IPL 2024: ಗುಜರಾತ್ 'ಶುಭ' ಆರಂಭ; ಮುಂಬೈಗೆ 6 ರನ್ ಸೋಲು
ಸಂಘಟಿತ ಆಟದ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಆರು ರನ್‌ಗಳಿಂದ ಮಣಿಸಿ ಶುಭಾರಂಭ ಮಾಡಿದೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 162 ರನ್ ಕಲೆ ಹಾಕಿ ಸೋಲು ಕಂಡಿತು. ಡೆತ್ ಓವರ್‌ಗಳಲ್ಲಿ ಮನಮೋಹಕ ದಾಳಿಯನ್ನು ಸಂಘಟಿಸಿದ ಗುಜರಾತ್ ಗೆಲುವನ್ನು ಸಾಧಿಸಿತು. ರನ್ ಕಲೆ ಹಾಕುವ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾದ ಮುಂಬೈ ಸೋಲು ಕಂಡಿತು. ಗುಜರಾತ್ ತವರಿನ ಅಂಗಳದಲ್ಲಿ ಶುಭಾರಂಭ ಮಾಡಿದೆ.

ಕಳಪೆ ಆರಂಭ
ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸೊನ್ನೆ ಸುತ್ತಿದರು. ಭರವಸೆ ಮೂಡಿಸಿದ್ದ ನಮನ್ ಧೀರ್ 20 ರನ್ ಕಲೆ ಹಾಕಿ ತಂಡಕ್ಕೆ ನೆರವಾದರು.
ಮೂರನೇ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಅವರನ್ನು ಸೇರಿಕೊಂಡ ಡೆವಾಲ್ಡ್ ಬ್ರೆವಿಸ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 55 ಎಸೆತಗಳಲ್ಲಿ 77 ರನ್ ಸೇರಿಸಿತು. ರೋಹಿತ್ ಶರ್ಮಾ 43 ರನ್ ಬಾರಿಸಿ ಮುನ್ನುಗುತ್ತಿದ್ದಾಗ ಔಟ್ ಆದರು. ಏಕಾಂಗಿ ಹೋರಾಟವನ್ನು ನಡೆದಿ ಬ್ರೆವಿಸ್ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 46 ರನ್ ಬಾರಿಸಿ ಔಟ್ ಆದರು.
ಮಿಡ್ಲ್ ಆರ್ಡರ್‌ನಲ್ಲಿ ತಿಲಕ್ ವರ್ಮಾ 25 ರನ್, ಟೀಮ್ ಡೇವಿಡ್ 11 ರನ್, ನಾಯಕ ಹಾರ್ದಿಕ್ ಪಾಂಡ್ಯ 11 ರನ್ ಸೇರಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಗುಜರಾತ್ ಪರ ಉಮೇಶ್ ಯಾದವ್, ಎಸ್.ಜಾನ್ಸನ್, ಮೋಹಿತ್ ಶರ್ಮಾ ಹಾಗೂ ಅಜ್ಮತುಲ್ಲಾ ಒಮರ್ಜಾಯ್ ತಲಾ ಎರಡು ವಿಕೆಟ್ ಕಬಳಿಸಿದರು.
ಮುಂಬೈ ಇಂಡಿಯನ್ಸ್ ತಂಡದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಅವರ ಮ್ಯಾಜಿಕ್ ಬೌಲಿಂಗ್‌ಗೆ ಉತ್ತರ ನೀಡುವಲ್ಲಿ ಗುಜರಾತ್ ಟೈಟನ್ಸ್ ಬ್ಯಾಟರ್‌ಗಳು ವಿಫಲರಾಗಿದ್ದಾರೆ. ಈ ಮೂಲಕ ಮುಂಬೈ ತಂಡ 17ನೇ ಆವೃತ್ತಿ ಐಪಿಎಲ್‌ನ ಐದನೇ ಪಂದ್ಯದಲ್ಲಿ ಗುಜರಾತ್ ತಂಡವನ್ನು 168 ರನ್‌ಗಳಿಗೆ ಕಟ್ಟಿ ಹಾಕಿದೆ.

168 ರನ್ ಕಲೆ ಹಾಕಿದ ಟೈಟನ್ಸ್
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಶುಭಮನ್ ಗಿಲ್ ಪಡೆಯ ಆರಂಭ ಉತ್ತಮವಾಗಿತ್ತು. ನಾಯಕ ಗಿಲ್ ಹಾಗೂ ವೃದ್ಧಿಮನ್ ಸಹ 19 ರನ್‌ಗಳಿಸಿ ಮುನ್ನಗುತ್ತಿದ್ದಾಗ ಜಸ್ಪ್ರಿತ್ ಬುಮ್ರಾ ತೋಡಿದ ಖೆಡ್ಡಾಗೆ ಬಲಿಯಾದರು. ಎರಡನೇ ವಿಕೆಟ್‌ಗೆ ಗಿಲ್ ಜೊತೆಗೂಡಿದ ಭರವಸೆಯ ಬ್ಯಾಟರ್ ಸಾಯಿ ಸುದರ್ಶನ್ ಉತ್ತಮ ಜೊತೆಯಾಟ ನೀಡುವ ಸೂಚನೆ ನೀಡಿದರು. ಈ ಜೋಡಿ 22 ಎಸೆತಗಳಲ್ಲಿ 33 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು.
ಉತ್ತಮ ಲಯದಲ್ಲಿ ಕಂಡು ಬಂದಿದ್ದ ಶುಭ್‌ಮನ್ ಗಿಲ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 31 ರನ್ ಬಾರಿಸಿ ಸ್ಪಿನ್ ಬೌಲರ್ ಪಿಯುಷ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು.
ಮೂರನೇ ವಿಕೆಟ್‌ಗೆ ಸಾಯಿ ಸುದರ್ಶನ ಹಾಗೂ ಅಜ್ಮತುಲ್ಲಾ ಒಮರ್ಜಾಯ್ ಜೊತೆಗೂಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 26 ಎಸೆತಗಳಲ್ಲಿ 40 ರನ್ ಸೇರಿಸಿತು. ಅಜ್ಮತುಲ್ಲಾ ಒಮರ್ಜಾಯ್ 17 ರನ್ ಮಾಡಿ ಮುನ್ನಗುತ್ತಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ 12 ರನ್ ಬಾರಿಸಿ ಜವಾಬ್ದಾರಿ ಮರೆತರು. ವಿಜಯ್ ಶಂಕರ್ (6) ಬಂದು ಹೋಗುವ ಸಂಪ್ರದಾಯ ಮುಗಿಸಿದರು. ರಾಹುಲ್ ತೆವಾಟಿಯ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 22 ರನ್ ಸಿಡಿಸಿ ತಂಡಕ್ಕೆ ನೆರವಾದರು.

ಸಾಯಿ ಸುದರ್ಶನ ಮಿಂಚು
ಇತ್ತೀಚಿಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಸಾಯಿ ಸುದರ್ಶನ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿದರು.
ಮುಂಬೈ ತಂಡದ ಪರ ಜಸ್ಪ್ರಿತ್ ಬುಮ್ರಾ ಮಾರಕ ಬೌಲಿಂಗ್ ದಾಳಿ ನಡೆಸಿದರು. ಇವರು 4 ಓವರ್ ಬೌಲಿಂಗ್ ಮಾಡಿ 14 ರನ್ ನೀಡಿ ಮೂರು ಅತ್ಯಮೂಲ್ಯ ವಿಕೆಟ್ ಕಬಳಿಸಿದರು. ಜೆರಾಲ್ಡ್ ಕೊಯೆಟ್ಜಿ ಎರಡು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications