IPL 2024: ತಮ್ಮದೆ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಸುವರ್ಣಾವಕಾಶ; ಏನ್ ಮಾಡ್ತಾರೆ ಕಿಂಗ್?
ಮೇ 20 ಸೋಮವಾರ, ಅಂತಿಮ ಘಟ್ಟ ತಲುಪಿರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆನೇಕ ದಾಖಲೆ ಸೃಷ್ಟಿಯಾಗಿದೆ. ಜೊತೆಗೆ ಹಲವು ದಾಖಲೆಗಳನ್ನು ಮುರಿಯಲಾಗಿದೆ.
ಐಪಿಎಲ್ 2024ರಲ್ಲಿ ಬ್ಯಾಟರ್‌ಗಳ ಅಬ್ಬರ ಜೋರಾಗಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಖದರ್ ತೋರಿಸುತ್ತಿದ್ದಾರೆ. ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ವಿರಾಟ್ ಕೊಹ್ಲಿ ಅತಿಹೆಚ್ಚು ರನ್ ಗಳಿಸಿದವರ ರೇಸ್‌ನಲ್ಲಿ ಮೊದಲಿಗರಾಗಿದ್ದು, ತಮ್ಮ ಬಳಿಯೇ ಆರೆಂಜ್ ಕ್ಯಾಪ್ ಹೊಂದಿದ್ದಾರೆ.

ಈವರೆಗೆ ಒಟ್ಟು 14 ಲೀಗ್ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 155.60ರ ಸ್ಟ್ರೈಕ್ ರೇಟ್‌ನಲ್ಲಿ 708 ರನ್ ಹೊಡೆದಿದ್ದಾರೆ. ಇದರಲ್ಲಿ 1 ಶತಕ ಹಾಗು 5 ಅರ್ಧಶತಕಗಳು ಕೂಡಿವೆ. ಅಲ್ಲದೆ ಅತಿಹೆಚ್ಚು ಸಿಕ್ಸರ್ ಬಾರಿಸಿರುವವರ ಪಟ್ಟಿಯಲ್ಲಿ ಕೊಹ್ಲಿ (37) ಎರಡನೇ ಸ್ಥಾನದಲ್ಲಿದ್ದಾರೆ.
ಇಂತಹ ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಐಪಿಎಲ್ ತಾವೇ ಮಾಡಿರುವ ಸಾರ್ವಕಾಲಿಕ ದಾಖಲೆಯನ್ನು ಮುರಿಯುವ ಸುವರ್ಣಾವಕಾಶ ಹೊಂದಿದ್ದಾರೆ. ಆ ದಾಖಲೆ ಯಾವುದೇ ಎಂದರೆ 2016ರ ಐಪಿಎಲ್‌ನಲ್ಲಿ ಕೊಹ್ಲಿ ಸೃಷ್ಟಿಸಿ ಅತ್ಯಧಿಕ ರನ್ ದಾಖಲೆಯನ್ನು ಮೀರಿಸಲು ವಿರಾಟ್ ಕೊಹ್ಲಿಗೆ ಅವಕಾಶವಿದೆ ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮ್ಯಾಥ್ಯೂ ಹೇಡನ್ ತಿಳಿಸಿದ್ದಾರೆ.
2016ರಲ್ಲಿ 16 ಪಂದ್ಯಗಳಿಂದ ವಿರಾಟ್ ಕೊಹ್ಲಿ ಒಟ್ಟು 7 ಅರ್ಧಶತಕ ಹಾಗೂ 4 ಶತಕ ಸೇರಿದಂತೆ 973 ರನ್ ಗಳಿಸಿದ್ದರು. ಪ್ರಸಕ್ತ ಋತುವಿನಲ್ಲಿ ಕೊಹ್ಲಿ 5 ಅರ್ಧ ಶತಕ ಹಾಗೂ 1 ಶತಕ ಸಿಡಿಸಿದ್ದಾರೆ. ಅವರು ತಮ್ಮ ಹಿಂದಿನ ಅತ್ಯುತ್ತಮ ಪ್ರದರ್ಶನಕ್ಕೆ ಇನ್ನೂ 265 ರನ್ ಹಿಂದಿದ್ದಾರೆ.
ಮುಂಬರುವ ರಾಜಸ್ಥಾನ ರಾಯಲ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಕೊಹ್ಲಿ ರನ್ ಗಳಿಸಿ ಆರ್‌ಸಿಬಿ ಗೆದ್ದು ಮುಂದೆ ಹೋದರೆ ಬಳಿಕ ಮತ್ತೊಂದು ಪಂದ್ಯವಾಡುವ ಅವಕಾಶ ಸಿಗಲಿದೆ. ಆ ಪಂದ್ಯದಲ್ಲೂ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರೆ ಆರ್‌ಸಿಬಿ ಫೈನಲ್ ತಲುತ್ತದೆ. ಈ ವೇಳೆ ಕೊಹ್ಲಿ ತಮ್ಮ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಮತ್ತೊಮ್ಮೆ ದಾಖಲೆ ಬರೆಯಬಹುದು.
ಮಂಗಳವಾರ (ಮೇ 21) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್‌ನ ಕ್ವಾಲಿಫೈಯರ್ 1 ಪಂದ್ಯದ ನಂತರ, ಆರ್‌ಸಿಬಿ ಬುಧವಾರ ಅದೇ ಮೈದಾನದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications