IPL 2024: ಆರ್‌ಸಿಬಿಯಿಂದ ಹೊರಬಿದ್ದ ಬಳಿಕ ಮೌನ ಮುರಿದ ಹರ್ಷಲ್ ಪಟೇಲ್!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂಬರುವ 2024ರ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಿಂದ ಮಧ್ಯಮ ವೇಗಿ ಹರ್ಷಲ್ ಪಟೇಲ್ ಅವರನ್ನು ಬಿಡುಗಡೆ ಮಾಡಲಾಗಿದೆ.
2022ರ ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬಳಿಕ ನಡೆದ ಮೆಗಾ ಹರಾಜಿನಲ್ಲಿ 10.75 ಕೋಟಿ ರೂಪಾಯಿ ಮರಳಿ ಆರ್‌ಸಿಬಿ ತಂಡ ಸೇರಿದ್ದ ಹರ್ಷಲ್ ಪಟೇಲ್, 2023ರ ಐಪಿಎಲ್‌ನಲ್ಲಿ ಪ್ರಭಾವ ಬೀರಲು ವಿಫಲರಾದರು.
ಇದೀಗ 2024ರ ಐಪಿಎಲ್ ಪಂದ್ಯಾವಳಿಗೂ ಮುನ್ನ ಹರ್ಷಲ್ ಪಟೇಲ್ ಅವರನ್ನು ಆರ್‌ಸಿಬಿ ಬಿಡುಗಡೆಗೊಳಿಸಿದೆ. ಡಿಸೆಂಬರ್ 19ರಂದು ನಡೆಯುವ ಮಿನಿ ಹರಾಜಿನಲ್ಲಿ ಮತ್ತೆ ಖರೀದಿಸುವ ಸಾಧ್ಯತೆಯೂ ಕಡಿಮೆ ಇದೆ.

33 ವರ್ಷದ ವೇಗಿ ಹರ್ಷಲ್ ಪಟೇಲ್ ಅವರು ಇದೀಗ ಪ್ರತಿಕ್ರಿಯಿಸಿದ್ದು, ಆರ್‌ಸಿಬಿ ಫ್ರಾಂಚೈಸಿಗೆ ಕೃತಜ್ಞತೆ ಹೊರತುಪಡಿಸಿ ಬೇರೇನೂ ಇಲ್ಲ ಎಂದು ಹೇಳಿದ್ದಾರೆ.
ಹರ್ಷಲ್ ಪಟೇಲ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ, ಬೆಂಗಳೂರು ಮೂಲದ ಫ್ರಾಂಚೈಸ್‌ನೊಂದಿಗೆ ಹಿಂದಿನ ಮೂರು ವರ್ಷಗಳು ತನಗೆ ಅದ್ಭುತವಾಗಿದೆ ಎಂದು ತಿಳಿಸಿದರು. ಕಷ್ಟದ ಸಮಯದಲ್ಲಿ ತಮ್ಮ ಪರವಾಗಿ ನಿಂತಿದ್ದಕ್ಕಾಗಿ ಫ್ರಾಂಚೈಸಿಯ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
"ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರಿ ತಂಡದೊಂದಿಗೆ ಹೊಂದಿರುವ ಕೆಲವು ವಿಶೇಷ ನೆನಪುಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ ಮೂರು ವರ್ಷಗಳು ನನ್ನ ಪಾಲಿಗೆ ಅದ್ಭುತ ಪಯಣ. ಉತ್ತಮ ಮತ್ತು ಕಳಪೆ ಫಾರ್ಮ್‌ನಲ್ಲಿದ್ದಾಗಲೂ ನನ್ನ ಬೆಂಬಲಕ್ಕೆ ನಿಂತ ತಂಡದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಮುಂದುವರಿಯುತ್ತಿದ್ದಂತೆ, ನನ್ನ ಹೃದಯದಲ್ಲಿ ಕೃತಜ್ಞತೆಯ ಹೊರತಾಗಿ ಬೇರೇನೂ ಇಲ್ಲ," ಎಂದು ಹರ್ಷಲ್ ಪಟೇಲ್ ಬರೆದುಕೊಂಡಿದ್ದಾರೆ.

ಐಪಿಎಲ್‌ನ 2023ರ ಋತುವಿನಲ್ಲಿ ಹರ್ಷಲ್ ಪಟೇಲ್ 9.66ರ ಎಕಾನಮಿ ದರದೊಂದಿಗೆ 14 ವಿಕೆಟ್‌ಳನ್ನು ಪಡೆದರು. ಆದಾಗ್ಯೂ, ಪಂದ್ಯಾವಳಿಯಲ್ಲಿ ಅವರ ಅತ್ಯುತ್ತಮ ಋತು 2021ರಲ್ಲಿ ಆಡಿದ 15 ಪಂದ್ಯಗಳಿಂದ 32 ವಿಕೆಟ್‌ಗಳನ್ನು ಪಡೆದರು ಮತ್ತು ಅತಿ ಹೆಚ್ಚು ಕಬಳಿಸಿದ್ದಕ್ಕಾಗಿ ಪರ್ಪಲ್ ಕ್ಯಾಪ್ ಅನ್ನು ಸಹ ಪಡೆದರು.
ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ, ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಮತ್ತು ಭಾರತೀಯ ವೇಗಿ ಹರ್ಷಲ್ ಪಟೇಲ್ ಐಪಿಎಲ್ 2024ಕ್ಕೆ ಮುಂಚಿತವಾಗಿ ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರಲ್ಲಿ ಸೇರಿದ್ದಾರೆ.
ಬಿಡುಗಡೆಯಾದ ಇತರ ಆಟಗಾರರಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗರಾದ ಫಿನ್ ಅಲೆನ್, ಮತ್ತು ಮೈಕೆಲ್ ಬ್ರೇಸ್‌ವೆಲ್, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವೇಯ್ನ್ ಪಾರ್ನೆಲ್, ಇಂಗ್ಲೆಂಡ್‌ನ ಡೇವಿಡ್ ವಿಲ್ಲಿ ಮತ್ತು ಭಾರತೀಯ ಆಟಗಾರರಾದ ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್ ಮತ್ತು ಕೇದಾರ್ ಜಾಧವ್ ಸೇರಿದ್ದಾರೆ.

ಉಳಿಸಿಕೊಂಡ ಆಟಗಾರರೆಂದರೆ: ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್, ರೀಸ್ ಟೋಪ್ಲಿ, ವಿಲ್ ಜ್ಯಾಕ್ಸ್, ಸುಯಶ್ ಪ್ರಭುದೇಸಾಯಿ, ಅನುಜ್ ರಾವತ್, ಮಹಿಪಾಲ್ ಲೋಮ್ರೋರ್, ಮನೋಜ್ ಭಾಂಡಗೆ, ಕರ್ಣ್ ಶರ್ಮಾ, ಮಯಾಂಕ್ ದಾಗರ್, ವೈಶಾಕ್ ವಿಜಯಕುಮಾರ್, ಆಕಾಶ್ ದೀಪ್, ರಾಜನ್ ಕುಮಾರ್, ಹಿಮಾಂಶು ಶರ್ಮಾ.
ಅಲ್ಲದೆ ಇದೀಗ, ಮುಂಬೈ ಇಂಡಿಯನ್ಸ್ ತಂಡದಿಂದ ಆಸ್ಟ್ರೇಲಿಯಾ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಅವರನ್ನು ನಗದು-ವ್ಯಾಪಾರ ಮಾಡಿಕೊಳ್ಳಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications