IPL 2024: ಗಾಯದ ಕಾರಣದಿಂದ ಆಟಗಾರ ಲೀಗ್‌ನಿಂದ ಹೊರ ನಡೆದರೆ ಸಿಗುವ ಹಣವೆಷ್ಟು?
ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ತನ್ನ ರಂಗನ್ನು ವಿಶ್ವವ್ಯಾಪಿ ಆವರಿಸಲಿದೆ. ಈ ಲೀಗ್‌ನಲ್ಲಿ ಮಿಂಚಲು ಹಲವು ಆಟಗಾರರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಹಲವು ಆಟಗಾರರು ಗಾಯದ ಸಮಸ್ಯೆಗೆ ಸಿಲುಕಿ ಒದ್ದಾಡುತಿದ್ದಾರೆ. ಗಾಯ ಎಂಬುದು ನಿಜಕ್ಕೂ ತಂಡಗಳಿಗೆ ಬೆನ್ನು ಬಿದ್ದ ಬೇತಾಳನಂತೆ ಕಾಡುತ್ತಲೆ ಇದೆ.
ಐಪಿಎಲ್ ಹರಾಜಿನಲ್ಲಿ ಆಟಗಾರರ ಪ್ರದರ್ಶನ ಹಾಗೂ ತಮ್ಮ ತಂಡಕ್ಕೆ ಯಾವ ಆಟಗಾರ ಸೂಕ್ತ ಎಂಬುದನ್ನು ಲೆಕ್ಕಹಾಕಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಅದೇ ಆಟಗಾರ, ಟೂರ್ನಿ ಆರಂಭಕ್ಕೂ ಮುನ್ನವೇ ಅಥವಾ ಟೂರ್ನಿಯ ಮಧ್ಯದಲ್ಲಿ ತಂಡವನ್ನು ತೊರೆದು ಗಾಯದ ಸಮಸ್ಯೆಯಿಂದ ಹೊರ ನಡೆದರೆ ಆತನ ಜೇಬಿಗೆ ಎಷ್ಟು ಹಣ ಸೇರಲಿದೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಸಂಶಯ ಇದ್ದೇ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ಆಟಗಾರರು ಮೈದಾನದಲ್ಲಿ ಆಡುವ ಚೆಂಡು ಬಿದ್ದು ಅಥವಾ ಡೈ ಮಾಡುವ ಸ್ಕಿಡ್ ಆಗಿ ಬೀಳುವುದು ಸಾಮಾನ್ಯ. ಈ ವೇಳೆ ಚಿಕ್ಕ ಪುಟ್ಟ ಗಾಯಗಳು ಆಗಿರುತ್ತವೆ. ಅವುಗಳನ್ನು ಲೆಕ್ಕಿಸದೇ ಆಡಿದಾಗ ಗಾಯಗಳು ತಮ್ಮ ಪರಿಣಾಮವನ್ನು ಬೀರಲು ಆರಂಭಿಸುತ್ತವೆ. ಇದರಿಂದ ಆಟಗಾರ ಮೈದಾನಕ್ಕೆ ಇಳಿಯುವುದು ಕಷ್ಟವಾಗುತ್ತದೆ. ಐಪಿಎಲ್ 2024 ಇದೇ 22ರಿಂದ ಆರಂಭವಾಗಲಿದೆ. ಸ್ಟಾರ್ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು ತಂಡದಿಂದ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಈ ಪೈಕಿ ಹಲವು ಆಟಗಾರರು ಹರಾಜಿನಲ್ಲಿ ಕೋಟ್ಯಂತರ ರೂ. ಹೀಗಾಗಿ, ಅವರು ಗಾಯಗೊಂಡರೆ, ಇಡೀ ಪಂದ್ಯಾವಳಿಯಿಂದ ಹೊರಗುಳಿದ ನಂತರವೂ ಅವರಿಗೆ ಸಂಪೂರ್ಣ ಹಣವನ್ನು ನೀಡಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಏನು ಹೇಳುತ್ತದೆ ಐಪಿಎಲ್ ನಿಯಮ?
ಐಪಿಎಲ್ ಹೊಸ ಋತು ಆರಂಭಕ್ಕೂ ಮುನ್ನವೇ ಆಟಗಾರ ಗಾಯ, ವೈಯಕ್ತಿಕ ಕಾರಣದಿಂದ ತನ್ನ ಹೆಸರನ್ನು ಲೀಗ್‌ನಿಂದ ಹಿಂದೆ ಪಡೆದಲ್ಲಿ, ಐಪಿಎಲ್ ನಿಯಮಗಳ ಪ್ರಕಾರ ಅವರಿಗೆ ಹಣ ಸಿಗುವುದಿಲ್ಲ.
ಲೀಗ್‌ನ ಮಧ್ಯದಲ್ಲಿ ಹೊರನಡೆದರೆ ಹಣ ಸಿಗುತ್ತಾ?
ಆಟಗಾರನು ಪಂದ್ಯಾವಳಿಯ ಸಮಯದಲ್ಲಿ ಗಾಯಗೊಂಡರೆ ಅಥವಾ ಯಾವುದೇ ವೈಯಕ್ತಿಕ ಕಾರಣದಿಂದ ಆಡಲು ಸಾಧ್ಯವಾಗದಿದ್ದರೆ, ನಂತರ ಪಂದ್ಯಗಳ ಅನುಪಾತದ ಪ್ರಕಾರ ಹಣವನ್ನು ನೀಡಲಾಗುತ್ತದೆ.

ಈ ಬಾರಿ ಯಾರೆಲ್ಲಾ ಮಿಸ್ ಮಾಡಿಕೊಳ್ಳಲಿದ್ದಾರೆ?
17ನೇ ಆವೃತ್ತಿಗೆ ಕ್ಷಣಗಣನೇ ಆರಂಭವಾಗಲಿದೆ. ಈ ಮೆಗಾ ಟೂರ್ನಿಯನ್ನು ವಿಶ್ವದ ಸ್ಟಾರ್ ಆಟಗಾರರು ಮಿಸ್ ಮಾಡಿಕೊಳ್ಳಲಿದ್ದಾರೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸ್ಟಾರ್ ವೇಗದ ಬೌಲರ್ ಹಾಗೂ ಕಳೆದ ಬಾರಿ ಪರ್ಪಲ್ ಕ್ಯಾಪ್ ವಿಜೇತ ಮೊಹಮ್ಮದ್ ಶಮಿ ಈ ಬಾರಿ ಮಿಸ್ ಮಾಡಿಕೊಳ್ಳಲಿದ್ದಾರೆ. ಅವರಲ್ಲದೆ, ಲುಂಗಿ ಎನ್‌ಗಿಡಿ, ಗಸ್ ಅಟ್ಕಿನ್ಸನ್, ಜೇಸನ್ ರಾಯ್, ಪ್ರಸಿದ್ಧ್ ಕೃಷ್ಣ, ಮಥಿಶ್ ಪತಿರಾನಾ, ಮಾರ್ಕ್ ವುಡ್, ರಾಬಿನ್ ಮಿಂಜೆ ಮತ್ತು ದಿಲ್ಶನ್ ಮಧುಶಂಕ ಕೂಡ ಗಾಯ ಮತ್ತು ಇತರ ಕಾರಣಗಳಿಂದ ಕಣಕ್ಕೆ ಇಳಿಯುವುದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications