IPL 2024: ರಾಯಲ್ ಫ್ಯಾನ್ಸ್‌ಗೆ ಇದಕ್ಕಿಂತ ಖುಷಿ ಸುದ್ದಿ ಬೇಕಾ?; ರಣಜಿಯಲ್ಲಿ ಶತಕ ಸಿಡಿಸಿದ ಆರ್‌ಸಿಬಿ ಬೌಲರ್
ಸದ್ಯ ನಡೆಯುತ್ತಿರುವ 2024ರ ರಣಜಿ ಟ್ರೋಫಿ ಆವೃತ್ತಿಯು ಯುವ ಮತ್ತು ಅನುಭವಿ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಲು ಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ದೊಡ್ಡ ಅವಕಾಶವನ್ನು ಒದಗಿಸುತ್ತದೆ. ಅಲ್ಲದೆ ಈ ದೇಶೀಯ ಪಂದ್ಯಾವಳಿಯು ಐಪಿಎಲ್ ಫ್ರಾಂಚೈಸಿಗಳ ಭಾಗವಾಗಿರುವ ಆಟಗಾರರಿಗೆ ಹೆಚ್ಚು ಅಗತ್ಯವಿರುವ ಅಭ್ಯಾಸ ಮತ್ತು ತರಬೇತಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಚೆಂಡಿನ ಸ್ವರೂಪ ಮತ್ತು ಬಣ್ಣವು ವಿಭಿನ್ನವಾಗಿರಬಹುದು. ಆದರೆ ಇದು ವಿಶ್ವದ ದೊಡ್ಡ ಟಿ20 ಟೂರ್ನಿಗೆ ಮುಂಚಿತವಾಗಿ ತಂಡವನ್ನು ಪ್ರವೇಶಿಸಲು ಆಟಗಾರರಿಗೆ ಹುಮ್ಮಸ್ಸು ನೀಡಲಿದೆ.

ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರು ತಮ್ಮ ಆಯ್ಕೆಯ ಕ್ರಿಕೆಟಿಗರನ್ನು ವಿಶೇಷವಾಗಿ ರಣಜಿ ಟ್ರೋಫಿ ಪಂದ್ಯಾವಳಿಯ ನಂತರದ ಭಾಗದಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸುವುದರಲ್ಲಿ ಆಶ್ಚರ್ಯವಿಲ್ಲ.
ಇನ್ನು ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಮಾರ್ಚ್ 22ರಿಂದ ಅದ್ಧೂರಿ ಚಾಲನೆ ಸಿಗುವ ಸಾಧ್ಯತೆ ಇದೆ. ಇದಕ್ಕಾಗಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಯಾರಿ ಆರಂಭಿಸಿವೆ.
ಇದೀಗ 2024ರ ಐಪಿಎಲ್‌ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಲಾಯಲ್ ಅಭಿಮಾನಿಗಳಿಗೆ ಒಂದರ ಮೇಲೊಂದು ಖುಷಿ ಸುದ್ದಿಗಳು ಸಿಗುತ್ತಿವೆ. ಇತ್ತೀಚಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿಲ್ ಜ್ಯಾಕ್ಸ್ ಟಿ20 ಪಂದ್ಯಗಳಲ್ಲಿ ಶತಕ ಬಾರಿಸಿ ಮಿಂಚಿದರು.

ಇದೀಗ 2024ರ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ಪರ ಆರ್‌ಸಿಬಿ ತಂಡದ ಬೌಲರ್ ಭರ್ಜರಿ ಶತಕ ಸಿಡಿಸಿ ತಾನು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಕ್ಕೂ ಸೈ ಎಂದು ನಿರೂಪಿಸಿದ್ದಾರೆ.
ಹೌದು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಟಗಾರನೊಬ್ಬ ಪ್ರಾಥಮಿಕವಾಗಿ ಬೌಲರ್ ಆಗಿದ್ದರೂ, ರಣಜಿ ಟ್ರೋಫಿಯಲ್ಲಿ ತಮ್ಮ ದೇಶೀಯ ತಂಡಕ್ಕಾಗಿ ಸೊಗಸಾದ ಬ್ಯಾಟಿಂಗ್ ಕೌಶಲ್ಯವನ್ನು ತೋರಿಸಿದ್ದಾರೆ.
ಆತ ಬೇರೆ ಯಾರೂ ಅಲ್ಲ, ಕರ್ನಾಟಕದ ಸ್ಪೀಡ್ ಸ್ಟಾರ್ ವಿಜಯ್‌ಕುಮಾರ್ ವೈಶಾಕ್. ಚಂಡೀಗಢ ವಿರುದ್ಧ ಕೇವಲ 136 ಎಸೆತಗಳಲ್ಲಿ ಅದ್ಭುತ ಶತಕ ಬಾರಿಸಿ ಎಲೈಟ್ ಗ್ರೂಪ್ ಸಿ ಪಂದ್ಯಾವಳಿಯಲ್ಲಿ ತಮ್ಮ ತಂಡದ ಸ್ಥಾನವನ್ನು ಗಟ್ಟಿಗೊಳಿಸಿದರು.
