ಐಪಿಎಲ್ 2024 ಇದೇ ಮಾರ್ಚ್ 22ರಿಂದ ಆರಂಭವಾಗಲಿದೆ. ಈ ಲೀಗ್‌ನಲ್ಲಿ ದೇಶ, ವಿದೇಶದ ಆಟಗಾರರು ಭಾಗವಹಿಸುತ್ತಾರೆ. ಸ್ಟಾರ್ ಆಟಗಾರರನ್ನು ಒಂದೇ ಸೂರಿನಲ್ಲಿ ನೋಡುವ ಆನಂದ ಅಭಿಮಾನಿಗಳಿಗೆ ಸಿಗಲಿದೆ. 17ನೇ ಆವೃತ್ತಿಯ ಐಪಿಎಲ್ ಹಲವು ಸ್ಟಾರ್ ಆಟಗಾರರಿಗೆ ಮಹತ್ವದಾಗಿದೆ. ಈ ಲೀಗ್‌ನಲ್ಲಿ ಮಿಂಚಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಲು ಆಟಗಾರರು ಸಿದ್ಧರಾಗಿದ್ದಾರೆ. ಈಗಾಗಲೇ ಆಟಗಾರರು ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ರಾಷ್ಟ್ರೀಯ ತಂಡದ ಪರ ಆಡುವ ಆಟಗಾರರು ತಮ್ಮ ತಂಡದ ಪರ ಸ್ಥಿರ ಪ್ರದರ್ಶನ ನೀಡಿ, ಫ್ರಾಂಚೈಸಿ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಹಲವು ಹಸೆರುಗಳು ಈಗಾಗಲೇ ಸೇರ್ಪಡೆಗೊಂಡಿವೆ. ಈ ಪಟ್ಟಿಗೆ ಲೇಟೆಸ್ಟ್ ಆಗಿ ಎಂಟ್ರಿ ನೀಡಿದ ಆಟಗಾರ ಅಫ್ಘಾನಿಸ್ತಾನ ತಂಡದ ಸ್ಟಾರ್ ಆಲ್ ರೌಂಡರ್ ಮೊಹಮ್ಮದ್ ನಬಿ..

ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಮತ್ತು ಮೂರನೇ ಪಂದ್ಯ ಮಾರ್ಚ್ 12 ರಂದು ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ಪ್ರಾಬಲ್ಯ ಮೆರೆಯಿತು. ಅಫ್ಘಾನಿಸ್ತಾನವು 117 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಈ ದೊಡ್ಡ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಕೂಡ 2-0 ಅಂತರದಿಂದ ಸರಣಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟಾಸ್ ಸೋತ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿತು. ಆಫ್ಘಾನ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 236 ರನ್ ಕಲೆ ಹಾಕಿತು. ಅಫ್ಘಾನಿಸ್ತಾನ ಪರ ಹಶ್ಮತುಲ್ಲಾ ಶಾಹಿದಿ ಗರಿಷ್ಠ 69 ರನ್ ಗಳಿಸಿದರು. ಇದಲ್ಲದೇ ರಹಮಾನುಲ್ಲಾ ಗುರ್ಬಾಜ್ ಕೂಡ 51 ರನ್ ಗಳ ಉತ್ತಮ ಇನ್ನಿಂಗ್ಸ್ ಆಡಿದರು. ಅನುಭವಿ ಆಲ್ ರೌಂಡರ್ ಮೊಹಮ್ಮದ್ ನಬಿ ಕೂಡ 48 ರನ್ ಗಳಿಸಿದರು.

237 ರನ್‌ಗಳ ಗುರಿ ಬೆನ್ನತ್ತಿದ ಪ್ರವಾಸಿ ತಂಡ ಐರ್ಲೆಂಡ್ 50 ಓವರ್‌ಗಳನ್ನು ಸಹ ಆಡಲಾಗದೆ 35 ಓವರ್‌ಗಳಲ್ಲಿ 119 ರನ್ ಗಳಿಸಿ ಕುಸಿದು ಬಿದ್ದಿತು. ಈ ಮೂಲಕ ಅಫ್ಘಾನಿಸ್ತಾನ ಏಕದಿನ ಪಂದ್ಯವನ್ನು 117 ರನ್‌ಗಳಿಂದ ಗೆದ್ದುಕೊಂಡಿತು. ಬ್ಯಾಟ್‌ನಿಂದ ಅದ್ಭುತ ಪ್ರದರ್ಶನ ನೀಡಿದ ಮೊಹಮ್ಮದ್ ನಬಿ ಐರ್ಲೆಂಡ್‌ನ ಬ್ಯಾಟರ್‌ಗಳಿಗೆ ಕಾಟ ನೀಡಿದರು. ನಬಿ 5 ವಿಕೆಟ್ ಪಡೆದರು. ಇದಲ್ಲದೇ ನಂಜೆಲಿಯಾ ಖರೋಟೆ 4 ವಿಕೆಟ್ ಪಡೆದರು.
ಮೊಹಮ್ಮದ್ ನಬಿ ಆಲ್‌ರೌಂಡರ್ ಪ್ರದರ್ಶನ ನಿಜಕ್ಕೂ ಮುಂಬೈ ಇಂಡಿಯನ್ಸ್ ತಂಡದ ಆರನೇ ಕಪ್ ಗೆಲುವಿನ ಆಸೆಯನ್ನು ಚಿಗುರಿಸಿದೆ.