IPL 2024: ಪ್ಲೇಆಫ್‌ಗೂ ಮುನ್ನ ಪಂದ್ಯಾವಳಿ ತೊರೆದ ಆಂಗ್ಲ ಆಟಗಾರರ ವಿರುದ್ಧ ಕೆಂಡಕಾರಿದ ಮಾಜಿ ಕ್ರಿಕೆಟಿಗ
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಪ್ಲೇಆಫ್ ಪಂದ್ಯಗಳಿಗೂ ಮೊದಲೇ ಟೂರ್ನಿ ತೊರೆದಿದ್ದಕ್ಕಾಗಿ ಇಂಗ್ಲೆಂಡ್ ಆಟಗಾರರ ವಿರುದ್ಧ ಭಾರತೀಯ ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ.
ಅರ್ಧದಲ್ಲೇ ಬಿಟ್ಟು ತವರಿಗೆ ಮರಳಿದ ಆಂಗ್ಲ ಆಟಗಾರರ ವಿರುದ್ಧ ಈ ಮೊದಲು ಸುನಿಲ್ ಗವಾಸ್ಕರ್ ಅವರ ಕಟುವಾದ ಟೀಕೆಯ ನಂತರ, ಇದೀಗ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟೀಕಿಸಿದರು.

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಜೋಸ್ ಬಟ್ಲರ್ ಅನುಪಸ್ಥಿತಿಯಲ್ಲಿ ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯವನ್ನು ಪೂರ್ಣಗೊಳಿಸಿದ ನಂತರ, ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ. ಆಂಗ್ಲ ಆಟಗಾರರು ಪಾಕಿಸ್ತಾನ ವಿರುದ್ಧದ ಟಿ20 ಸರಣಿಗೂ ಮುನ್ನ ತಮ್ಮ ರಾಷ್ಟ್ರೀಯ ತಂಡಕ್ಕೆ ಸೇರಲು ತೆರಳಿದರು.
ಟಿ20 ವಿಶ್ವಕಪ್‌ಗೆ ತಯಾರಿ ಮಾಡುವ ಪ್ರಯತ್ನದಲ್ಲಿ ಇಂಗ್ಲೆಂಡ್ ಟಿ20 ಸರಣಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ. ಮೇ 16ರಂದು ಸ್ಯಾಮ್ ಕರ್ರಾನ್ ಮತ್ತು ಜಾನಿ ಬೈರ್‌ಸ್ಟೋವ್ ಕೂಡ ಜೊತೆಗೂಡಲಿದ್ದಾರೆ. ತಾನು ಮತ್ತು ಜಾನಿ ಬೈರ್‌ಸ್ಟೋವ್ ಗುರುವಾರ ತವರಿಗೆ ಹಿಂತಿರುಗಲಿದ್ದೇವೆ ಎಂದು ಸ್ಯಾಮ್ ಕರ್ರಾನ್ ಹೇಳಿದರು.
ಕೆಕೆಆರ್ ತಂಡವು ಐಪಿಎಲ್ ಪ್ಲೇಆಫ್‌ಗೆ ಮುಂಚಿತವಾಗಿ ಫಿಲ್ ಸಾಲ್ಟ್ ಅವರನ್ನು ತಪ್ಪಿಸಿಕೊಂಡಿತು. ಇದಕ್ಕಾಗಿ ಸುನಿಲ್ ಗವಾಸ್ಕರ್ ಅವರು ಪ್ರಸಕ್ತ ಐಪಿಎಲ್ ಪಂದ್ಯಾವಳಿಯಿಂದ ಬೇಗನೆ ಹಿಂದೆ ಸರಿಯುವ ಆಟಗಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಇಂಗ್ಲೆಂಡ್ ಆಟಗಾರರು ಪೂರ್ಣ ಆವೃತ್ತಿಯಲ್ಲಿ ಉಳಿಯದಿದ್ದಕ್ಕಾಗಿ ದಂಡ ವಿಧಿಸಬೇಕೆಂದು ಭಾರತೀಯ ಲೆಜೆಂಡ್ ಬ್ಯಾಟರ್ ಸುನಿಲ್ ಗವಾಸ್ಕರ್ ಕರೆ ನೀಡಿದ್ದರು.
"ಬೇರೆ ಯಾವುದೇ ತಂಡಕ್ಕೂ ಮೊದಲು ದೇಶವನ್ನು ಆಯ್ಕೆ ಮಾಡುವ ಆಟಗಾರರಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಆದರೆ ಪೂರ್ಣ ಆವೃತ್ತಿಗಾಗಿ ವಿವಿಧ ಫ್ರಾಂಚೈಸಿಗಳು ತಮ್ಮ ಲಭ್ಯತೆಯ ಬಗ್ಗೆ ಭರವಸೆ ನೀಡಿರುವುದರಿಂದ, ಆಟಗಾರರು ಈಗ ಹೊರನಡೆದರೆ ಅದು ಫ್ರಾಂಚೈಸಿಗಳನ್ನು ನಿರಾಸೆಗೊಳಿಸುತ್ತದೆ".
"ಫ್ರಾಂಚೈಸಿಗಳು ಆಟಗಾರನನ್ನು ಖರೀದಿಸಿದ ಶುಲ್ಕದಿಂದ ಗಣನೀಯ ಮೊತ್ತವನ್ನು ಕಡಿತಗೊಳಿಸಲು ಮಾತ್ರ ಅನುಮತಿಸಬಾರದು. ಆದರೆ ಆಟಗಾರನು ಸೇರಿರುವ ರಾಷ್ಟ್ರೀಯ ಮಂಡಳಿಗೆ ಪ್ರತಿ ಆಟಗಾರನು ಪಡೆಯುವ ಶುಲ್ಕದ 10 ಪ್ರತಿಶತ ಕಮಿಷನ್ ಅನ್ನು ನೀಡಬಾರದು," ಎಂದು ಭಾರತೀಯ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

ಇನ್ನು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್, ಆಟಗಾರರು ಪೂರ್ಣ ಆವೃತ್ತಿಯಲ್ಲಿ ಉಳಿದು ಆಡಬೇಕು ಅಥವಾ ಅರ್ಧಕ್ಕೆ ತೆರಳುವುದಿದ್ದರೆ ಬರಬಾರಲೇಬಾರದು ಎಂದು ಹೇಳಿದ್ದಾರೆ. "ಒಂದೋ ಪೂರ್ಣ ಋತುವಿಗೆ ಲಭ್ಯವಿರಲಿ ಅಥವಾ ಬರಲೇಬೇಡಿ!" ಎಂದು ಇರ್ಫಾನ್ ಪಠಾಣ್ ಬರೆದುಕೊಂಡಿದ್ದಾರೆ.
ಫ್ರಾಂಚೈಸಿಗಳು ಇಂಗ್ಲೆಂಡ್ ಆಟಗಾರರನ್ನು ಏಕೆ ಮಿಸ್ ಮಾಡಿಕೊಳ್ಳುತ್ತಾರೆ?
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರಸಕ್ತ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿತು. ಮುಖ್ಯವಾಗಿ ಫಿಲ್ ಸಾಲ್ಟ್ ಅವರ ಬ್ಯಾಟಿಂಗ್ ಪ್ರದರ್ಶನಗಳು ಮತ್ತು ಸುನಿಲ್ ನರೈನ್ ಜೊತೆಗಿನ ಜೊತೆಯಾಟದಿಂದಾಗಿ ಪ್ರಭಾವ ಬೀರಿದ್ದಾರೆ. ಈ ಋತುವಿನಲ್ಲಿ ಕೆಕೆಆರ್ ಪರ 12 ಪಂದ್ಯಗಳಲ್ಲಿ ಫಿಲ್ ಸಾಲ್ಟ್ 435 ರನ್ ಗಳಿಸಿದ್ದಾರೆ.
ಗುವಾಹಟಿ ಪಿಚ್‌ನಲ್ಲಿ ಬ್ಯಾಟಿಂಗ್ ವೈಫಲ್ಯದ ಕಾರಣ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ಸೋಲಿನಲ್ಲಿ ಜೋಸ್ ಬಟ್ಲರ್ ಅನುಪಸ್ಥಿತಿ ಕಾಡಿತು.
ಇನ್ನು ಬ್ಯಾಟಿಂಗ್‌ನಲ್ಲಿ 63 ರನ್ ಗಳಿಸಿ 2 ವಿಕೆಟ್ ಪಡೆದ ಸ್ಯಾಮ್ ಕರ್ರಾನ್, ಮೇ 19ರಂದು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲು ಪಂಜಾಬ್ ಕಿಂಗ್ಸ್ ತಂಡ ಹೈದರಾಬಾದ್‌ಗೆ ಪ್ರಯಾಣಿಸಿದಾಗ ಅಲಭ್ಯರಾಗಲಿದ್ದಾರೆ.
ಅಲ್ಲದೆ, ವಿಲ್ ಜ್ಯಾಕ್ಸ್ ಮತ್ತು ರೀಸ್ ಟೋಪ್ಲೆ ಕೂಡ ಇಂಗ್ಲೆಂಡ್‌ಗೆ ಮರಳಿರುವ ಕಾರಣ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಹಿನ್ನಡೆಯಾಗಲಿದೆ. ಮೇ 18ರಂದು ಸಿಎಸ್‌ಕೆ ತಂಡವನ್ನು ಎದುರಿಸುವಾಗ ಆರ್‌ಸಿಬಿ ತಂಡ ಇಬ್ಬರು ಆಂಗ್ಲ ಆಟಗಾರರ ಸೇವೆಯನ್ನು ಕಳೆದುಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications