Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: SRH ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಇರ್ಫಾನ್‌ ಪಠಾಣ

ಕೆಲವೇ ವಾರಗಳಲ್ಲಿ ಐಪಿಎಲ್ 2024 ಆರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳ ಉತ್ಸಾಹವೂ ಹೆಚ್ಚಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ಸನ್‌ರೈಸರ್ಸ್ ಹೈದರಾಬಾದ್‌ ಅತಿ ಹೆಚ್ಚು ಸುದ್ದಿಯಲ್ಲಿದೆ. ತಂಡ ಬೌಲಿಂಗ್ ಕೋಚ್ ಹಾಗೂ ನಾಯಕನನ್ನು ಬದಲಿಸಿತು.

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಮೊದಲು ನಾಯಕ ಐಡೆನ್‌ ಮಾರ್ಕ್‌ರಮ್‌ ಅವರನ್ನು ಘೋಷಿಸಿತ್ತು. ಅಲ್ಲದೆ ಸೋಮವಾರ ಹೈದರಾಬಾದ್‌ ತಂಡ ತನ್ನ ನೂತನ ಕ್ಯಾಪ್ಟನ್‌ ಹೆಸರನ್ನು ಪ್ರಕಟಿಸಿತು. ಕಳೆದ ಒಂದು ವರ್ಷದಲ್ಲಿ ಆಸ್ಟ್ರೇಲಿಯಾ WTC ಫೈನಲ್ ಮತ್ತು ODI ವಿಶ್ವಕಪ್ ಫೈನಲ್ ಅನ್ನು ಗೆಲ್ಲುವಂತೆ ಮಾಡಿದ ಅದೇ ಆಟಗಾರ ಕಮ್ಮಿನ್ಸ್.

IPL 2024 Irfan Pathan objects to SRH s decision

ಈ ಸಾಧನೆಗಳ ಹೊರತಾಗಿಯೂ, ಕಮ್ಮಿನ್ಸ್ ಅವರನ್ನು ಎಸ್‌ಆರ್‌ಹೆಚ್‌ನ ನಾಯಕರನ್ನಾಗಿ ಮಾಡುವ ನಿರ್ಧಾರಕ್ಕೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಇತರ ಸ್ವರೂಪಗಳಲ್ಲಿ ಪ್ಯಾಟ್ ಕಮಿನ್ಸ್ ಅವರ ಪ್ರದರ್ಶನ ಉತ್ತಮವಾಗಿದೆ, ಆದರೆ ಅವರು ಟಿ 20 ನಲ್ಲಿ ಹೆಚ್ಚಿನ ಪ್ರಭಾವ ಬೀರಲಿಲ್ಲ ಎಂದು ಹೇಳಿದ್ದಾರೆ.

"ಕಮ್ಮಿನ್ಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಅವರು ಇತ್ತೀಚೆಗೆ ಆಸ್ಟ್ರೇಲಿಯಾವನ್ನು ಚಾಂಪಿಯನ್ ಮಾಡಿದ್ದಾರೆ. ಇಲ್ಲಿ ಸಮಸ್ಯೆ ಏನೆಂದರೆ ಟಿ20 ಮಾದರಿಯಲ್ಲಿ ನಾಯಕತ್ವದ ವಿಚಾರದಲ್ಲಿ ಕಮ್ಮಿನ್ಸ್ ಹೆಚ್ಚಿನ ಸಾಧನೆ ಮಾಡಿಲ್ಲ. ಅಂತಾರಾಷ್ಟ್ರೀಯ ಟಿ20 ಮತ್ತು ಐಪಿಎಲ್‌ನಲ್ಲಿ ಅವರ ಪ್ರದರ್ಶನ ಉತ್ತಮವಾಗಿಲ್ಲ" ಎಂದು ತಿಳಿಸಿದ್ದಾರೆ.

IPL 2024 Irfan Pathan objects to SRH s decision

ಏಡನ್ ಮಾರ್ಕ್ರಾಮ್ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಇರ್ಫಾನ್ ಪಠಾಣ್, ಪ್ಯಾಟ್ ಕಮ್ಮಿನ್ಸ್ ಅವರನ್ನು ನಾಯಕನನ್ನಾಗಿ ಮಾಡುವುದು ದೊಡ್ಡ ಸವಾಲಾಗಿದೆ. SRH ನಿರ್ವಹಣೆಯ ಚಿಂತನೆ ಏನು? ಅವರನ್ನು ಕೇವಲ ಒಂದು ಸೀಸನ್‌ಗೆ ಮಾತ್ರ ನಾಯಕನನ್ನಾಗಿ ಮಾಡಿ ಈಗ ಹೀಗೆ ಕಡೆಗಣಿಸಲಾಗುತ್ತಿದೆಯೇ?

ಸನ್‌ರೈಸರ್ಸ್ ಹೈದರಾಬಾದ್ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 4 ರಲ್ಲಿ ಮಾತ್ರ ಗೆದ್ದು, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಐಪಿಎಲ್ 2024 ಗಾಗಿ ಎಸ್‌ಆರ್‌ಹೆಚ್ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಇದೂ ಒಂದು ಕಾರಣ. ಕಳೆದ ವರ್ಷ, SRH ತನ್ನ ಮುಖ್ಯ ತರಬೇತುದಾರನನ್ನು ಬದಲಾಯಿಸಿತು ಮತ್ತು ಈ ಹುದ್ದೆಯನ್ನು ಡೇನಿಯಲ್ ವೆಟ್ಟೋರಿಗೆ ಹಸ್ತಾಂತರಿಸಿತು.

Story first published: Tuesday, March 5, 2024, 14:53 [IST]
Other articles published on Mar 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+