ಚಂಡೀಗಢ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದ ವಿಜಯ್‌ಕುಮಾರ್ ವೈಶಾಕ್, ಬ್ಯಾಟಿಂಗ್ ವೇಳೆ ತಮ್ಮ ಶತಕದ ಹಾದಿಯಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಸಿಡಿಸಿದರು.
ಈ ಬಾರಿಯ ರಣಜಿಯಲ್ಲಿ ವಿಜಯ್‌ಕುಮಾರ್ ವೈಶಾಕ್ ಅಸಾಧಾರಣ ಬ್ಯಾಟಿಂಗ್ ಕೌಶಲ್ಯವನ್ನು ತೋರಿಸಿದ್ದಾರೆ. ಪಂದ್ಯಾವಳಿಯಲ್ಲಿ ರೈಲ್ವೇಸ್ ವಿರುದ್ಧ ರೋಚಕ ಪಂದ್ಯದಲ್ಲಿ ಪ್ರಬುದ್ಧ ಪ್ರದರ್ಶನ ನೀಡಿ ತಮ್ಮ ತಂಡ ಗೆಲ್ಲಲು ಮಾರ್ಗದರ್ಶನ ಮಾಡಿದ್ದರು.
ಪ್ರಾಥಮಿಕವಾಗಿ, ವೇಗದ ಬೌಲರ್ ಆಗಿದ್ದರೂ, ಈ ಬಾರಿಯ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ವಿಜಯ್‌ಕುಮಾರ್ ವೈಶಾಕ್ ಪ್ರಸ್ತುತ ಕರ್ನಾಟಕ ಪರ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಆಲ್‌ರೌಂಡರ್ ಆಗಲು ಬಯಸಿದ ವಿಜಯ್‌ಕುಮಾರ್ ವೈಶಾಕ್
ಇತ್ತೀಚೆಗೆ, ಕರ್ನಾಟಕ ಮತ್ತು ಆರ್‌ಸಿಬಿ ವೇಗಿ ವಿಜಯ್‌ಕುಮಾರ್ ವೈಶಾಕ್ ಅವರು ತಮ್ಮ ಅಂಡರ್-16 ಆಟದ ದಿನಗಳಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ ಆಗಿದ್ದರು ಎಂದು ಬಹಿರಂಗಪಡಿಸಿದರು.
ಆದರೆ, ಹೆಚ್ಚು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಬಂದ ನಂತರ, ತಮ್ಮ ಬೌಲಿಂಗ್‌ನತ್ತ ಗಮನ ಹರಿಸಿದರು. ವಿಜಯ್‌ಕುಮಾರ್ ವೈಶಾಕ್ ಸಮಯ ಸಿಕ್ಕಾಗಲೆಲ್ಲಾ ತಮ್ಮ ಬ್ಯಾಟಿಂಗ್‌ನಲ್ಲಿ ಕೆಲಸ ಮಾಡುತ್ತಾರೆ ಮತ್ತು ಇದೀಗ ಅದರ ಫಲಿತಾಂಶಗಳು ತೋರಿಸುತ್ತಿವೆ.
"ನಾನು ಬ್ಯಾಟಿಂಗ್ ಮೂಲಕ ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಿದೆ ಮತ್ತು ಅಂಡರ್-16 ಅನ್ನು ಅಗ್ರ ಕ್ರಮಾಂಕದ ಬ್ಯಾಟ್ ಆಗಿ ಆಡಿದ್ದೇನೆ. ಆದರೆ, ನಾನು ವಯಸ್ಸಾದಂತೆ ಚೆನ್ನಾಗಿ ಬೌಲಿಂಗ್ ಮಾಡಲು ಪ್ರಾರಂಭಿಸಿದೆ. ನಾನು ಅದರ ಮೇಲೆ ಕೇಂದ್ರೀಕರಿಸಿದೆ. ಆದರೂ, ಸಮಯ ಸಿಕ್ಕಾಗಲೆಲ್ಲಾ ನನ್ನ ಬ್ಯಾಟಿಂಗ್‌ನಲ್ಲಿ ಕೆಲಸ ಮಾಡುತ್ತೇನೆ," ಎಂದು ವಿಜಯ್‌ಕುಮಾರ್ ವೈಶಾಕ್ ತಿಳಿಸಿದರು
2024ರ ಐಪಿಎಲ್‌ಗೂ ಮುನ್ನ ವಿಜಯ್‌ಕುಮಾರ್ ವೈಶಾಕ್ ಶತಕ ಬಾರಿಸಿರುವುದು ಆರ್‌ಸಿಬಿ ತಂಡಕ್ಕೆ ಸಂತೋಷದ ಸುದ್ದಿಯಾಗಿದೆ. ಏಕೆಂದರೆ ತಂಡದ ಅಗ್ರ ಕ್ರಮಾಂಕದಲ್ಲಿ ಹೆಚ್ಚಿನ ಬ್ಯಾಟಿಂಗ್ ಆಯ್ಕೆಗಳಿವೆ. ವಿಜಯ್‌ಕುಮಾರ್ ವೈಶಾಕ್ ಕೆಳ ಕ್ರಮಾಂಕದಲ್ಲಿ ರನ್ ಕೊಡುಗೆ ನೀಡಲು ಆಶಿಸುತ್ತಾನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications