Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: 'ತಾನು ಎಂದಿಗೂ ಆರ್‌ಸಿಬಿ ಫ್ರಾಂಚೈಸಿ ತೊರೆಯಲ್ಲ'; ವಿರಾಟ್ ಕೊಹ್ಲಿ ಭಾವುಕ!

ತನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎಂದಿಗೂ ಬಿಡುವುದಿಲ್ಲ ಎಂದು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಖಚಿತಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ತನ್ನ ತಂಡದ ಚೊಚ್ಚಲ ಪ್ರಶಸ್ತಿ ಅಭಿಯಾನದ ಭಾಗವಾಗುವ ತನ್ನ ಕನಸನ್ನು ನನಸಾಗಿಸಲು ಆಶಿಸುತ್ತೇನೆ ಎಂದರು.

IPL 2024 I Will Never Leave RCB Virat Kohli Gets Emotional At Unbox Event

ಮಂಗಳವಾರ, ಮಾರ್ಚ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾವಿರಾರು ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ವಿರಾಟ್ ಕೊಹ್ಲಿಯ ಮಾತುಗಳು ಉತ್ಸಾಹವನ್ನು ಹೆಚ್ಚಿಸಿದವು.

ತಮ್ಮ 16 ವರ್ಷಗಳ ಟ್ರೋಫಿಯ ಬರಗಾಲದ ನಡುವೆಯೂ ಆರ್‌ಸಿಬಿ ಅಭಿಮಾನಿಗಳ ನಿಷ್ಠೆಯನ್ನು ಶ್ಲಾಘಿಸಿದ 35 ವರ್ಷದ ವಿರಾಟ್ ಕೊಹ್ಲಿ, ಇತ್ತೀಚಿನ WPL 2024ರ ವಿಜಯೋತ್ಸವದಲ್ಲಿ ತಮ್ಮ ಮಹಿಳಾ ತಂಡದ ಯಶಸ್ಸನ್ನು ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಪುನರಾವರ್ತಿಸಲು ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

"ಐಪಿಎಲ್ ಟ್ರೋಫಿಯೊಂದಿಗೆ ನಾವು ಅದನ್ನು ದ್ವಿಗುಣಗೊಳಿಸಬಹುದು ಎಂದು ಭಾವಿಸುತ್ತೇನೆ, ಅದು ನಿಜವಾಗಿಯೂ ವಿಶೇಷವಾದದ್ದು," ಎಂದು ವಿರಾಟ್ ಕೊಹ್ಲಿ ಹೇಳಿದರು.

IPL 2024 I Will Never Leave RCB Virat Kohli Gets Emotional At Unbox Event

ಸ್ಟಾರ್ ಬ್ಯಾಟರ್ ತನ್ನ 16 ವರ್ಷಗಳ ಐಪಿಎಲ್ ವೃತ್ತಿಜೀವನದುದ್ದಕ್ಕೂ ತಾನು ಆರ್‌ಸಿಬಿ ಫ್ರಾಂಚೈಸಿಯನ್ನು ಎಂದಿಗೂ ತೊರೆಯುವುದಿಲ್ಲ ಎಂದು ಪುನರುಚ್ಚರಿಸದರು.

ಅಭಿಮಾನಿಗಳ ತಮ್ಮ ನಿಷ್ಠೆಗೆ ಸರಿಯಾದ ಪ್ರತಿಫಲವನ್ನು ನೀಡಲು ಐಪಿಎಲ್ ಟ್ರೋಫಿಯನ್ನು ಎತ್ತುವ ಅವರ ದೀರ್ಘಕಾಲದ ಬಯಕೆಯ ಬಗ್ಗೆಯೂ ವಿರಾಟ್ ಕೊಹ್ಲಿ ಮನಬಿಚ್ಚಿ ಮಾತನಾಡಿದರು.

"ಎಲ್ಲರಿಗೂ ತಿಳಿದಿರುವಂತೆ, ನಾನು ಯಾವಾಗಲೂ ಇಲ್ಲಿಯೇ (ಆರ್‌ಸಿಬಿ) ಇರುತ್ತೇನೆ. ಮೊದಲ ಬಾರಿಗೆ (ಐಪಿಎಲ್) ಟ್ರೋಪಿ ಗೆಲ್ಲುವ ತಂಡದ ಭಾಗವಾಗಲು ಪ್ರಯತ್ನಿಸುತ್ತೇನೆ. ನಾನು ಅಭಿಮಾನಿಗಳಿಗೆ, ಫ್ರಾಂಚೈಸಿಗಾಗಿ ನನ್ನ ಸಂಪೂರ್ಣ ಪ್ರಯತ್ನ ಮಾಡುತ್ತೇನೆ. ಐಪಿಎಲ್ ಗೆಲ್ಲುವುದು ಹೇಗೆ ಎಂದು ತಿಳಿದುಕೊಳ್ಳುವುದು ನನ್ನ ಹಲವು ವರ್ಷಗಳ ಕನಸು," ಎಂದು ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ವಿರಾಟ್ ಕೊಹ್ಲಿ ಹೇಳಿದರು.

2023ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅವರು 14 ಪಂದ್ಯಗಳಲ್ಲಿ 639 ರನ್ ಗಳಿಸಿದ ಅದ್ಭುತ ಋತುವಿನ ಹೊರತಾಗಿಯೂ, ಆರ್‌ಸಿಬಿ ತಂಡ ಕಳೆದ ಲೀಗ್‌ನಲ್ಲಿ ಒಟ್ಟಾರೆಯಾಗಿ 6ನೇ ಸ್ಥಾನದೊಂದಿಗೆ ನಿರಾಶಾದಾಯಕವಾಗಿ ತಮ್ಮ ಅಭಿಯಾನವನ್ನು ಕೊನೆಗೊಳಿಸಿತು.

ಆರ್‌ಸಿಬಿ ತಂಡವು 2023ರ ನಿರಾಶಾದಾಯಕ ಆವೃತ್ತಿಯಿಂದ ಪುಟಿದೇಳಲು ಮತ್ತು ಮಾರ್ಚ್ 22ರಂದು ಚೆಪಾಕ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ 2024ರ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಗೆಲುವಿನೊಂದಿಗೆ ಪ್ರಾರಂಭಿಸಲು ನೋಡುತ್ತಿದೆ.

Story first published: Tuesday, March 19, 2024, 22:25 [IST]
Other articles published on Mar 19, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+