IPL 2024: ಕೆ.ಎಲ್ ರಾಹುಲ್ ಮುಖದಲ್ಲಿ ಮಂದಹಾಸ, ಫ್ಯಾನ್ಸ್‌ಗೆ ಹೊಸ ವರ್ಷದ ಗಿಫ್ಟ್ ನೀಡಿದ ಆಸೀಸ್ ಆಲ್ ರೌಂಡರ್
ಒತ್ತಡದ ಸಂದರ್ಭಗಳಲ್ಲಿ, ಮಾರ್ಕಸ್ ಸ್ಟೊಯಿನಿಸ್ ಹೊಸ ವರ್ಷದ ಮುನ್ನಾದಿನದಂದು ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಆಸ್ಟ್ರೇಲಿಯಾದ T-20 ಲೀಗ್ ಬಿಗ್ ಬ್ಯಾಷ್‌ನಲ್ಲಿ ಸ್ಟೋಯಿನಿಸ್ ಅಬ್ಬರಿಸಿದ್ದಾರೆ.
ಈ ಮೂಲಕ 2024ಕ್ಕೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮಾರ್ಕಸ್ ಸ್ಟೋಯಿನಿಸ್ ಭರ್ಜರಿ ಆಗಿ ಆರಂಭ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮೌನಕ್ಕೆ ಶರಣಾದಂತೆ ಕಂಡು ಬಂದಿದ್ದ ಸ್ಟೋಯಿನಿಸ್ ಬ್ಯಾಟ್ ಅಬ್ಬರಿಸಿದೆ. ಈ ಮೂಲಕ ಐಪಿಎಲ್‌ನಲ್ಲೂ ಅಬ್ಬರಿಸಲು ನಾನು ರೆಡಿ ಎಂಬುದನ್ನು ಸಾರಿ ಹೇಳಿದ್ದಾರೆ.

ಆಸ್ಟ್ರೇಲಿಯಾದ ಆಲ್‌ರೌಂಡರ್ ಮೆಲ್ಬೋರ್ನ್ ಸ್ಟಾರ್ಸ್ ಪರ ಬಿರುಗಾಳಿಯ ಬ್ಯಾಟಿಂಗ್ ಪ್ರದರ್ಶನ ನೀಡಿ, ಅರ್ಧಶತಕವನ್ನು ಗಳಿಸಿದರು. ಅಲ್ಲದೆ ಪಂದ್ಯಾವಳಿಯ ಇತಿಹಾಸದಲ್ಲಿ ತಮ್ಮ ತಂಡಕ್ಕಾಗಿ ಅತಿದೊಡ್ಡ ರನ್ ಚೇಸ್ ಮಾಡಿದ ದಾಖಲೆಯನ್ನು ಬರೆದರು.
ಮಾರ್ಕಸ್ ಸ್ಟೊಯಿನಿಸ್ ಕೇವಲ 19 ಎಸೆತಗಳಲ್ಲಿ ಅಜೇಯ 55 ರನ್ ಗಳಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ 206 ರನ್ ಗಳ ಬೃಹತ್ ಗುರಿ ನೀಡಿತ್ತು. ಈ ಋತುವಿನಲ್ಲಿ, ಅತಿ ಹೆಚ್ಚು ಅಭಿಮಾನಿಗಳು ಡಿಸೆಂಬರ್ 31 ರ ಸಂಜೆ ಕ್ರೀಡಾಂಗಣದಲ್ಲಿ ನೆರೆದಿದ್ದರು. ಮಾರ್ಕಸ್ ಸ್ಟೊಯಿನಿಸ್ 42,504 ಪ್ರೇಕ್ಷಕರ ಮುಂದೆ ಮೆಲ್ಬೋರ್ನ್ ಸ್ಟಾರ್ಸ್‌ಗಾಗಿ ಐತಿಹಾಸಿಕ ಜಯದ ಮಾಲೆ ತೊಡಿಸಿದರು.

ಬಿಗ್ ಬ್ಯಾಷ್ ಲೀಗ್‌ನಲ್ಲಿ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸ್ಟೊಯಿನಿಸ್, ಹೊಸ ವರ್ಷದ ಮುನ್ನಾದಿನದಂದು ಸ್ಫೋಟಕ ಅರ್ಧಶತಕವನ್ನು ಗಳಿಸಿದರು. 14ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಸ್ಟೊಯಿನಿಸ್, 4 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಸ್ಟೊಯಿನಿಸ್ ಕೂಡ 19ನೇ ಓವರ್‌ನ ಕೊನೆಯ ಎಸೆತದಲ್ಲಿ ಗೆಲುವಿನ ಸಿಕ್ಸರ್ ಬಾರಿಸಿ 7 ವಿಕೆಟ್ ಹಾಗೂ 6 ಎಸೆತಗಳು ಬಾಕಿ ಇರುವಂತೆಯೇ ಸ್ಟಾರ್ಸ್ ಗೆಲುವಿಗೆ ನೆರವಾದರು.
206 ರನ್ ಬೆನ್ನಟ್ಟಿದ ಡೇನಿಯಲ್ ಲಾರೆನ್ಸ್ (26 ಎಸೆತಗಳಲ್ಲಿ 50), ಬ್ಯೂ ವೆಬ್ ಸ್ಟರ್ (48 ಎಸೆತಗಳಲ್ಲಿ 66) ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ (28 ಎಸೆತಗಳಲ್ಲಿ 28) ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಉತ್ತಮ ಸ್ಥಿತಿಗೆ ತಂದರು. ಮ್ಯಾಕ್ಸ್‌ವೆಲ್ ಅವರ ವಿಕೆಟ್‌ನ ನಂತರ ಸ್ಟೊಯಿನಿಸ್ ಮೈದಾನಕ್ಕೆ ಎಂಟ್ರಿ ನೀಡಿದರು. ಮತ್ತು ಒಟ್ಟು 19 ಎಸೆತಗಳಲ್ಲಿ 10 ಬೌಂಡರಿಗಳನ್ನು ಬಾರಿಸಿದರು.
ಇದಕ್ಕೂ ಮೊದಲು ಅಡಿಲೇಡ್ ಸ್ಟ್ರೈಕರ್ಸ್ ಪರ ಕ್ರಿಸ್ ಲಿನ್ 42 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 83 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು. ಮ್ಯಾಥ್ಯೂ ಶಾರ್ಟ್ 32 ಎಸೆತಗಳಲ್ಲಿ 56 ರನ್ ಗಳಿಸಿ ಸ್ಕೋರ್ ಅನ್ನು 20 ಓವರ್‌ಗಳಲ್ಲಿ 4 ವಿಕೆಟ್ ಗೆ 205 ರನ್‌ಗಳಿಗೆ ಕೊಂಡೊಯ್ದರು.
ಸ್ಟೊಯಿನಿಸ್ ಅವರ ಇನ್ನಿಂಗ್ಸ್ ಅನ್ನು ಯಾರೂ ಊಹಿಸಲು ಸಾಧ್ಯವಾಗಲಿಲ್ಲ. ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್‌ಗಾಗಿ ಆಡಿದ ಮಾರ್ಕಸ್ ಸ್ಟೋನಿಸ್ ಅವರ ಇನ್ನಿಂಗ್ಸ್‌ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಈ ಗೆಲುವಿನ ನಂತರ, ಸ್ಟಾರ್ಸ್ ಲೀಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications