಳಿಗೆ ಗಾಯ ಮಾಡಿಕೊಂಡರು. ಆರ್‌ಸಿಬಿ ತಂಡವನ್ನು ಮುಂಬೈ ಇಂಡಿಯನ್ಸ್ ಇನ್ನೂ 7 ವಿಕೆಟ್‌ಗಳು ಮತ್ತು 27 ಎಸೆತಗಳು ಬಾಕಿ ಇರುವುಂತೆಯೇ ಹೀನಾಯವಾಗಿ ಸೋಲಿಸಿತು.

ಆರ್‌ಸಿಬಿ ತಂಡ ತನ್ನ ಮುಂದಿನ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕಣಕ್ಕಿಳಿಸುವುದಿಲ್ಲ ಮತ್ತು ಬದಲಿಗೆ ಅದೇ ಆಸ್ಟ್ರೇಲಿಯಾ ಆಟಗಾರ ಕ್ಯಾಮೆರಾನ್ ಗ್ರೀನ್ ಅವರನ್ನು ಮರಳಿ ತರುತ್ತದೆ ಎಂದು ವರದಿಯಾಗಿದೆ.

ಸೋಮವಾರ, ಏಪ್ರಿಲ್ 15ರಂದು ತವರಿನ ಅಂಗಳದಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ಇದು ಸಂಭಾವ್ಯ ಹಿನ್ನಡೆಗೆ ಕಾರಣವಾಗಲಿದೆ. ಆದರೂ, ಗ್ಲೆನ್ ಮ್ಯಾಕ್ಸ್‌ವೆಲ್‌ನ ಕಳಪೆ ಫಾರ್ಮ್ ಈಗಾಗಲೇ ಅವರನ್ನು ಆಡುವ 11ರ ಬಳಗದಿಂದ ಕೈಬಿಡಲು ಒತ್ತಾಯ ಕೇಳಿಬಂದಿದತ್ತು.

ಈ ಆವೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸ್ಕೋರ್‌ಗಳು 0, 3, 28, 0, 1, 0 ಆಗಿವೆ. ಗಮನಾರ್ಹವಾಗಿ, ಬೌಲಿಂಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಫೀಲ್ಡಿಂಗ್‌ನಲ್ಲಿ ಹೆಚ್ಚಿನ ಕೊಡುಗೆ ನೀಡಿಲ್ಲ.

ಆರ್‌ಸಿಬಿ ತಂಡದ ಕಳಪೆ ಅಭಿಯಾನ

ಗುರುವಾರ, ಮುಂಬೈ ವಿರುದ್ಧದ ಸೋಲು ಈ ಋತುವಿನಲ್ಲಿ ಆರ್‌ಸಿಬಿ ತಂಡದ ಐದನೇ ಸೋಲಾಗಿದೆ. ಐಪಿಎಲ್ 2024ರಲ್ಲಿ ಯಾವುದೇ ತಂಡದಿಂದ ಅತಿ ಹೆಚ್ಚು ಸೋಲು.

ಮಾರ್ಚ್ 25ರಂದು ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೊದಲ ತವರಿನ ಪಂದ್ಯದಲ್ಲಿ ಆರ್‌ಸಿಬಿ ತಂಡವು ಈ ಋತುವಿನ ಏಕೈಕ ಗೆಲುವು ಸಾಧಿಸಿತು ಮತ್ತು ನಂತರ ಯಾವುದೇ ಗೆಲುವು ಸಾಧಿಸಿಲ್ಲ.

ಆರ್‌ಸಿಬಿ ತಂಡದ ಮುಂದಿನ ಐದು ಪಂದ್ಯಗಳು

ಏಪ್ರಿಲ್ 15: ಆರ್‌ಸಿಬಿ vs ಎಸ್‌ಆರ್‌ಎಚ್

ಏಪ್ರಿಲ್ 21: ಕೆಕೆಆರ್ vs ಆರ್‌ಸಿಬಿ

ಏಪ್ರಿಲ್ 25: ಎಸ್‌ಆರ್‌ಎಚ್ vs ಆರ್‌ಸಿಬಿ

ಏಪ್ರಿಲ್ 28: ಜಿಟಿ vs ಆರ್‌ಸಿಬಿ

ಮೇ 4: ಆರ್‌ಸಿಬಿ vs ಜಿಟಿ

Story first published: Saturday, April 13, 2024, 14:40 [IST]
Other articles published on Apr 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+