2024ರ ಐಪಿಎಲ್‌ಗೂ ಮುನ್ನ ಹರಾಜು ಪ್ರಕ್ರಿಯೆಯ ಮತ್ತೊಂದು ಬೆಳವಣಿಗೆಯಲ್ಲಿ, ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟನ್ಸ್ ತಂಡದಿಂದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ವ್ಯಾಪಾರ ಮಾಡಲಾಗಿದೆ ಎಂದು ದೃಢಪಡಿಸಲಾಗಿದೆ.

ಇದು ಎಲ್ಲಾ ನಗದು ವ್ಯಾಪಾರವಾಗಿರುವುದರಿಂದ ಗುಜರಾತ್ ಟೈಟನ್ಸ್‌ಗೆ ಪ್ರತಿಯಾಗಿ ಯಾವುದೇ ಆಟಗಾರನನ್ನು ನೀಡಲಾಗಿಲ್ಲ ಎಂಬ ಅಂಶವೂ ಬಹಿರಂಗವಾಗಿದೆ. ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಪಾಂಡ್ಯ ಅವರ ಮಾಜಿ ಐಪಿಎಲ್ ತಂಡಕ್ಕೆ ವರ್ಗಾವಣೆಯಾಗುವ ಬಗ್ಗೆ ಹಲವಾರು ಊಹಾಪೋಹಗಳು ಇದ್ದವು.
ಈ ಹಿಂದೆ 15 ಕೋಟಿ ರೂಪಾಯಿ ಎಲ್ಲಾ ನಗದು ವಹಿವಾಟಿನ ವರದಿಗಳು ಹೊರಬಂದಿದ್ದವು. ಆದಾಗ್ಯೂ, ಉಳಿಸಿಕೊಂಡ ಆಟಗಾರರ ಪಟ್ಟಿ ನೀಡುವ ಗಡುವು ಸಮೀಪಿಸುತ್ತಿದ್ದಂತೆ, 2024ರ ಐಪಿಎಲ್‌ಗಿಂತ ಮುಂಚಿತವಾಗಿ ಗುಜರಾತ್ ಟೈಟನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ಉಳಿಸಿಕೊಂಡಿದೆ ಎಂದು ಘೋಷಿಸಲಾಯಿತು.
ಆದರೆ, ಇತ್ತೀಚಿನ ಕ್ರಿಕ್‌ಬಜ್ ವರದಿಯು ಸ್ಟಾರ್ ಆಲ್‌ರೌಂಡರ್ ಮುಂಬೈ ಇಂಡಿಯನ್ಸ್ ತಂಡಕ್ಕೆ ತೆರಳಲಿದ್ದಾರೆ ಎಂದು ಖಚಿತಪಡಿಸಿದೆ. ಒಪ್ಪಂದದ ಮೇಲೆ ಅನೇಕ ಯು-ಟರ್ನ್‌ಗಳ ನಂತರ, ಸಂಬಂಧಿತ ಫ್ರಾಂಚೈಸಿಗಳು ನವೆಂಬರ್ 26ರಂದು ಒಪ್ಪಂದವನ್ನು ಅಧಿಕೃತಗೊಳಿಸಲು ಸಹಿ ಹಾಕಿದ್ದಾರೆ.

ಇನ್ನು ಮುಂಬೈ ಇಂಡಿಯನ್ಸ್ ದುಬಾರಿ ಮೊತ್ತದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವ್ಯಾಪಾರ ಮಾಡಲಾಗಿದೆ ಎಂದು ವರದಿಯಾಗಿದೆ. ಆಲ್‌ರೌಂಡರ್ ಅವರನ್ನು ಮುಂಬೈ ಇಂಡಿಯನ್ಸ್ 17.5 ಕೋಟಿ ರೂಪಾಯಿಗೆ ಖರೀದಿಸಿತ್ತು.
ಹಾರ್ದಿಕ್ ಪಾಂಡ್ಯ ಅವರ ವ್ಯಾಪಾರದಂತೆಯೇ, ಕ್ಯಾಮೆರಾನ್ ಗ್ರೀನ್ ಒಪ್ಪಂದವು ಕೂಡ ಎಲ್ಲಾ ನಗದು ವ್ಯವಹಾರವಾಗಿದ್ದು, ಯಾವುದೇ ಇತರ ಆಟಗಾರರು ಭಾಗಿಯಾಗಿಲ್ಲ ಎನ್ನಲಾಗಿದೆ.
"ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಐಪಿಎಲ್‌ನ ಒಳಗಿನ ಮೂಲಗಳ ಪ್ರಕಾರ, ಈ ನಗದು-ಮಾತ್ರ ವಹಿವಾಟುಗಳಿಗೆ ಔಪಚಾರಿಕ ಅನುಮೋದನೆಯನ್ನು ನೀಡಲಾಗಿದೆ," ಎಂದು ವರದಿ ತಿಳಿಸಿದೆ.
2022ರ ಹರಾಜಿನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟನ್ಸ್ ಖರೀದಿಸಿದಾಗಿನಿಂದಲೂ ಅವರು ನಾಯಕರಾಗಿ ಹೆಚ್ಚು ಯಶಸ್ವಿಯಾಗಿದ್ದಾರೆ ಎಂಬುದು ಗಮನಾರ್ಹ ಸಂಗತಿ.
ಗುಜರಾತ್ ಟೈಟನ್ಸ್‌ನ ಮೊದಲ ಐಪಿಎಲ್ ಋತುವಿನಲ್ಲಿ ಪ್ರಶಸ್ತಿಗೆ ತಂಡವನ್ನು ಮುನ್ನಡೆಸಿದರು. ಹಾರ್ದಿಕ್ ಪಾಂಡ್ಯ ಅವರು 2023ರಲ್ಲಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದರು. ಆದರೆ ಅವರು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಹಾರ್ದಿಕ್ ಪಾಂಡ್ಯ ಮರಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡರೆ, ತಮ್ಮ ಮಾಜಿ ತಂಡಕ್ಕೆ ಮತ್ತಷ್ಟು ಬಲ ತುಂಬಬಹುದು. ತಮ್ಮ ಆರನೇ ಐಪಿಎಲ್ ಪ್ರಶಸ್ತಿಯ ಹುಡುಕಾಟದಲ್ಲಿ ಅವರು ಐದು ಬಾರಿಯ ಚಾಂಪಿಯನ್‌ಗಳಿಗೆ ನೆರವಾಗಲಿದ್ದಾರೆ.