For Quick Alerts
ALLOW NOTIFICATIONS  
For Daily Alerts
 

IPL 2024: ಕೋಲ್ಕತ್ತಾಗೆ ಗುಡ್ ನ್ಯೂಸ್‌: ಶಾರ್ಜಾದಲ್ಲಿ ಅಬ್ಬರಿಸಿದ ಟಾಪ್‌ ಆರ್ಡರ್‌ ಬ್ಯಾಟರ್‌

ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್‌ 17ನೇ ಆವೃತ್ತಿ ಆರಂಭವಾಗಲಿದೆ. ಈ ಮೇಗಾ ಟೂರ್ನಿಗು ಮುನ್ನ ಸ್ಟಾರ್‌ ಪ್ಲೇಯರ್‌ಗಳು ಭರ್ಜರಿ ಫಾರ್ಮ್‌ಗೆ ಮರಳುತ್ತಿದ್ದಾರೆ. ಈ ಸುದ್ದಿ ನಿಜಕ್ಕೂ ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದೆ. ಕೆಕೆಆರ್‌ ತಂಡದ ಸ್ಟಾರ್ ಬ್ಯಾಟರ್‌ ಶಾರ್ಜಾದಲ್ಲಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ.

2012, 2014 ಬಳಿಕ ಕೋಲ್ಕತ್ತಾ ನೈಟ್‌ ರೈಡರ್ಸ್ ಚಾಂಪಿಯನ್‌ ಪಟ್ಟ ಏರಿಲ್ಲ. ಪ್ರಶಸ್ತಿ ಗೆಲುವಿನ ಬರವನ್ನು ನೀಗಿಸಲು ಅಫ್ಘಾನಿಸ್ತಾನ ಪ್ಲೇಯರ್‌ ಸಹ ಟೊಂಕ ಕಟ್ಟಿ ನಿಂತಿದ್ದಾರೆ. ಈ ಪ್ಲೇಯರ್‌ ಫಾರ್ಮ್‌ ನಿಜಕ್ಕೂ ಶ್ರೇಯಸ್‌ ಅಯ್ಯರ್‌ ಅವರ ತಂಡದ ಚಿಂತೆಯನ್ನು ದೂರ ಮಾಡಿರುವುದರಲ್ಲಿ ಯಾವುದೇ ಸಂದೇಹ ಇಲ್ಲವೇ ಇಲ್ಲ.

IPL 2024 Good news for Kolkata Top-order batsman in Sharjah

ಶಾರ್ಜಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ 35 ರನ್‌ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿತು. ಅಫ್ಘಾನಿಸ್ತಾನದ ಶಹಜಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನವು 50 ಓವರ್‌ಗಳಲ್ಲಿ ಐದು ವಿಕೆಟ್‌ಗೆ 310 ರನ್‌ಗಳನ್ನು ಹಾಕಿತು.

ಇದಕ್ಕೆ ಉತ್ತರವಾಗಿ ಐರ್ಲೆಂಡ್ ಸಂಪೂರ್ಣ ಓವರ್‌ಗಳನ್ನು ಆಡಿದ ನಂತರ ಕೇವಲ 275/8 ಸ್ಕೋರ್ ಮಾಡಲು ಸಾಧ್ಯವಾಯಿತು. ಗುರಿ ಬೆನ್ನಟ್ಟಿದ ಐರ್ಲೆಂಡ್ ಪರ ಹ್ಯಾರಿ ಟೆಕ್ಟರ್ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 138 ರನ್ ಗಳಿಸಿ ಶತಕದ ಹೋರಾಟ ವ್ಯರ್ಥವಾಯಿತು.

ಐರ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನವು ಬೋರ್ಡ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿತು. ಇದರಲ್ಲಿ ಆರಂಭಿಕರಾದ ಗುರ್ಬಾಜ್ ಮತ್ತು ಜದ್ರಾನ್ ಅಹ್ಮದ್ ಕೊಡುಗೆ ನೀಡಿದರು.

IPL 2024 Good news for Kolkata Top-order batsman in Sharjah

ರಹಮಾನುಲ್ಲಾ ಗುರ್ಬಾಜ್ 117 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 121 ರನ್ ಗಳಿಸಿದರು. ಇದಲ್ಲದೆ, ಇಬ್ರಾಹಿಂ ಝದ್ರಾನ್ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 60 ರನ್ ಗಳಿಸಿದರು. ಇವರಿಬ್ಬರೂ ಮೊದಲ ವಿಕೆಟ್‌ಗೆ 150 (186 ಎಸೆತ) ಜೊತೆಯಾಟ ನಡೆಸಿದರು. ರಹಮಾನುಲ್ಲಾ ಗುರ್ಬಾಜ್ ಭರ್ಜರಿ ಆಟ ಕೆಕೆಆರ್ ತಂಡಕ್ಕೆ ಸಮಾಧಾನ ತಂದಿದೆ.

ಐಪಿಎಲ್‌ ಸಾಧನೆ

ಐಪಿಎಲ್‌ನಲ್ಲಿ ರಹಮಾನುಲ್ಲಾ ಗುರ್ಬಾಜ್ 2023ರಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಪರ 11 ಪಂದ್ಯಗಳಲ್ಲಿ ಅಂಗಳ ಪ್ರವೇಶಿಸಿದ್ದಾರೆ. ಈ ವೇಳೆ 20.64ರ ಸರಾಸರಿಯಲ್ಲಿ 227 ರನ್‌ ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ ಈಬಾರಿ ಅಬ್ಬರಿಸುವ ಸೂಚನೆಯನ್ನು ನೀಡಿದ್ದಾರೆ. ಇವರಿಗೆ ಶ್ರೇಯಸ್‌ ಅಯ್ಯರ್ ಅವಕಾಶವನ್ನು ನೀಡಿದ್ದೇ ಆದಲ್ಲಿ ತಂಡದ ಪರ ಅಬ್ಬರಿಸುವ ಸೂಚನೆ ನೀಡಿದ್ದಾರೆ. ಅಲ್ಲದೆ ಟಾಪ್‌ ಆರ್ಡರ್‌ನಲ್ಲಿ ಬೌಲರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

Story first published: Friday, March 8, 2024, 8:53 [IST]
Other articles published on Mar 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+